ಗುಂಡಿ ಸರಿಯಾಗಬಹುದು; ಸಮಸ್ಯೆಯಲ್ಲ!
“ಶಬರಿ”
ಯಥಾ ಪ್ರಕಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಎಂಜಿನಿಯರ್ಗಳ ಜೊತೆ ಗುರುವಾರ ಸಂಜೆ ಸಭೆ ನಡೆದಿದೆ.
ಹೆದ್ದಾರಿಯ ಸಮಸ್ಯೆ ಪರಿಹಾರಕ್ಕೆ ಮೂರು ಇಲಾಖೆಗಳು ಜೊತೆಗೂಡಿ ಕಾರ್ಯಪ್ರವೃತ್ತವಾಗಬೇಕು ಎಂದು ಸೂಚಿಸಿದ ಸಂಸದರು ಸುರತ್ಕಲ್-ಬಿಸಿ ರೋಡ್ ವರೆಗಿನ ರಸ್ತೆ ಈಗ ರಾಷ್ಟ್ರೀಯ ಹೆದ್ದಾರಿಯ ಗುಣಮಟ್ಟ ಹೊಂದಿಲ್ಲ. ಈ ರಸ್ತೆಯನ್ನು ಮೇಲ್ದರ್ಜೆಗೇರಿಸಲು ಮತ್ತು 35 ಕಿಮೀ ಬೈಪಾಸ್ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಕೆಲವೇ ತಿಂಗಳಲ್ಲಿ ಕಾಮಗಾರಿಯ ಸ್ಪಷ್ಟ ಚಿತ್ರಣ ಲಭಿಸಲಿದೆ. ಒಟ್ಟು 11 ಕಿಮೀ ಮರುಡಾಂಬರೀಕರಣ ಸದ್ಯದಲ್ಲೇ ಆಗಲಿದೆ ಎಂದರು.
ಗುಂಡಿಗಳನ್ನು ಮುಚ್ಚುವ ಕಾರ್ಯ ಒಂದು ವಾರದಲ್ಲಿ ಮುಗಿಯಲಿದ್ದು ಅಕ್ಟೋಬರ್ ಮೊದಲ ವಾರದಿಂದ ಮರುಡಾಂಬರೀಕರಣ ನಡೆಯಲಿದೆ ಎಂದು ಟೆಂಡರ್ ಪಡೆದುಕೊಂಡಿರುವ ಮುಗರೋಡಿ ಕನ್ಸ್ಟ್ರಕ್ಷನ್ಸ್ನ ಸುಧಾಕರ ಶೆಟ್ಟಿ ತಿಳಿಸಿದರು.
ಅಲ್ಲಿಗೆ ಸಭೆ ಮುಕ್ತಾಯವಾಗಿದೆ.




































