ಗುಂಡಿ ಸರಿಯಾಗಬಹುದು; ಸಮಸ್ಯೆಯಲ್ಲ!

Picture of RB NEWS

RB NEWS

Bureau Report

ಯಥಾ ಪ್ರಕಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಎಂಜಿನಿಯರ್‌ಗಳ ಜೊತೆ ಗುರುವಾರ ಸಂಜೆ ಸಭೆ ನಡೆದಿದೆ.
ಹೆದ್ದಾರಿಯ ಸಮಸ್ಯೆ ಪರಿಹಾರಕ್ಕೆ ಮೂರು ಇಲಾಖೆಗಳು ಜೊತೆಗೂಡಿ ಕಾರ್ಯಪ್ರವೃತ್ತವಾಗಬೇಕು ಎಂದು ಸೂಚಿಸಿದ ಸಂಸದರು ಸುರತ್ಕಲ್‌-ಬಿಸಿ ರೋಡ್ ವರೆಗಿನ ರಸ್ತೆ ಈಗ ರಾಷ್ಟ್ರೀಯ ಹೆದ್ದಾರಿಯ ಗುಣಮಟ್ಟ ಹೊಂದಿಲ್ಲ. ಈ ರಸ್ತೆಯನ್ನು ಮೇಲ್ದರ್ಜೆಗೇರಿಸಲು ಮತ್ತು 35 ಕಿಮೀ ಬೈಪಾಸ್ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಕೆಲವೇ ತಿಂಗಳಲ್ಲಿ ಕಾಮಗಾರಿಯ ಸ್ಪಷ್ಟ ಚಿತ್ರಣ ಲಭಿಸಲಿದೆ. ಒಟ್ಟು 11 ಕಿಮೀ ಮರುಡಾಂಬರೀಕರಣ ಸದ್ಯದಲ್ಲೇ ಆಗಲಿದೆ ಎಂದರು.
ಗುಂಡಿಗಳನ್ನು ಮುಚ್ಚುವ ಕಾರ್ಯ ಒಂದು ವಾರದಲ್ಲಿ ಮುಗಿಯಲಿದ್ದು ಅಕ್ಟೋಬರ್ ಮೊದಲ ವಾರದಿಂದ ಮರುಡಾಂಬರೀಕರಣ ನಡೆಯಲಿದೆ ಎಂದು ಟೆಂಡರ್ ಪಡೆದುಕೊಂಡಿರುವ ಮುಗರೋಡಿ ಕನ್‌ಸ್ಟ್ರಕ್ಷನ್ಸ್‌ನ ಸುಧಾಕರ ಶೆಟ್ಟಿ ತಿಳಿಸಿದರು.
ಅಲ್ಲಿಗೆ ಸಭೆ ಮುಕ್ತಾಯವಾಗಿದೆ.

ಮೊನ್ನೆ ಮೊನ್ನೆ ಹೆದ್ದಾರಿಯ ಅವ್ಯವಸ್ಥೆಗೆ ಬಲಿಯಾದ ಮಾಧವಿಯಂಥ ಹೆಣ್ಣುಮಗಳ ನೆನಪು ಕೂಡಾ ನಮಗೆ ಇರುವುದಿಲ್ಲ. ಯಾಕೆಂದರೆ ರಸ್ತೆಯ ಅವ್ಯವಸ್ಥೆ ಗೆ ಪ್ರತೀ ವರ್ಷ ಅಮಾಯಕರು ಸಾಯುತ್ತಾರೆ. ಪ್ರತೀ ಮಳೆಗಾಲದ ನಂತರ ಗುಂಡಿಗಳು ಬಿದ್ದೇ ಬೀಳುತ್ತವೆ. ಹತ್ತು ವರ್ಷಗಳ,ಇಪ್ಪತ್ತು ವರ್ಷಗಳ ಹಿಂದಿನ ಪತ್ರಿಕೆ ತೆಗೆದು ನೋಡಿ ಬೇಕಾದರೆ ಹೊಂಡ,ಗುಂಡಿಗಳು ಸಾಮಾನ್ಯ.ಇದರ ಅರ್ಥವೇನು? ತುಂಬಾ ಸಿಂಪಲ್, ಜನಪ್ರತಿನಿಧಿಗಳು ಬದಲಾಗಬಹುದು,ಆದರೆ ಈ ವ್ಯವಸ್ಥೆ ಬದಲಾಗುವುದಿಲ್ಲ! ಇದೊಂದು ಗುತ್ತಿಗೆದಾರ ಮತ್ತು ಹೆದ್ದಾರಿ ಇಲಾಖೆಯ ಭ್ರಷ್ಟರು ಸೇರಿಕೊಂಡು ಮಾಡಿದ ವ್ಯವಸ್ಥೆ. ನಾನು ಬಡಿದಂತೆ ಮಾಡ್ತೇನೆ,ನೀನು ಅತ್ತಂತೆ ನಟಿಸು ಅಷ್ಟೇ.ವರ್ಷ ವರ್ಷವೂ ರಸ್ತೆಗೆ ತೇಪೆ,ಡಾಂಬರೀಕರಣ ಹೆಸರಲ್ಲಿ ಕೋಟ್ಯಂತರ ರುಪಾಯಿ ಹಣವನ್ನು ಎಲ್ಲಿಂದ ತಂದು ಸುರಿಯುತ್ತೀರಿ? ಇದಕ್ಕೂ ಉತ್ತರ ಸರಳವಿದೆ.ನಮ್ಮ,ನಿಮ್ಮಂಥವರು ವಾಹನ ಖರೀದಿಸಿ ಅದನ್ನು ರಸ್ತೆಗೆ ಇಳಿಯುವ ಮೊದಲೇ ರೋಡ್ ಟ್ಯಾಕ್ಸ್ ಹೆಸರಲ್ಲಿ ಸಾವಿರಾರು ರುಪಾಯಿ ಕೊಟ್ಟಿರುತ್ತೇವೆಯಲ್ಲ,ಇದು ಸಾಲದು ಎಂಬಂತೆ ಟೋಲ್ ಬೇರೆ. ಪ್ರತೀ ವರ್ಷ ರಸ್ತೆಗಳಲ್ಲಿ ಗುಂಡಿ ಯಾಕೆ ಬೀಳುತ್ತದೆ ಎಂಬ ಪ್ರಶ್ನೆಗೆ ಇಲ್ಲಿ ಯಾರೂ ಉತ್ತರ ಕೊಡುವುದಿಲ್ಲ.ಈ ಬಗ್ಗೆ ಚರ್ಚೆಯೂ ನಡೆಯುವುದಿಲ್ಲ. ಯಾಕೆಂದರೆ ನಮಗೆ ಹಿಂದೂ ಮುಸ್ಲಿಂ ಗಲಭೆಯಾದರೆ ಮಾತ್ರ ನಮ್ಮ ರಾಜಕಾರಣಿಗಳು ಅಲರ್ಟ್ ಆಗುತ್ತಾರೆ. ಕಿವಿಯ ತಮಟೆ ಹರಿದುಹೋಗಿ ಎದೆಯೊಡೆದು ಸತ್ತರೂ ನಮಗೆ ಡಿ.ಜೆ ಬೇಕು ಅದಕ್ಕೆ ಕಾಂಗ್ರೆಸನ್ನು ದೂರಿ ಬೀದಿಗಿಳಿಯುತ್ತೇವೆ. ಅದೇ ಮನೆಕಟ್ಟಲು ಕಲ್ಲು,ಜಲ್ಲಿ ಮರಳು ಇಲ್ಲದೆ ಬೀದಿಗೆ ಬಿದ್ದವರ ಪರ ನಾವು ದಂಗೆ ಏಳುವುದಿಲ್ಲ. ಕಳಪೆ ಕಾಮಗಾರಿ ನಡೆಸಿ ಕೋಟ್ಯಂತರ ದುಡ್ಡು ಹೊಡೆಯುವ ಹಳೆ ಸಂಸದನ ಜಿಗ್ರಿ ದೋಸ್ತ್ ಗಳಿಗೇ ಮತ್ತೆ ಕಳಪೆ ರಸ್ತೆ ನಿರ್ಮಿಸಲು ಅನುಮತಿ ಸಿಗುತ್ತದೆ.
ಫೇಸ್ ಬುಕ್ ನಲ್ಲಿ ಯಾವುದೇ ತೆವಲಿಗೆ ಬರೆಯುವ ಪೋಸ್ಟ್ ಗೆ ಇಲ್ಲಿ ಪೊಲೀಸ್ ಇಲಾಖೆ ಸುಮೋಟೊ ಕೇಸ್ ಜಡಿದು ಕಿಡಿಗೇಡಿಗಳನ್ನು ಕಂಬಿಯ ಹಿಂದೆ ಹಾಕಬಹುದಾದರೆ ಅಮಾಯಕರ ಜೀವ ಅಪಘಾತದ ಹೆಸರಿನಲ್ಲಿ ಹೋಗುವಾಗ ರಸ್ತೆ ಮಾಡಿದ ಗುತ್ತಿಗೆದಾರ,ಹೆದ್ದಾರಿ ಇಲಾಖೆಯ ಇಂಜಿನಿಯರುಗಳ ಮೇಲೆ ಕೇಸು ಜಡಿದು ಅವರಿಂದ ಪರಿಹಾರ ಧನ ಕಕ್ಕಿಸುವುದು ಸಾಧ್ಯವಿಲ್ಲವೇ?
ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಓಟು ಬೀಳುವುದಿಲ್ಲ ಎಂದು ಕಾಂಗ್ರೆಸ್ ನಮ್ಮ ಧ್ವನಿ ಕೇಳದಿರುವಾಗ ಬಿಜೆಪಿ ಏನು ಮಾಡುತ್ತಿದೆ? ಸಿ.ಡಿ ಬಿಡುಗಡೆಯಾಗದಂತೆ ನೋಡಿಕೊಳ್ಳುವುದರಲ್ಲಿ ಮಾತ್ರವಲ್ಲ, ಜನಪರ ಕೆಲಸಕ್ಕೂ ಬಳಸಿಕೊಳ್ಳಿ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top