ಕಲ್ಲಡ್ಕ ಇಸ್ಮಾಯಿಲ್ ಹತ್ಯೆ ಪ್ರಕರಣ: ಉಡುಪಿಯಲ್ಲೂ ನಡೆದಿತ್ತು ತನಿಖೆ

Picture of RB NEWS

RB NEWS

Bureau Report

ಭಾಗ-20


ತಾ. 17-9-76ರಂದು ನಾನು ಉಡುಪಿಗೆ ಹೋಗಿ ಅಲ್ಲಿನ ಪೊಲೀಸ್ ಅಧಿಕಾರಿಗಳೊಡನೆ ಈ ಕೇಸಿನ ಕುರಿತು ವಿಚಾರ ವಿನಿಮಯ ನಡೆಸಿದೆ.

ಅಲ್ಲಿ ಕಾಫಿಪೋಸಾದಲ್ಲಿ ದಸ್ತಗಿರಿಯಾದವರ ಬಗ್ಗೆ ವಿಚಾರಿಸಿದೆ. ಅಲ್ಲಿಯ ಪೊಲೀಸ್ ಠಾಣೆಗಳಲ್ಲಿ ಕೇಸು ದಾಖಲಾದ ರೌಡಿಗಳ ಬಗ್ಗೆಯೂ ತನಿಖೆ ನಡೆಸಿದೆ. ಅದರಿಂದ ಅರ‍್ಯಾರಿಗೂ ಇಸ್ಮಾಯಿಲ್‌ರವರ ಕೊಲೆಗೂ ಯಾವ ಸಂಬಂಧವೂ ಇಲ್ಲವೆಂಬುದು ನನಗೆ ಖಚಿತವಾಯಿತು.

ಅಲ್ಲಿಂದ ಬಂಟ್ವಾಳಕ್ಕೆ ಮರಳಿ ಬಂದು ಬಂಟ್ವಾಳದಲ್ಲಿ ಡ್ರೈವರ್ ಚಲನವಲನಗಳ ಬಗ್ಗೆ ತನಿಖೆ ನಡೆಸಿದೆ. ಅನಂತರ ಮಂಗಳೂರಿಗೆ ಹೋಗಿ ಮೇಲೆ ಹೇಳಿದ ನಂಬ್ರ 5471ನೇ ಅಂದರೆ ಅಂಚೆ ಮತ್ತು ತಂತಿ ಇಲಾಖೆಗೆ ಸೇರಿದ ಜೀಪಿನ ಡ್ರೈವರ್ ಹರಿಶ್ಚಂದ್ರ ಅವರ ಬಗ್ಗೆ ತನಿಖೆ ನಡೆಸಿದೆ’ ಎಂದವರು ವಿವರಿಸಿದರು.

ತಾ. 18-9-76ರಲ್ಲಿ ಸಬ್ ಇನ್ಸ್ ಪೆಕ್ಟರ್ ಉತ್ತಯ್ಯರವರನ್ನು ಹಾಸನದ ಕಡೆಗೆ ಜೀಪುಗಳ ವಿಷಯ ಹಾಗೂ ಪೆಟ್ರೋಲ್ ಬಂಕ್‌ಗಳ ವಿಷಯ ತನಿಖೆ ಮಾಡಲು ಕಳುಹಿಸಿದೆ. ಅದರಂತೆ ತಾ. 19-9-76 ಮತ್ತು 20-9-76ರಂದು ಬೇರೆ ಬೇರೆ ಕಡೆಗಳಿಗೆ ಹೋಗಿ ತನಿಖೆ ನಡೆಸಿದೆ. ತಾ. 22-9-76ರಂದು ಸರಪಾಡಿ, ಕಡೇಶ್ವಾಲ್ಯಗಳಿಗೆ ಹೋಗಿ ನೇತ್ರಾವತಿ ನದಿಯಲ್ಲಿ ನಡೆಸುವ ದೋಣಿ ಮಾಲಕರನ್ನು ಪ್ರಶ್ನಿಸಿದೆ’ ಎಂದವರು ತಿಳಿಸಿದರು.


ತಾ. 23-9-76ರಲ್ಲಿ, ತಾ. 4-9-76ರಂದು ಮೃತ ಇಸ್ಮಾಯಿಲ್ ಅವರ ಅಂಗಡಿಗೆ ಬಂದು ತಾ. 1-9-76ರ “ಡೆಕ್ಕನ್ ಹೆರಾಲ್ಡ್” ಕೇಳಿದ್ದ ಅರಸೀಕೆರೆಯ ಹಾಲಪ್ಪನವರನ್ನು ತಪಾಸಣೆ ಮಾಡಿ ಕಳುಹಿಸಿಕೊಡುವಂತೆ ಅರಸೀಕೆರೆ ಪೊಲೀಸ್ ಠಾಣೆಗೆ ಫೋನ್ ಮೂಲಕ ತಿಳಿಸಿದೆ. ತಾ. 4-9-76ರಂದು ಕಲ್ಲಡ್ಕದಲ್ಲಿ ಮೇಲೆ ಹೇಳಿದ ಹಾಲಪ್ಪನವರ ಜತೆಯಲ್ಲಿದ್ದ ಸನ್ಯಾಸಿಯೊಬ್ಬರನ್ನು ಸಬ್ ಇನ್ಸ್ ಪೆಕ್ಟರ್ ಉತ್ತಯ್ಯನವರು ನನ್ನ ಮುಂದೆ ಹಾಜರುಪಡಿಸಿದಾಗ ಅವರನ್ನು ಕೂಲಂಕಷವಾಗಿ ಪ್ರಶ್ನಿಸಿದೆ. ಆದರೆ ಅವರ ಮೇಲೆ ಯಾವ ತರದ ಸಂಶಯಕ್ಕೂ ಎಡೆ ಬರಲಿಲ್ಲ’ ಎಂದು ಅವರು ವಿವರಿಸಿದರು.


ತಾ. 24-9- 76ರಲ್ಲಿ ಅಬ್ದುಲ್ಲಾ, ಗೋಪಾಲ ಶೆಟ್ಟಿಗಾರ, ದಾನಪ್ಪ ಶೆಟ್ಟಿಗಾರ,, ಪೊಡಿಯ ಬ್ಯಾರಿ, ಇಬ್ರಾಹಿಂ, ದೇಜಪ್ಪ ಪೂಜಾರಿ, ಅಬುಬಕ್ಕರ್ ಬ್ಯಾರಿ ಮತ್ತಿತರರನ್ನು ತಾವು ಪ್ರಶ್ನಿಸಿದುದಾಗಿಯೂ ಸರಪಾಡಿಗೆ ಹೋಗಿ ಹಸನಬ್ಬ ಮೊದಲಾದವರ ಹೇಳಿಕಸಗಳನ್ನು ಪಡೆದುದಾಗಿಯೂ, ತಾ. 25-9-76ರಂದು ತಮ್ಮ ಮುಂದೆ ಹಾಜರುಪಡಿಸಲಾದ ಅರಸೀಕೆರೆಯ ಹಾಲಪ್ಪನವರನ್ನು ಕೂಲಂಕಷವಾಗಿ ವಿಚಾರಿಸಿದಾಗ ಅವರಿಗೂ ಈ ಕೇಸಿಗೂ ಯಾವುದೇ ಸಂಬಂಧವೂ ಇಲ್ಲವೆಂದು ಖಚಿತವಾಯಿತೆಂದೂ ಸಿದ್ದಲಿಂಗಪ್ಪ ಅವರು ತಿಳಿಸಿದರು.


ಪುರಂದರ ಭಟ್ಟರು ಸ್ವ ಇಚ್ಛೆಯಿಂದ ಒಂದು ಹೇಳಿಕೆಯನ್ನು ಕೊಡಲು ಬಯಸಿದ ಮೇರೆಗೆ ಅದನ್ನು ಬರೆದುಕೊಳ್ಳಲಾಯಿತೆಂದು ಹೇಳಿದ ತನಿಖಾಧಿಕಾರಿಯವರು ಆ ಹೇಳಿಕೆಯಲ್ಲಿ ಉಳಿದ ಬೈಂಡಿAಗ್ ವಯರ್ , ನೈಲಾನ್ ಹಗ್ಗ, ಉಳಿದ ಬಿಳಿ ಪೈಂಟ್, ಉಳಿದ ಹುರಿಹಗ್ಗ, ಉಳಿದ ಖಾಕಿ ಬಟ್ಟೆ, ಹೊಲಿಗೆ ಯಂತ್ರದಭಾಗಗಳು ಮೊದಲಾದವುಗಳನ್ನು ಪುರಂದರ ಭಟ್ಟರು ಒಪ್ಪಿದ್ದರೆಂದು ಹೇಳಿದರು.
ತಾ. 21-2-77ರಂದು ಪುರಂದರ ಭಟ್ಟರು ತಮ್ಮನ್ನು ಮತ್ತು ಸಾಕ್ಷಿಗಳನ್ನು ಅವರ ಹೇಳಿಕೆಯಲ್ಲಿ ಹೇಳಿದ ಸ್ಥಳಗಳಿಗೆ ಕರೆದುಕೊಂಡು ಹೋದುದನ್ನೂ, ಅಲ್ಲಿ ದೊರಕಿದ ವಸ್ತುಗಳ ವಿವರಗಳನ್ನೂ, ಆ ಸಂಬAಧ ತಾವು ನಡೆಸಿದ ಪ್ರಯತ್ನಗಳನ್ನೂ ಅವರು ವಿವರಿಸಿದರು.
ತಾ. 26-2-77ರಂದು 1ನೇ ಆರೋಪಿ ಶ್ರೀಧರ ಭಟ್ಟರ ದೇಹದ ಅಳತೆಗಳನ್ನು ಟೈಲರ್ ಮೂಲಕ ತೆಗೆದುಕೊಳ್ಳಲಾಯಿತಲ್ಲದೆ ಅವರ ಲಿಖಿತ ಮಾದರಿ ಕೈಬರಹವನ್ನು ಪಡೆಯಲಾಯಿತೆಂದೂ, ತಾ. 27-2-77ರಂದು ಆರೋಪಿ ಪುರಂದರ ಭಟ್ಟರ ದೇಹದ ಅಳತೆಗಳನ್ನು ಪಡೆಯಲಾಯಿತಲ್ಲದೆ, ಆ ಬಳಿಕ ಸಾಕ್ಷಿ ಮುತ್ತಪ್ಪ ಪೂಜಾರಿ ಮತ್ತಿತರರ ಸಂಗಡ ಬಡಕಾಯಿಕೊಂಬಿಗೆ ಹೋಗಿ ಅಲ್ಲಿ ಪುರಂದರ ಭಟ್ಟರ ಮನೆಯನ್ನು ಹುಡುಕಾಡಿ ಈ ಕೇಸಿನಲ್ಲಿ ಈ ಮೊದಲೇ ಗುರುತಿಸಲಾದ ತಾ. 4-6-75ನೇ ತಾರೀಕಿನ, 24-8-75ನೇ ತಾರೀಕಿನ ಹಾಗೂ ತಾ. 20-8-75ನೇ ತಾರೀಕಿನ ಪತ್ರಗಳನ್ನು, ಹೆಲ್ಮೆಟನ್ನು, ಜರ್ಕಿನ್‌ನ್ನು ರೆಕಾರ್ಡ್ ಮೂಲಕ ಸ್ವಾಧೀನಪಡಿಸಲಾಯಿತೆಂದೂ ಅವರು ತಿಳಿಸಿದರು.
ತಾ. 28-2- 77ರಂದು ರಾಜಗೋಪಾಲ ಹೆಬ್ಬಾರರು ಹಾಜರುಮಾಡಿದ ಡೈರಿಯನ್ನು ರೆಕಾರ್ಡ್ ಮೂಲಕ ಸ್ವಾಧೀನಪಡಿಸಲಾಯಿತಲ್ಲದೆ ಬೆಳ್ತಂಗಡಿಗೆ ಬಂದು ಅಲ್ಲಿ ಎಚ್.ಎಸ್. ಕರ್ಣಯ್ಯ, ಕೆ.ವಿ. ಕರುಣಾಕರನ್ ಮತ್ತು ನಿರಂಜನ್ ನರಾಯಣ ಅವರ ಹೇಳಿಕಸಗಳನ್ನೂ ಪಡೆಯಲಾಯಿತೆಂದೂ ಅವರು ಹೇಳಿದರು.
ತಾ. 4-3-77ರಂದು ಯಲಹಂಕದ ಏರ್‌ಫೋರ್ಸ್ ಕೇಂದ್ರಕ್ಕೆ 2ನೇ ಆರೋಪಿ ಪುರಂದರ ಭಟ್ಟರ ಜೊತೆಯಲ್ಲಿ ತಾವು ಹೋಗಿ ಅಲ್ಲಿ ದೋಬಿಗಳಾದ ನಾರಾಯಣ, ದೊರೈರಾಜ್, ರೂಮ್‌ಬಾಯ್ ನಂಜಪ್ಪನವರ ಹೇಳಿಕೆಗಳನ್ನು ಪಡೆಯಲಾಯಿತೆಂದೂ ಅವರು ನ್ಯಾಯಾಲಯದಲ್ಲಿ ಹೇಳಿದರು.
ತಾ. 6-3-77ರಲ್ಲಿ 2ನೇ ಆರೋಪಿ ಪುರಂದರ ಭಟ್ಟರನ್ನು ಬಂಟ್ವಾಳಕ್ಕೆ ಕಳುಹಿಸಿ ಅವರನ್ನು ಮ್ಯಾಜಿಸ್ಟೆçÃಟ್ ಮುಂದೆ ಹಾಜರುಪಡಿಸಿದಾಗ ಅವರಿಗೆ ರಿಮಾಂಡ್ ಕೂಡಾ ಕೊಡಲಾಯಿತೆಂದು ಅವರು ತಿಳಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top