ಕಲ್ಲಡ್ಕ ಇಸ್ಮಾಯಿಲ್ ಹತ್ಯೆ ಪ್ರಕರಣ: ಉಡುಪಿಯಲ್ಲೂ ನಡೆದಿತ್ತು ತನಿಖೆ
ಭಾಗ-20
ತಾ. 17-9-76ರಂದು ನಾನು ಉಡುಪಿಗೆ ಹೋಗಿ ಅಲ್ಲಿನ ಪೊಲೀಸ್ ಅಧಿಕಾರಿಗಳೊಡನೆ ಈ ಕೇಸಿನ ಕುರಿತು ವಿಚಾರ ವಿನಿಮಯ ನಡೆಸಿದೆ.
ಅಲ್ಲಿ ಕಾಫಿಪೋಸಾದಲ್ಲಿ ದಸ್ತಗಿರಿಯಾದವರ ಬಗ್ಗೆ ವಿಚಾರಿಸಿದೆ. ಅಲ್ಲಿಯ ಪೊಲೀಸ್ ಠಾಣೆಗಳಲ್ಲಿ ಕೇಸು ದಾಖಲಾದ ರೌಡಿಗಳ ಬಗ್ಗೆಯೂ ತನಿಖೆ ನಡೆಸಿದೆ. ಅದರಿಂದ ಅರ್ಯಾರಿಗೂ ಇಸ್ಮಾಯಿಲ್ರವರ ಕೊಲೆಗೂ ಯಾವ ಸಂಬಂಧವೂ ಇಲ್ಲವೆಂಬುದು ನನಗೆ ಖಚಿತವಾಯಿತು.
ಅಲ್ಲಿಂದ ಬಂಟ್ವಾಳಕ್ಕೆ ಮರಳಿ ಬಂದು ಬಂಟ್ವಾಳದಲ್ಲಿ ಡ್ರೈವರ್ ಚಲನವಲನಗಳ ಬಗ್ಗೆ ತನಿಖೆ ನಡೆಸಿದೆ. ಅನಂತರ ಮಂಗಳೂರಿಗೆ ಹೋಗಿ ಮೇಲೆ ಹೇಳಿದ ನಂಬ್ರ 5471ನೇ ಅಂದರೆ ಅಂಚೆ ಮತ್ತು ತಂತಿ ಇಲಾಖೆಗೆ ಸೇರಿದ ಜೀಪಿನ ಡ್ರೈವರ್ ಹರಿಶ್ಚಂದ್ರ ಅವರ ಬಗ್ಗೆ ತನಿಖೆ ನಡೆಸಿದೆ’ ಎಂದವರು ವಿವರಿಸಿದರು.
ತಾ. 18-9-76ರಲ್ಲಿ ಸಬ್ ಇನ್ಸ್ ಪೆಕ್ಟರ್ ಉತ್ತಯ್ಯರವರನ್ನು ಹಾಸನದ ಕಡೆಗೆ ಜೀಪುಗಳ ವಿಷಯ ಹಾಗೂ ಪೆಟ್ರೋಲ್ ಬಂಕ್ಗಳ ವಿಷಯ ತನಿಖೆ ಮಾಡಲು ಕಳುಹಿಸಿದೆ. ಅದರಂತೆ ತಾ. 19-9-76 ಮತ್ತು 20-9-76ರಂದು ಬೇರೆ ಬೇರೆ ಕಡೆಗಳಿಗೆ ಹೋಗಿ ತನಿಖೆ ನಡೆಸಿದೆ. ತಾ. 22-9-76ರಂದು ಸರಪಾಡಿ, ಕಡೇಶ್ವಾಲ್ಯಗಳಿಗೆ ಹೋಗಿ ನೇತ್ರಾವತಿ ನದಿಯಲ್ಲಿ ನಡೆಸುವ ದೋಣಿ ಮಾಲಕರನ್ನು ಪ್ರಶ್ನಿಸಿದೆ’ ಎಂದವರು ತಿಳಿಸಿದರು.
ತಾ. 23-9-76ರಲ್ಲಿ, ತಾ. 4-9-76ರಂದು ಮೃತ ಇಸ್ಮಾಯಿಲ್ ಅವರ ಅಂಗಡಿಗೆ ಬಂದು ತಾ. 1-9-76ರ “ಡೆಕ್ಕನ್ ಹೆರಾಲ್ಡ್” ಕೇಳಿದ್ದ ಅರಸೀಕೆರೆಯ ಹಾಲಪ್ಪನವರನ್ನು ತಪಾಸಣೆ ಮಾಡಿ ಕಳುಹಿಸಿಕೊಡುವಂತೆ ಅರಸೀಕೆರೆ ಪೊಲೀಸ್ ಠಾಣೆಗೆ ಫೋನ್ ಮೂಲಕ ತಿಳಿಸಿದೆ. ತಾ. 4-9-76ರಂದು ಕಲ್ಲಡ್ಕದಲ್ಲಿ ಮೇಲೆ ಹೇಳಿದ ಹಾಲಪ್ಪನವರ ಜತೆಯಲ್ಲಿದ್ದ ಸನ್ಯಾಸಿಯೊಬ್ಬರನ್ನು ಸಬ್ ಇನ್ಸ್ ಪೆಕ್ಟರ್ ಉತ್ತಯ್ಯನವರು ನನ್ನ ಮುಂದೆ ಹಾಜರುಪಡಿಸಿದಾಗ ಅವರನ್ನು ಕೂಲಂಕಷವಾಗಿ ಪ್ರಶ್ನಿಸಿದೆ. ಆದರೆ ಅವರ ಮೇಲೆ ಯಾವ ತರದ ಸಂಶಯಕ್ಕೂ ಎಡೆ ಬರಲಿಲ್ಲ’ ಎಂದು ಅವರು ವಿವರಿಸಿದರು.
ತಾ. 24-9- 76ರಲ್ಲಿ ಅಬ್ದುಲ್ಲಾ, ಗೋಪಾಲ ಶೆಟ್ಟಿಗಾರ, ದಾನಪ್ಪ ಶೆಟ್ಟಿಗಾರ,, ಪೊಡಿಯ ಬ್ಯಾರಿ, ಇಬ್ರಾಹಿಂ, ದೇಜಪ್ಪ ಪೂಜಾರಿ, ಅಬುಬಕ್ಕರ್ ಬ್ಯಾರಿ ಮತ್ತಿತರರನ್ನು ತಾವು ಪ್ರಶ್ನಿಸಿದುದಾಗಿಯೂ ಸರಪಾಡಿಗೆ ಹೋಗಿ ಹಸನಬ್ಬ ಮೊದಲಾದವರ ಹೇಳಿಕಸಗಳನ್ನು ಪಡೆದುದಾಗಿಯೂ, ತಾ. 25-9-76ರಂದು ತಮ್ಮ ಮುಂದೆ ಹಾಜರುಪಡಿಸಲಾದ ಅರಸೀಕೆರೆಯ ಹಾಲಪ್ಪನವರನ್ನು ಕೂಲಂಕಷವಾಗಿ ವಿಚಾರಿಸಿದಾಗ ಅವರಿಗೂ ಈ ಕೇಸಿಗೂ ಯಾವುದೇ ಸಂಬಂಧವೂ ಇಲ್ಲವೆಂದು ಖಚಿತವಾಯಿತೆಂದೂ ಸಿದ್ದಲಿಂಗಪ್ಪ ಅವರು ತಿಳಿಸಿದರು.
ಡಿಕ್ಲರೇಷನ್ ವೈಷಮ್ಯ ಇಲ್ಲ
ಕಲ್ಲಡ್ಕದ ಸರಹದ್ದಿನ ಗ್ರಾಮಗಳ ಗ್ರಾಮಕರಣಿಕರನ್ನು ಕಂಡು ಅವರವರ ಗ್ರಾಮಗಳಲ್ಲಿ ಡಿಕ್ಲರೇಷನ್ ಕೊಟ್ಟ ಬಗ್ಗೆ ಧನಿಗಳು ಮತ್ತು ಒಕ್ಲುಗಳ ವಿವರಗಳನ್ನು ಪಡೆದು ಅವರಿಗೂ ಇಸ್ಮಾಯಿಲ್ ಅವರಿಗೂ ಏನಾದರೂ ವೈಷಮ್ಯವಿರಬಹುದೇ ಎಂಬ ವಿಷಯವನ್ನು ತಾವು ತನಿಖೆ ಮಾಡಿದಾಗ ಅಂತಹ ವೈಷಮ್ಯವೇನೂ ತಮಗೆ ಕಂಡು ಬಂದಿಲ್ಲವಾಗಿ ಅವರು ಹೇಳಿದರು.
ಚಲನವಲನಗಳ ಅಧ್ಯಯನ
ತಾ. 27-9-76ರಲ್ಲಿ ನಾನು ಕಡಬ ಪೊಲೀಸ್ ಠಾಣೆಗೆ ಹೋಗಿ ಅಲ್ಲಿಯ ಕೇಸು ರೆಕಾರ್ಡು ಕ್ರೈಂ ನಂಬ್ರ 68/75ಹಾಗೂ 83/75 ಮೊದಲಾದವುಗಳನ್ನು ನೋಡಿದೆ. ತಾ. 28-9-76ರಂದು ಆಡಳಿತ ಕಾಂಗ್ರೆಸ್ಗೆ ಸೇರಿದ ಕಾಂತಪ್ಪ ಪೂಂಜಾ ಅವರ ಚಲನವಲನಗಳ ಬಗ್ಗೆ ತನಿಖೆ ನಡೆಸಿದೆ. ಅಷ್ಟು ಮಾತ್ರವಲ್ಲದೆ ಇತರ ಕಾಂಗ್ರೆಸ್ ಕಾರ್ಯಕರ್ತರ ಚಲನವಲನದ ಕುರಿತೂ ತನಿಖೆ ನಡೆಸಿದೆ. ತಾ. 29-7-76ರಂದು ಈ ಹಿಂದೆ ಡಿಸ್ಮಿಸ್ ಆದ ಪೊಲೀಸರಾದ ಡಿಸೋಜ ಮತ್ತು ರಂಗಪ್ಪ ಮತ್ತಿತರರ ಚಲನವಲನದ ಕುರಿತೂ ತನಿಖೆ ನಡೆಸಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಹೋಗಿ ಅಲ್ಲಿನ ಕ್ರೆöÊಮ್ ನಂಬ್ರ85/75 (ಕೊಲೆ ಮೊಕದ್ದಮೆ) ರಿಕಾರ್ಡನ್ನು, ಮತ್ತಿತರ ರೆಕಾರ್ಡುಗಳನ್ನು ಓದಿದೆ. ತಾ. 30-9-76ರಂದು ಜನಸಂಘ ಮತ್ತು ಆರೆಸ್ಸೆಸ್ ಚಟುವಟಿಕೆಗಳಿರುವ ಸುಬ್ರಹ್ಮಣ್ಯ ಮೊದಲಾದ ಸ್ಥಳಗಳಲ್ಲಿದ್ದ ಜನರ ಚಲನವಲನಗಳ ಬಗ್ಗೆ ತನಿಖೆ ನಡೆಸಿದೆ. ತಾ. 1-10-76ರಂದು ಸೈಂಟಿಫಿಕ್ ಆಫೀಸರ್ ಕೆಂಚಪ್ಪನವರ ರಿಪೋರ್ಟ್ ಸಿಕ್ಕಿತು. ತಾ. 2-10-76ರಂದು ಆಡಳಿತ ಕಾಂಗ್ರೆಸಿಗೆ ಸೇರಿದವರ ಚಲನವಲನಗಳನ್ನು ಪರೀಕ್ಷಿಸಿದೆ.
ತಾ. 3-10-76ರಂದು ಕಣ್ಣಾನೂರಿನ ಸರ್ಕಲ್ ಇನ್ಸ್ಪೆಕ್ಟರ್ರವರು ಬಂಟ್ವಾಳಕ್ಕೆ ಬಂದಾಗ ಅವರೊಡನೆ ಈ ಕೇಸಿನ ಬಗ್ಗೆ ಚರ್ಚಿಸಿದೆ. ವಿನ್ಸೆಂಟ್ ಕಾರ್ವೆಲೊರವರು ತಾವು ಪರೀಕ್ಷಿಸಿದ ಜೀಪುಗಳ ಬಗ್ಗೆ ಒಂದು ರಿಪೋರ್ಟ್ ಕೊಟ್ಟರು. ನಾನು ಪೆರ್ಲ ಚೆಕ್ ಪೋಸ್ಟಿಗೆ ಹೋಗಿ ಜೀಪು ಆ ಕಡೆಗೆ ಹೋದ ಬಗ್ಗೆ ತನಿಖೆ ನಡೆಸಿದೆ. ಅಲ್ಲಿಂದ ಕಾಸರಗೋಡಿಗೆ ಹೋಗಿ ಕಾಸರಗೋಡಿನಲ್ಲಿ ಕಣ್ಣಾನೂರಿನ ಎಸ್ಪಿ ಮತ್ತು ಕಾಸರಗೋಡು ಡಿಎಸ್ಪಿ ಜತೆ ಈ ಕೇಸಿನ ಬಗ್ಗೆ ವಿಚಾರ ವಿನಿಮಯ ನಡೆಸಿದೆ. ಅಲ್ಲಿನ ಕಳ್ಳ ಸಾಗಣಿಕೆದಾರರ ಬಗ್ಗೆ ಕೂಡಾ ಚರ್ಚಿಸಿದೆ. ಅವರಿಗೆ ಮತ್ತು ಇಸ್ಮಾಯಿಲ್ ಅವರ ಕೊಲೆಗೆ ಯಾವ ಸಂಬಂಧವೂ ಇಲ್ಲವೆಂಬುದು ಖಚಿತವಾಯಿತು’ ಎಂದವರು ವಿವರಿಸಿದರು.
ಫೋನ್ ವಿಚಾರದಲ್ಲಿ ತನಿಖೆ ತಾ. 7-10-76ರಲ್ಲಿ ಗಂಧದ ಕೊರಡುಗಳನ್ನು ಕದ್ದು ಒಯ್ಯುವವರ ವಿಷಯ ತನಿಖೆ ನಡೆಸಿದೆ. ತಾ. 8-10-76ರಂದು ಕಾರ್ವೆಲೊರವರನ್ನು ಕೊಡಗು ಜಿಲ್ಲೆಗೆ ಕಳುಹಿಸಿ ಅಲ್ಲಿ ಪೊಲೀಸ್ ಇಲಾಖೆಯಿಂದ ಡಿಸ್ಮಿಸ್ ಆದವರ ಬಗ್ಗೆ ಪರೀಕ್ಷಿಸಿ ಬರುವಂತೆ ಆದೇಶ ಕೊಟ್ಟೆ. ಸಬ್ ಇನ್ಸ್ ಪೆಕ್ಟರ್ ಸತ್ಯನಾರಾಯಣ ಅವರನ್ನು ಶಿವಮೊಗ್ಗಕ್ಕೆ ಕಳುಹಿಸಿ ಅಲ್ಲಿ ಪೊಲೀಸ್ ಇಲಾಖೆಯಿಂದ ಡಿಸ್ಮಿಸ್ ಆದ ಪೊಲೀಸ್ ಅಧಿಕಾರಿಗಳ ಹಾಗೂ ಕಾನ್ಸ್ಟೇಬಲ್ಗಳ ವಿಷಯ ತಪಾಸಣೆ ಮಾಡಲು ಸೂಚಿಸಿದೆ. ಇಸ್ಮಾಯಿಲ್ ಅವರು ಕೊಲೆಯಾಗುವ ಮೊದಲು ಅವರ ಅಂಗಡಿಯಿAದ ಎಲ್ಲಿಗೆಲ್ಲ ಫೋನ್ ಮಾಡಿದ್ದರೆಂಬುದನ್ನು ತಿಳಿದು ಆ ಬಗ್ಗೆ ತನಿಖೆ ಮಾಡಿದೆ. ತಾ. 13-10-76ರಲ್ಲೂ ಉಡುಪಿ ಮತ್ತು ಕಾಸರಗೋಡಿಗೆ ಮಾಡಿದ್ದ ಫೋನಿನ ಬಗ್ಗೆ ತನಿಖೆ ನಡೆಸಿದೆ. ಆದರೆ ಈ ತನಿಖೆಗಳಿಂದ ಈ ಕೇಸಿಗೆ ಬೇಕಾದ ಯಾವ ಕುರುಹೂ ಸಿಗಲಿಲ್ಲ. ಅಲ್ಲದೆ ಪೊಲೀಸ್ ಅಧಿಕಾರಿಗಳನ್ನು ನಾನಾ ಕಡೆಗೆ ಹುಡುಕಲು ಕಳುಹಿಸಿದೆ’ ಎಂದು ಸಿದ್ದಲಿಂಗಪ್ಪ ತಿಳಿಸಿದರು.
ತಾ. 16-10-76ರಲ್ಲಿ ಸಿಓಡಿ ಇನ್ಸ್ಪೆಕ್ಟರ್ ಹಿರೇಮಠ್ರನ್ನೂ ಉಡುಪಿಯಲ್ಲಿರುವ ಕಳ್ಳ ಸಾಗಾಣಿಕೆದಾರರ ಬಗ್ಗೆ ತನಿಖೆ ಮಾಡಲು ಕಳುಹಿಸಿದೆ. ಇನ್ಸ್ಪೆಕ್ಟರ್ ಲಿಂಗಣ್ಣಯ್ಯರವರನ್ನೂ ಹಾಸನದ ಕಡೆಗೆ ಕಳುಹಿಸಿ ಜೀಪುಗಳು ಯಾವುದಾದರೂ ತಾ. 4-9-76ರಲ್ಲಿ ಪೆಟ್ರೋಲ್ ಹಾಕಿದ ವಿಷಯ ತನಿಖೆ ಮಾಡಲು ಆದೇಶಿಸಿದೆ. ಬಂಕ್ಗಳಲ್ಲಿ ಪೆಟ್ರೋಲ್ ಹಾಕಿದ ವಿಷಯವನ್ನೆಲ್ಲ ತನಿಖೆ ನಡೆಸಿದೆ. ತಾ. 17-1076ರಂದು ಬೆಂಗಳೂರಿನಿAದ ಬಂದ ಕ್ಲಿನಿಕಲ್ ರಿಪೋರ್ಟನ್ನು (ವಿಸಿರಾದ ಬಗ್ಗೆ) ಬಂಟ್ವಾಳ ಡಾಕ್ಟರರು ನೋಡಿದ ಮೇಲೆ ಕೆಲವು ಅಭಿಪ್ರಾಯ ಸಿಕ್ಕಿತು’ ಎಂದರು.
ತಾ. 19-10-76ರಲ್ಲಿ ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದವರ ಚಲನವಲನಗಳನ್ನು ಪರೀಕ್ಷಿಸಿದೆ. ತಾ. 21-10-76ರಲ್ಲೂ ಈ ಕೆಲಸಗಳನ್ನು ಮುಂದುವರಿಸಿದೆ. ಆ ಬಳಿಕ ತಾ. 30-10-76ರವರೆಗೆ ಬೇರೆಬೇರೆ ಕಡೆಗಳಲ್ಲಿ ಈ ಕೇಸಿನ ಬಗ್ಗೆ , ಜೀಪಿನ ಬಗ್ಗೆ ತಪಾಸಣೆ ನಡೆಸಿದೆ’ ಎಂದು ಅವರು ತಿಳಿಸಿದರು. ರಜೆಯಲ್ಲಿ ಹೋದೆ ಅನಂತರ ತಾವು ದಶಂಬರ ತಿಂಗಳಲ್ಲಿ ರಜೆಯಲ್ಲಿ ಹೋದುದಾಗಿಯೂ, ಆ ಸಮಯದಲ್ಲಿ ದಕ್ಷಿಣಾಮೂರ್ತಿಯವರು ಈ ಕೇಸಿನ ತನಿಖೆ ನಡೆಸಿದರೆಂದೂ, ಆ ಬಳಿಕ ತಾವು ಜನವರಿ ತಾ. 7ರಂದು ಮರಳಿ ಬಂದು ಈ ಕೇಸಿನ ತನಿಖೆ ಮರಳಿ ವಹಿಸಿಕೊಂಡುದಾಗಿಯೂ ಅವರು ಹೇಳಿದರು. ಖಾಕಿ ಡ್ರೆಸ್ ಮತ್ತು ಹಗ್ಗ ಪತ್ತೆ ತಾ. 17-1-77ರಿಂದ 2-2-77ರ ತನಕ ಮಹಾಬಲ ದೇವಾಡಿಗರ ತಪಾಸಣೆಯ ಬಗ್ಗೆ ಬೇರೆ ಬೇರೆ ಕಡೆ ತಾವು ಸಂಚರಿಸಿದ್ದುದಾಗಿ ತಿಳಿಸಿದ ಅವರುತಾ. 4-2-77ರಲ್ಲಿ ನಾನು ಬಂಟ್ವಾಳಕ್ಕೆ ಬಂದು ಅಲ್ಲಿಂದ ಬೆಳ್ತಂಗಡಿಗೆ ಹೋಗಿ, ಬೆಳ್ತಂಗಡಿಯ ಹೆಡ್ ಕಾನ್ಸ್ಟೇಬಲ್ ಕೃಷ್ಣಪ್ಪನವರು ಆ ಮೊದÀಲೇ 3ನೇ ಆರೋಪಿ ಈಶ್ವರ ಭಟ್ಟರ ಕೆರೆಯಿಂದ ಸ್ವಾಧೀನಪಡಿಸಿಕೊಂಡಿದ್ದ ಖಾಕಿ ಡ್ರೆಸ್ ಮೊದಲಾದವುಗಳನ್ನು ಸ್ವಾಧೀನಪಡಿಸಿಕೊಳ್ಳಲು ಹೋದಾಗ ಅಲ್ಲಿನ ಸಬ್ ಇನ್ಸ್ಪೆಕ್ಟರ್ ಮತ್ತು ಹೆಡ್ ಕಾನ್ಸ್ಟೇಬಲ್ರವರು ಬೇರೊಂದು ಕೊಲೆ ಪ್ರಕರಣದ ತನಿಖೆಗೆ ಹೋಗಿದ್ದರಿಂದ ನಾನು ಕೊಯ್ಯೂರಿಗೆ ಹೋಗಿ ಸದ್ರಿ ಕೆರೆಯನ್ನೂ ನೋಡಿ ಅಲ್ಲಿ ಈಶ್ವರ ಭಟ್ಟರ ಪತ್ನಿ ಈಶ್ವರಿ ಅವರ ಮಕ್ಕಳಾದ ಜಯರಾಮ, ವೀಣಾ ಅವರ ಹೇಳಿಕೆ ಪಡೆದೆ. ಕೆಲಸದವರಾದ ಮಾಲಿಗ ನಾಯ್ಕ, ಅವನ ಹೆಂಡತಿ ಸೀತು, ಬಾಬು ಪೂಜಾರಿ ಮತ್ತವನ ಹೆಂಡತಿ ಹೊನ್ನಮ್ಮ ಹಾಗೂ ವೆಂಕಟ್ರಮಣ ಭಟ್ಟರ ಹೇಳಿಕೆಗಳನ್ನು ಪಡೆದೆ. ಆ ಬಳಿಕ ಕಲ್ಲಡ್ಕಕ್ಕೆ ಮರಳಿದೆ’ ಎಂದವರು ಹೇಳಿದರು.
ಇಬ್ಬರೂ ಕಾಣಸಿಗಲಿಲ್ಲ
ತಾ, 5-2-77ರಲ್ಲಿ ಪುತ್ತೂರಿಗೆ ಹೋದ ಈಶ್ವರ ಭಟ್ಟ ಮತ್ತು ಮಹಾಬಲ ದೇವಾಡಿಗರ ಬಗ್ಗೆ ತಪಾಸಣೆ ಮಾಡಿದೆ. ತಾ. 6-2-77ರಂದು ಬೆಳ್ತಂಗಡಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಕೃಷ್ಣಪ್ಪ, ಹೆಡ್ ಕಾನ್ಸ್ಟೇಬಲ್ ಚನಿಯ ಮತ್ತು ಮಹಾಬಲ ಬಂಗೇರ ಹಾಗೂ ಬಂಟ್ವಾಳ ಸರ್ಕಲ್ ಇನ್ಸ್ಪೆಕ್ಟರ್ ಮಹಮ್ಮದ್ ಇಕ್ಬಾಲ್ ಅವರ ಹೇಳಿಕೆಗಳನ್ನು ಪಡೆದೆ. ತಾ. 7-2-77ರಂದು ನಾನು ಬೆಂಗಳೂರಿಗೆ ಹೋಗಿ ಅಲ್ಲಿ ಮಹಾಬಲ ದೇವಾಡಿಗರ ಮತ್ತು ಈಶ್ವರ ಭಟ್ಟರ ಬಗ್ಗೆ ತಪಾಸಣೆ ಮಾಡಿದೆ. ಹಾಗೆ 8-2-77ರಂದೂ ಆ ಕೆಲಸ ಮುಂದುವರಿಸಿದರೂ ಅವರಿಬ್ಬರೂ ಕಾಣಸಿಗಲಿಲ್ಲ’ ಎಂದು ಅವರು ಹೇಳಿದರು.
ಶ್ರೀಧರ ಭಟ್ಟರ ಬಂಧನ ತಾ. 9-2-77ರಂದು ನಾನು ಮಡಿಕೇರಿಗೆ ಬಂದು ಅಲ್ಲಿ ಪೊಲೀಸ್ ಅಧಿಕಾರಿಗಳಲ್ಲಿ ವಿಚಾರ ವಿನಿಮಯ ನಡೆಸಿದೆ. ತಾ. 10-2-77ರಂದು ಮಹಾಬಲ ದೇವಾಡಿಗ ಮತ್ತು ಈಶ್ವರ ಭಟ್ಟರ ತಪಾಸಣೆ ನಡೆಸಿದೆ. ತಾ. 12-2-77ರಂದು ನನಗೆ ಸಿಕ್ಕಿದ ಸುದ್ದಿ ಪ್ರಕಾರ ಸುಳ್ಯಕ್ಕೆ ಹೋಗಿ ಪೈಚಾರಿನ ಹತ್ತಿರವಿರುವ ಪುಟ್ಟಪ್ಪ ಎಂಬವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅವರಿಂದ ಕೆಲವು ವಿಚಾರಗಳು ತಿಳಿದವು. ತಾ. 13-2-77ರಂದು ಸಿಓಡಿ ಇನ್ಸ್ಪೆಕ್ಟರ್ಗಳಾದ ಹಿರೇಮಠ್ ಮತ್ತು ಸಿದ್ದಿಕಿ ಅವರಿಗೆ 1ನೇ ಆರೋಪಿ ಶ್ರೀಧರ ಭಟ್ಟರನ್ನು ತಪಾಸಣೆ ಮಾಡಿ ತರುವಂತೆ ಆದೇಶಿಸಿದೆ. ತಾ. 14-2-77ರಂದು ಬೆಳಿಗ್ಗೆ 10 ಗಂಟೆಯ ಸಮಯ ಹಿರೇಮಠ್ ಮತ್ತು ಸಿದ್ದಿಕಿ 1ನೇ ಆರೋಪಿ ಶ್ರೀಧರ ಭಟ್ಟರನ್ನು ಪುತ್ತೂರಿನಲ್ಲಿ ನನ್ನ ಮುಂದೆ ಹಾಜರುಪಡಿಸಿದಾಗ ನಾನವರನ್ನು ಬಂಧಿಸಿದೆ’ ಎಂದು ಸಿದ್ದಲಿಂಗಪ್ಪನವರು ಹೇಳಿದರು.
ಈ ಕೇಸಿನಲ್ಲಿ ಶ್ರೀಧರ ಭಟ್ಟರ ಕುರಿತು ಆತನಕ ಸಂಗ್ರಹಿಸಿದ ವಿವರಗಳನ್ನು ಅವರಿಗೆ ತಿಳಿಸಿದಾಗ ಶ್ರೀಧರ ಭಟ್ಟರು ಆತನಮ ಸಂತೋಷದಿಮದ ಒಂದು ಹೇಳಿಕೆ ಕೊಡಲು ಬಯಸಿದಾಗ ತಾವು ಸಾಕ್ಷಿಗಳನ್ನು ಬರಮಾಡಿಸಿ ಅವರ ಮುಂದೆ ಶ್ರೀಧರ ಭಟ್ಟರ ಹೇಳಿಕೆಯನ್ನು ಪಡೆದುದಾಗಿ ತಿಳಿಸಿದ ಸಿದ್ದಲಿಂಗಪ್ಪನವರುಆ ಹೇಳಿಕೆಯಲ್ಲಿ ಶ್ರೀಧರ ಭಟ್ಟರು ಮೋಹನ್ ಭಟ್ ಮತ್ತು ಅವರ ಜೀಪನ್ನು ತೋರಿಸಿಕೊಡುವುದಾಗಿಯೂ, ಮೋಟಾರು ಸೈಕಲ್ ರಿಪೇರಿ ಮಾಡಿದ ಮೆಕ್ಯಾನಿಕ್ ಮತ್ತು ಮೋಟಾರು ಸೈಕಲನ್ನು ತೋರಿಸಿಕೊಡುವುದಾಗಿಯೂ, ಬಿ.ಸಿ. ರೋಡಿನಲ್ಲಿ ರಿಕ್ಷಾ ಮತ್ತು ಅದರ ಚಾಲಕರನ್ನು ತೋರಿಸಿಕೊಡುವುದಾಗಿಯೂ, ನಂಬರ್ ಪ್ಲೇಟ್ ಬಿಸಾಡಿದ ಸ್ಥಳ ತೋರಿಸಿಕೊಡುವುದಾಗಿಯೂ, ಜೀಪು ಮತ್ತು ಅದರ ಧನಿಯನ್ನು ತೋರಿಸಿಕೊಡುವುದಾಗಿಯೂ, ಒಪ್ಪಿದ್ದರೆಂದು ತಿಳಿಸಿದರಲ್ಲದೆ ಅದರಂತೆ ಶ್ರೀಧರ ಭಟ್ಟರು ತಮ್ಮನ್ನು ಹಾಗೂ ಸಾಕ್ಷಿಗಳನ್ನು ಕರೆದುಕೊಂಡು ಹೋದ ವಿವರಗಳನ್ನು ಅಲ್ಲಿ ದೊರಕಿದ ವಸ್ತುಗಳನ್ನು, ತೋರಿಸಿದ ವ್ಯಕ್ತಿಗಳ ವಿಚಾರವನ್ನು ಸಿದ್ದಲಿಂಗಪ್ಪನವರು ವಿವರಿಸಿದರು(ಈ ವಿವರಗಳು ಈ ಹಿಂದೆ ಇತರ ಸಾಕ್ಷಿಗಳ ಹೇಳಿಕೆಗಳಲ್ಲಿ ಬಂದಿವೆ). ಹಾಗೆ ದೊರಕಿದ ವಸ್ತುಗಳನ್ನು ಮಹಜರು ಮೂಲಕ ಸ್ವಾಧೀನಪಡಿಸಿಕೊಂಡ ವಿಚಾರಗಳನ್ನು, ಸಂಬAಧಪಟ್ಟವರ ಹೇಳಿಕೆಗಳನ್ನು ಸಾಕ್ಷಿಗಳ ಸಮಕ್ಷಮದಲ್ಲಿ ಪಡೆದುದನ್ನು ಅವರು ನ್ಯಾಯಾಲಯದಲ್ಲಿ ತಿಳಿಸಿದರು.
ಆರೋಪಿಗಳು ಸಿಗಲಿಲ್ಲ
`ತಾ. 192-77 ಚುನಾವಣೆಯ ಮತದಾನದ ದಿನವಾಗಿದ್ದು, ಈ ಕೇಸಿನ ಆರೋಪಿಗಳಲ್ಲಿ ಕೆಲವರು ಮಂಗಳೂರಲ್ಲಿ ಚುನಾವಣೆಗೆ ಕೆಲಮ ಮಾಡುತ್ತಿದ್ದಾರೆಂದು ತಿಳಿದು ಬಂದ ಕೂಡಲೇ ನಾನು ಮಂಗಳೂರು ಕಡೆಗೆ ಹೋಗಿ ಆರೋಪಿಗಳ ಬಗ್ಗೆ ತಪಾಸಣೆ ನಡೆಸಿದೆ. ಆದರೆ ಆರೋಪಿಗಳು ಸಿಗಲಿಲ್ಲ’ವೆಂದರು.
ಅAದು ರಾತ್ರಿ ಸುಮಾರು 9 ಗಂಟೆಯ ಸಮಯ ದಕ್ಷಿಣಾಮೂರ್ತಿಯವರು ಈ ಕೇಸಿನ 2ನೇ ಆರೋಪಿ ಪುರಂದರ ಭಟ್ಟರನ್ನು ಬೆಳಗಾಂ ಸೆಂಟ್ರಲ್ ಜೈಲ್ ಪಕ್ಕದಿಂದ ಕರೆದುಕೊಂಡು ಬಂದು ತಮ್ಮ ಮುಂದೆ ಹಾಜರುಪಡಿಸಿದರೆಂದು ಹೇಳಿದ ಸಿದ್ದಲಿಂಗಪ್ಪನವರು ಆಗ ನಾನು ಪುರಂದರ ಭಟ್ಟರನ್ನೂ ದಸ್ತಗಿರಿ ಮಾಡಿದೆ’ ಎಂದು ತಿಳಿಸಿದರು.
ಪುರಂದರ ಭಟ್ಟರ ಹೇಳಿಕೆ
ಪುರಂದರ ಭಟ್ಟರು ಸ್ವ ಇಚ್ಛೆಯಿಂದ ಒಂದು ಹೇಳಿಕೆಯನ್ನು ಕೊಡಲು ಬಯಸಿದ ಮೇರೆಗೆ ಅದನ್ನು ಬರೆದುಕೊಳ್ಳಲಾಯಿತೆಂದು ಹೇಳಿದ ತನಿಖಾಧಿಕಾರಿಯವರು ಆ ಹೇಳಿಕೆಯಲ್ಲಿ ಉಳಿದ ಬೈಂಡಿAಗ್ ವಯರ್ , ನೈಲಾನ್ ಹಗ್ಗ, ಉಳಿದ ಬಿಳಿ ಪೈಂಟ್, ಉಳಿದ ಹುರಿಹಗ್ಗ, ಉಳಿದ ಖಾಕಿ ಬಟ್ಟೆ, ಹೊಲಿಗೆ ಯಂತ್ರದಭಾಗಗಳು ಮೊದಲಾದವುಗಳನ್ನು ಪುರಂದರ ಭಟ್ಟರು ಒಪ್ಪಿದ್ದರೆಂದು ಹೇಳಿದರು.
ತಾ. 21-2-77ರಂದು ಪುರಂದರ ಭಟ್ಟರು ತಮ್ಮನ್ನು ಮತ್ತು ಸಾಕ್ಷಿಗಳನ್ನು ಅವರ ಹೇಳಿಕೆಯಲ್ಲಿ ಹೇಳಿದ ಸ್ಥಳಗಳಿಗೆ ಕರೆದುಕೊಂಡು ಹೋದುದನ್ನೂ, ಅಲ್ಲಿ ದೊರಕಿದ ವಸ್ತುಗಳ ವಿವರಗಳನ್ನೂ, ಆ ಸಂಬAಧ ತಾವು ನಡೆಸಿದ ಪ್ರಯತ್ನಗಳನ್ನೂ ಅವರು ವಿವರಿಸಿದರು.
ತಾ. 26-2-77ರಂದು 1ನೇ ಆರೋಪಿ ಶ್ರೀಧರ ಭಟ್ಟರ ದೇಹದ ಅಳತೆಗಳನ್ನು ಟೈಲರ್ ಮೂಲಕ ತೆಗೆದುಕೊಳ್ಳಲಾಯಿತಲ್ಲದೆ ಅವರ ಲಿಖಿತ ಮಾದರಿ ಕೈಬರಹವನ್ನು ಪಡೆಯಲಾಯಿತೆಂದೂ, ತಾ. 27-2-77ರಂದು ಆರೋಪಿ ಪುರಂದರ ಭಟ್ಟರ ದೇಹದ ಅಳತೆಗಳನ್ನು ಪಡೆಯಲಾಯಿತಲ್ಲದೆ, ಆ ಬಳಿಕ ಸಾಕ್ಷಿ ಮುತ್ತಪ್ಪ ಪೂಜಾರಿ ಮತ್ತಿತರರ ಸಂಗಡ ಬಡಕಾಯಿಕೊಂಬಿಗೆ ಹೋಗಿ ಅಲ್ಲಿ ಪುರಂದರ ಭಟ್ಟರ ಮನೆಯನ್ನು ಹುಡುಕಾಡಿ ಈ ಕೇಸಿನಲ್ಲಿ ಈ ಮೊದಲೇ ಗುರುತಿಸಲಾದ ತಾ. 4-6-75ನೇ ತಾರೀಕಿನ, 24-8-75ನೇ ತಾರೀಕಿನ ಹಾಗೂ ತಾ. 20-8-75ನೇ ತಾರೀಕಿನ ಪತ್ರಗಳನ್ನು, ಹೆಲ್ಮೆಟನ್ನು, ಜರ್ಕಿನ್ನ್ನು ರೆಕಾರ್ಡ್ ಮೂಲಕ ಸ್ವಾಧೀನಪಡಿಸಲಾಯಿತೆಂದೂ ಅವರು ತಿಳಿಸಿದರು.
ತಾ. 28-2- 77ರಂದು ರಾಜಗೋಪಾಲ ಹೆಬ್ಬಾರರು ಹಾಜರುಮಾಡಿದ ಡೈರಿಯನ್ನು ರೆಕಾರ್ಡ್ ಮೂಲಕ ಸ್ವಾಧೀನಪಡಿಸಲಾಯಿತಲ್ಲದೆ ಬೆಳ್ತಂಗಡಿಗೆ ಬಂದು ಅಲ್ಲಿ ಎಚ್.ಎಸ್. ಕರ್ಣಯ್ಯ, ಕೆ.ವಿ. ಕರುಣಾಕರನ್ ಮತ್ತು ನಿರಂಜನ್ ನರಾಯಣ ಅವರ ಹೇಳಿಕಸಗಳನ್ನೂ ಪಡೆಯಲಾಯಿತೆಂದೂ ಅವರು ಹೇಳಿದರು.
ತಾ. 4-3-77ರಂದು ಯಲಹಂಕದ ಏರ್ಫೋರ್ಸ್ ಕೇಂದ್ರಕ್ಕೆ 2ನೇ ಆರೋಪಿ ಪುರಂದರ ಭಟ್ಟರ ಜೊತೆಯಲ್ಲಿ ತಾವು ಹೋಗಿ ಅಲ್ಲಿ ದೋಬಿಗಳಾದ ನಾರಾಯಣ, ದೊರೈರಾಜ್, ರೂಮ್ಬಾಯ್ ನಂಜಪ್ಪನವರ ಹೇಳಿಕೆಗಳನ್ನು ಪಡೆಯಲಾಯಿತೆಂದೂ ಅವರು ನ್ಯಾಯಾಲಯದಲ್ಲಿ ಹೇಳಿದರು.
ತಾ. 6-3-77ರಲ್ಲಿ 2ನೇ ಆರೋಪಿ ಪುರಂದರ ಭಟ್ಟರನ್ನು ಬಂಟ್ವಾಳಕ್ಕೆ ಕಳುಹಿಸಿ ಅವರನ್ನು ಮ್ಯಾಜಿಸ್ಟೆçÃಟ್ ಮುಂದೆ ಹಾಜರುಪಡಿಸಿದಾಗ ಅವರಿಗೆ ರಿಮಾಂಡ್ ಕೂಡಾ ಕೊಡಲಾಯಿತೆಂದು ಅವರು ತಿಳಿಸಿದರು.






























