ಹೊಸ ಮಾರ್ಗದತ್ತ ಪಾಕಿಸ್ತಾನ

Picture of RB NEWS

RB NEWS

Bureau Report

ಲಾಹೋ‌ರ್: ಪಾಕಿಸ್ತಾನದಲ್ಲಿ ಕೆಲ ಪ್ರದೇಶಗಳಿಗೆ ಅಖಂಡ ಭಾರತ ಮೂಲದ ಹಿಂದೂ ಹೆಸರುಗಳನ್ನು ಮರು ನಾಮಕರಣ ಮಾಡಲಾಗುತ್ತಿದೆ.

ದೇಶ ವಿಭಜನೆಯ ನಂತರ ಪಾಕಿಸ್ತಾನ ಮತ್ತೆ ಮಹತ್ವದ ಘಟನೆಗೆ ವೇದಿಕೆಯಾಗಿದ್ದು, ವಿಭಜನೆಯ ನಂತರದಿಂದಲೇ ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ, ವಿಶೇಷವಾಗಿ ಹಿಂದೂಗಳು ಮತ್ತು ಸಿಖ್ ಸಮುದಾಯದವರ ಸ್ಥಿತಿ ಗಂಭೀರ ಚಿಂತೆಯ ವಿಷಯವಾಗಿಯೇ ಉಳಿದಿದೆ.

ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರ ಸೃಷ್ಟಿ ಬಳಿಕ ಅಲ್ಲಿನ ಪ್ರದೇಶಗಳಿಗೆ ಭಾರತ ಮೂಲದ ಹೆಸರುಗಳನ್ನು ಕೈ ಬಿಟ್ಟು ಇಸ್ಲಾಮೀ ಹೆಸರುಗಳನ್ನು ಇಡಲಾಗಿತ್ತು.

ಆದರೆ ಬರೊಬ್ಬರಿ 8 ದಶಕಗಳ ಬಳಿಕ ಅಚ್ಚರಿ ಬೆಳವಣಿಗೆಯಲ್ಲಿ ಪಾಕಿಸ್ತಾನ ಇದೀಗ ಮತ್ತೆ ಆ ಪ್ರದೇಶಗಳಿಗೆ ಮರು ನಾಮಕರಣ ಮಾಡಿದ್ದು, ಅದರಲ್ಲೂ ಭಾರತ ಮೂಲದ ಹಿಂದೂ ಹೆಸರುಗಳನ್ನು ಇಡುತ್ತಿದೆ.

ಐತಿಹಾಸಿಕ ನಗರಿ ಲಾಹೋರ್ ಪ್ರಮುಖ ಪ್ರದೇಶಗಳ ಹೆಸರು ನಾಮಕರಣ ಮಾಡಲಾಗಿದ್ದು, ಒಂದಲ್ಲ ಎರಡಲ್ಲ ಬರೊಬ್ಬರಿ 15 ಪ್ರದೇಶಗಳ ಇಸ್ಲಾಮೀ ಹೆಸರನ್ನು ಕೈ ಬಿಟ್ಟು ಭಾರತ ಮೂಲದ ಹೆಸರುಗಳನ್ನು ಇಡಲಾಗಿದೆ.

ಅಚ್ಚರಿ ಎಂದರೆ ಪಾಕಿಸ್ತಾನದ ಈ ಪ್ರಕ್ರಿಯೆ ಅಲ್ಲಿ ಬಹುತೇಕ ಯಾವುದೇ ಸಂಘಟಿತ ವಿರೋಧವಿಲ್ಲದೇ ನಡೆಯುತ್ತಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top