ಮಂಗಳೂರು: ಸರಕಾರಿ ಬಸ್ಗ ಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಘೋಷಣೆಯಾಗಿರುವ ಮಧ್ಯೆಯೇ ಮೂಡಬಿದಿರೆ ಖಾಸಗಿ ಬಸೊಂದರ ಮಾಲಕರೊಬ್ಬರು ಇದೇ ಘೋಷಣೆಯನ್ನು ಮಾಡುವ ಮೂಲಕ ಮಾದರಿಯಾಗಿದ್ದಾರೆ.
ನಾರಾವಿ-ಮಂಗಳೂರು ನಡುವೆ ಸಂಚರಿಸುವ ಪ್ರದೀಪ್ತ ಬಸ್ಸಿನಲ್ಲಿ ಸರಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ವನ್ನು ಘೋಷಿಸಲಾಗಿದೆ. ಈ ಉಚಿತ ಪ್ರಯಾಣದ ವ್ಯವ ಸ್ಥೆಯಿಂದ ಹಲವಾರು ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಸರಕಾರಿ ಶಿಕ್ಷಣ ಸಂಸ್ಥೆಗಳಿಗೆ ಹೋಗುವ ಬಡ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯಿಂದ ಇದೊಂದು ಸಣ್ಣ ಕೊಡುಗೆ ಎಂದು ಪ್ರದೀಪ್ತ ಬಸ್ಸಿನ ಮಾಲಕ ಡಾ. ಆಶೀರ್ವಾದ್ ತಿಳಿಸಿದ್ದಾರೆ.