[t4b-ticker]

ಮುರಿದು ಬಿದ್ದ ಒಣ ಕೊಂಬೆ : ಕಾರಿನ ಗಾಜು ಪುಡಿ

Picture of RB NEWS

RB NEWS

Bureau Report


ಮಂಗಳೂರು, ಆ. 24: ನಗರದ ಬಂದರು ಪ್ರದೇಶದಿಂದ ಹ್ಯಾಮಿಲ್ಟನ್ ವೃತ್ತದ ಕಡೆಗೆ ಸಾಗುತ್ತಿದ್ದ ಕಾರಿನ ಮೇಲೆ ರಸ್ತೆ ಬದಿಯ ದೇವದಾರು ಮರವೊಂದರ ಕೊಂಬೆ ಮುರಿದು ಬಿದ್ದ ಪರಿಣಾಮ ಕಾರಿನ ಗಾಜು ಛಿದ್ರಗೊಂಡ ಘಟನೆ ಸೋಮವಾರ ಸಂಭವಿಸಿದೆ.
ಬಂದರು ಕಡೆಯಿಂದ ಹ್ಯಾಮಿಲ್ಟನ್ ವೃತ್ತದತ್ತ ಕಾರು ಸಂಚರಿಸುತ್ತಿದ್ದ ವೇಳೆ ಏಕಾಏಕಿ ರಸ್ತೆ ಬದಿಯ ಮರದ ಕೊಂಬೆಯೊಂದು ಮುರಿದು ಕಾರಿನ ಮೇಲೆ ಬಿದ್ದಿದೆ. ಕೊಂಬೆಯ ರಭಸಕ್ಕೆ ಕಾರಿನ ಗಾಜು ಛಿದ್ರಗೊಂಡಿದ್ದು, ವಾಹನಕ್ಕೆ ಹಾನಿಯಾಗಿದೆ.
ಘಟನೆಯಿಂದ ಕೆಲಕಾಲ ರಸ್ತೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದುಬಂದಿದೆ.

ಇದೇ ಮಾರ್ಗವಾಗಿ ಪ್ರತಿದಿನ ಬಂದರು ಕಡೆಗೆ ಅಸಂಖ್ಯಾತರು ಹಾದೂ ಹೋಗುತ್ತಿತ್ರು, ಅದೇ ಮರದ ಕೊಂಬೆ ಪಾದಚಾರಿಗಳ ತಲೆಗೆ ಬಿದ್ದರೆ ಜೀವಕ್ಕೂ ಕುತ್ತು ಬರುತ್ತಿತ್ತು. ಅಪಾಯಕಾರಿ ಮರಗಳ ಕೊಂಬೆ ತೆರವುಗೊಳಿಸಬೇಕೆಂಬು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top