ವಿಚಾರಣಾಧೀನ ಕೈದಿ ಜೈಲಿನಲ್ಲೇ ಹೃದಯಾಘಾತದಿಂದ‌ ಸಾವು

Picture of RB NEWS

RB NEWS

Bureau Report

ಉಡುಪಿ: ವಿಚಾರಣಾಧೀನ ಕೈದಿಯೋರ್ವ ಜೈಲಿನಲ್ಲೇ ಹೃದಯಾಘಾತವಾಗಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಹಿರಿಯಡ್ಕ ಸಬ್‌ ಜೈಲಿನಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಅನುಪ್ ಶೆಟ್ಟಿ(38)ಎಂದು ಗುರುತಿಸಲಾಗಿದೆ.

∆ ಉಡುಪಿ ಎಸ್ಪಿ ಡಾ. ಅರುಣ್ ಕುಮಾರ್

ಕುಂದಾಪುರದ ಫೈನಾನ್ಶಿಯರ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಅನೂಪ್ ಶೆಟ್ಟಿ ಕಳೆದ ಎರಡೂವರೆ ವರ್ಷಗಳಿಂದ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿದ್ದ. ಶನಿವಾರ ಸಂಜೆ ವೇಳೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದ್ದು ಮಾಹಿತಿ ತಿಳಿದ ತಕ್ಷಣ ಸಿಬ್ಬಂದಿ ಆಸ್ಪತ್ರೆ ರವಾನಿಸಿದ್ದರು. ಆದರೆ ಆಸ್ಪತ್ರೆಗೆ ದಾಖಲಾಗುವ ಮೊದಲೇ ಕೊನೆಯುಸಿರು ಎಳೆದಿದ್ದಾರೆ ಎಂದು ಉಡುಪಿ ಎಸ್ಪಿ ಡಾ. ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.

ಫೈನಾನ್ಸಿಯರ್ ಅಜೇಂದ್ರ ಶೆಟ್ಟಿ ಕೊಲೆ ಕೇಸ್​​​ನಲ್ಲಿ ಬಂಧನಕ್ಕೊಳಗಾಗಿದ್ದ ಅನುಪ್ ಶೆಟ್ಟಿ 

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top