[t4b-ticker]

ವಾರಭವಿಷ್ಯ 17.05.2026 ರಿಂದ 23.05.2026ರ ತನಕ

Picture of RB NEWS

RB NEWS

Bureau Report

ಮೇಷ : ದೈವ ಬಲ ಕಡಿಮೆ ಇರುವುದರಿಂದ ವ್ಯವಹಾರ ಕ್ಷೇತ್ರದಲ್ಲಿ ತೊಂದರೆಗಳು ಬರುವ ಸಾಧ್ಯತೆ ಇರುತ್ತದೆ. ಸುಲಭ ಪರಿಹಾರವಾಗಿ ಪ್ರತಿ ನಿತ್ಯ “ಓಂ ಕ್ಲೀಮ್ ಕೃಷ್ಣಾಯ ನಮ:”ಪ್ರತಿನಿತ್ಯ 108 ಬಾರಿ ಹೇಳಿರಿ,ಅಥವಾ ಬರೆಯಿರಿ, ಪ್ರೀತಿ ಪಾತ್ರರೊಂದಿಗೆ ವಿರಸಗಳು ಬಾರದಂತೆ ಎಚ್ಚರವಹಿಸಿರಿ.

ವೃಷಭ : ದ್ವಿತೀಯಾದಲ್ಲಿ ಗುರುವಿನೊಂದಿಗೆ ಶುಕ್ರನಿರುವುದರಿಂದ ಬರುವ ಆದಾಯದಲ್ಲಿ ಕೊರತೆಯಾಗುವ ಸೂಚನೆ ಇರುತ್ತದೆ. ಬುಧಾದಿತ್ಯ ಯೋಗ ಬಂದಿದೆ ಬರುವ ಆದಾಯದಲ್ಲಿ ಶನಿ ಉತ್ತಮ ಸಹಕಾರವನ್ನು ನೀಡುತ್ತಲೇ ಬಂದಿದ್ದಾನೆ. ಉನ್ನತ ಪದವಿ ಧಾರಣೆ ಮಾಡಲಿರುವಿರಿ.

ಮಿಥುನ : ಗುರು ಮತ್ತು ಶುಕ್ರ ಜೊತೆಯಾಗಿ ಜನ್ಮ ರಾಶಿಯಲ್ಲಿ ಇರುವುದರಿಂದ ಶ್ರೀ ಗಣಪತಿ ಅಷ್ಟೋತ್ತರ ಪಾರಾಯಣ ಮಾಡುವ ಅಗತ್ಯವಿದೆ. ಸಹೋದರ ವರ್ಗದವರ ಸಹಾಯ ನಿಮಗೆ ಸಿಗಲಿದೆ ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಲಿದೆ. ದಾಂಪತ್ಯದಲ್ಲಿ ಅನುಮಾನವೆಂಬ ಪಿಶಾಚಿ ಕಾಟ ನೀಡಲಿದೆ. ಎಚ್ಚರವಾಗಿರಿ.

ಕರ್ಕಾಟಕ : ನಾಗ ದೇವರ ಪ್ರಾರ್ಥನೆ ನಿಮಗೆ ಅಗತ್ಯವಾಗಿದೆ. ಅಲರ್ಜಿ ತಲೆನೋವು ಮಾನಸಿಕ ಒತ್ತಡ ಉಂಟಾಗಲಿದೆ. ಕಡಲೆ ಬೆಲ್ಲ ಗೋವುಗಳಿಗೆ ನೀಡುವುದು ಅಗತ್ಯವಾಗಿದೆ. ಹೊಸ ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ.

ಸಿಂಹ : ಲಾಭ ಕ್ಷೇತ್ರದಲ್ಲಿ ಇರುವ ಗುರು ಶುಕ್ರ ನಿಮ್ಮ ಅದೃಷ್ಟವನ್ನೇ ಬದಲಾಯಿಸಲಿದೆ. ಸಂಗಾತಿಯೊಂದಿಗೆ ಹೊಂದಾಣಿಕೆಯಾಗುವವರು ನೀವಾಗಬೇಕಿದೆ. ಇನ್ನೂ ಕೆಲವೇ ದಿನಗಳಲ್ಲಿ ಈ ಪರಮ ಸತ್ಯ ನಿಮ್ಮ ಅರಿವಿಗೆ ಬರಲಿದೆ. ಮಕ್ಕಳ ವಿಷಯದಲ್ಲಿ ಮಾನಸಿಕ ಸಂಘರ್ಷಗಳಾಗಲಿದೆ.

ಕನ್ಯಾ : ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ. ಇನ್ನೂ ಕೆಲವೇ ದಿನಗಳಲ್ಲಿ ಗುರು ಲಾಭ ಕ್ಷೇತ್ರಕ್ಕೆ ಬರುವುದರಿಂದ ನಿಮ್ಮ ಜೀವನದ ಚಿತ್ರಣವೇ ಬದಲಾಗಲಿದೆ. ದಾಂಪತ್ಯದಲ್ಲಿ ವಿರಸ ಬಾರದಂತೆ ಎಚ್ಚರವಹಿಸಿರಿ. ವಾಹನ ಚಾಲಕರೇ ಎಚ್ಚರವಾಗಿರಿ.

ತುಲಾ : ಗುರು ಶುಕ್ರ ಭಾಗ್ಯದಲ್ಲಿ ಜೊತೆಯಾಗಿರುವುದು ನಿಮ್ಮ ಭಾಗ್ಯದಯವನ್ನು ಹೆಚ್ಚಿಸಿದೆ. ಹೊಸ ಪಾಲುದಾರಿಕೆಯ ವ್ಯಾಪಾರವನ್ನು ಆರಂಭಿಸಲು ಒಳ್ಳೆಯ ಸಮಯ. ಚಿನ್ನಾಭರಣ ಖರೀಧಿ ಮಾಡುವಿರಿ. ಗರ್ಭಿಣಿಯರು ಎಚ್ಚರವಾಗಿರಿ. ಮಕ್ಕಳ ವಿಷಯದಲ್ಲಿ ಕೆಲವೊಮ್ಮೆ ಬೇಸರ ಮಾಡಲಿರುವಿರಿ.

ವೃಶ್ಚಿಕ : ಜೂನ್ 02 ರ ವರೆಗೆ ಕಾಯುವ ಅನಿವಾರ್ಯತೆ ಇರುತ್ತದೆ. ಆಗ ಗುರು ಕರ್ಕಾಟಕ ರಾಶಿಗೆ ಉಚ್ಚ ಗ್ರಹನಾಗಿ ಬರಲಿದ್ದಾನೆ. ಕುಜ ನಿಮ್ಮಲ್ಲಿ ನಿರಾಳತೆಯನ್ನು ತಂದಿದ್ದಾನೆ. ಭೂಮಿ ವ್ಯವಹಾರ ಮಾಡುವವರಿಗೆ ಒಳ್ಳೆಯ ಆದಾಯವನ್ನು ತರಲಿದ್ದಾನೆ. ಸಂಗಾತಿಯ ಕಿರಿಕಿರಿ ನಿರಂತರ ಇರಲಿದೆ.

ಧನು : ಮನೆಯ ಸದಸ್ಯರೊಂದಿಗೆ ಯುದ್ಧ ಮಾಡಲಿರುವಿರಿ. ಮಾನಸಿಕ ಚಂಚಲತೆ ಮೂಡಲಿದೆ. ರವಿ ಬುಧ ಜೊತೆಯಾಗಿದ್ದು ಬುಧಾದಿತ್ಯ ಯೋಗವನ್ನು ತರಲಿದ್ದಾರೆ. ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ವಾಹನ ಚಾಲಕರು ಎಚ್ಚರವಹಿಸಬೇಕು. ಕಾಲು ಗಂಟು ನೋವು ಬರುವ ಸಾಧ್ಯತೆ ಇರುತ್ತದೆ.

ಕುಂಭ : ಬೆಳಿಗ್ಗೆ ಎದ್ದ ತಕ್ಷಣ ಮೊದಲ ಕೆಲಸ ನಾಗದೇವರ ಪ್ರಾರ್ಥನೆಯಾಗಿರಲಿ. ದೈವಾನುಗ್ರಹ ಉತ್ತಮವಾಗಿದೆ. ರಾಜಕೀಯ ಗಣ್ಯರಿಗೆ ರವಿ ಬುಧ ಜೊತೆಯಾಗಿರುವುದು ಶುಭ ಸೂಚಕವಾಗಿದೆ. ಉತ್ತಮ ಪದವಿ ಪ್ರಾಪ್ತಿ ಯೋಗವಿದೆ. ನೀವಾಡುವ ಮಾತು, ಮಾಡುವ ಹಣದ ಖರ್ಚು ನಿಮ್ಮ ಹಿಡಿತದಲ್ಲಿರಲಿ.

ಮೀನಾ : ಪಿತ್ರಾರ್ಜಿತ ಆಸ್ತಿ ಸಿಗಲಿರುವ ಸಮಯ. ವಕೀಲ ವೃತ್ತಿಯವರಿಗೆ ಶುಭೋದಯದ ಸಮಯವಾಗಿದೆ. ಓಂ ನಮೋ ಭಗವತೇ ವಾಸುದೇವಾಯ “ಮಂತ್ರವನ್ನು ಪ್ರತಿನಿತ್ಯ 108 ಬಾರಿ ಹೇಳಿರಿ. ಒಮ್ಮೆಲೇ ಮುನ್ನುಗ್ಗಿ ಬರುವ ಸಿಟ್ಟನ್ನು ಹಿಡಿತದಲ್ಲಿ ಇಟ್ಟುಕೊಳ್ಳಿರಿ.

ಕಂಪ್ಯೂಟ‌ರ್ ಜಾತಕ, ವಾಸ್ತು ಸಲಹೆ, ವಿವಾಹ ಹೊಂದಾಣಿಕೆ ಶುಭ ಮುಹೂರ್ತ, ಕವಡೆ ಪ್ರಶ್ನೆ ಇತ್ಯಾದಿ ಸಲಹೆಗಳಿಗೆ ಸಂಪರ್ಕಿಸಿರಿ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top