[t4b-ticker]

ವಾರಭವಿಷ್ಯದಿನಾಂಕ 28.12.2025 ರಿಂದ 03.01.2026ರ ತನಕ

Picture of RB NEWS

RB NEWS

Bureau Report

ಮೇಷ : ನಿಮ್ಮ ಹಿರಿಯರಿಂದ ಮಾನಸಿಕವಾಗಿ ಶಾರೀರಿಕವಾಗಿ ದೂರದಲ್ಲಿರುವ ಸಮಯ. ವ್ಯವಹಾರ ವೃತ್ತಿ ರಂಗದಲ್ಲಿ ವಿರೋಧಗಳಿದ್ದರೂ ಜಯ ಸಾಧಿಸುವಿರಿ. ಇನ್ನೂ ಹೆಚ್ಚಿನ ಪ್ರಯತ್ನ ಅಗತ್ಯವಿರುತ್ತದೆ, ಹೊಸ ಖರೀಧಿಗಳಿಗೆ ಹೆಚ್ಚು ಖರ್ಚಾಗದಂತೆ ನೋಡಿಕೊಳ್ಳಿರಿ. ಮಾನಸಿಕ ಒತ್ತಡ ನಿಮ್ಮಲ್ಲಿರುತ್ತದೆ. ಬರುವ ಆದಾಯಕ್ಕೆ ಯಾವುದೇ ತಡೆಯಿರುವುದಿಲ್ಲ, ಮನೆ ಕಟ್ಟುವ ಪ್ರಯತ್ನ ಸಧ್ಯಕ್ಕೆ ಬೇಡ, ದೇವಿ ಲಲಿತಾ ಸಹಸ್ರ ನಾಮ ಪಾರಾಯಣ ಅಗತ್ಯವಿದೆ.

ವೃಷಭ : ದೈವ ಬಲವಿರುವುದರಿಂದ ಉದ್ಯೋಗ ವ್ಯವಹಾರಗಳಲ್ಲಿ ಯಶಸ್ವಿಯಾಗುವಿರಿ, ಆರ್ಥಿಕವಾಗಿ ಸಮಾಧಾನವಿದ್ದರೂ ಖರ್ಚು ಹೆಚ್ಚಾಗಲಿದೆ. ಆತ್ಮ ವಿಶ್ವಾಸ ಮತ್ತು ಉತ್ಸಾಹದ ಬಲಗಳಿಂದ ಕಾರ್ಯ ಸಾಧನೆ ಮಾಡುವಿರಿ. ಆಲಂಕಾರಿಕ ವಸ್ತುಗಳ ಖರೀಧಿ ಮಾಡುವಿರಿ. ಸಿಂಹಾವಲೋಕನ ಅಗತ್ಯವಿದೆ, ಕುಟುಂಬದಲ್ಲಿನ ಬಿನ್ನಾಭಿಪ್ರಾಯವನ್ನು ಸರಿಪಡಿಸಿಕೊಳ್ಳಿರಿ. ದೇವೀ ಕ್ಷೇತ್ರ ದರ್ಶನ ಅಗತ್ಯವಿದೆ, ಬಾಗಿನ ಅರ್ಪಣೆ ಅಗತ್ಯವಿದೆ.

ಮಿಥುನ : ಭೂ ವ್ಯವಹಾರಗಳಲ್ಲಿ ಯಶಸ್ಸು ಸಾಧಿಸುತ್ತೀರಿ, ಜೂಜು ಕುಡಿತಕ್ಕೆ ಬಲಿಯಾಗದಿರಿ. ಮಧ್ಯವರ್ತಿಗಳಾಗಿ ಸಂಧಾನ ನಡೆಸುವುದರಿಂದ ಯಶಸ್ಸು ಸಾಧಿಸುತ್ತೀರಿ, ಹಾಸ್ಯದ ಮಾತು ಅತಿಯಾದರೆ ನಿಮಗೇ ತೊಂದರೆಯಾದೀತು, ಅದ್ಯಾತ್ಮದ ಕಡೆಗೆ ಒಲವು ಅಗತ್ಯವಿದೆ. ಸಂಗೀತ ನೃತ್ಯ ಕಲಾವಿದರಿಗೆ ಲಾಭ ಗಳಿಸುವ ಸಮಯವಾಗಿದೆ. ಉದ್ಯೋಗ ಕ್ಷೇತ್ರದಲ್ಲಿ ಸಹವರ್ತಿಗಳ ಜೊತೆಗೆ ಹೋದಾಣಿಕೆ ಅತೀ ಅಗತ್ಯವಿದೆ.

ಕರ್ಕಾಟಕ : ದೈವ ಬಲ ಶೂನ್ಯವಾಗಿದೆ. ಎಲ್ಲಾ ಕಡೆಯಲ್ಲಿಯೂ ಸೋಲಿನ ಕಹಿ ಅನುಭವ ಬಾರಲಿದೆ. ರಾಹು ಶನಿ ಮನಸ್ಸಿನ ಚಾಂಚಲ್ಯತೆಯನ್ನು ತರಲಿದ್ದಾನೆ. ಆತುರದ ನಿರ್ಧಾರಗಳು ಮುಳುವಾಗಬಹುದು. ಆಹಾರ ಶುದ್ಧವಾಗಿರಲಿ, ಇತಿಮಿತಿಯಲ್ಲಿರಲಿ, ಸರಿಯಾದ ವೇಳೆಗೆ ಸೇವಿಸಿರಿ, ಗೆಳೆಯರ ನೆರವು ಕಷ್ಟ ಕಾಲದಲ್ಲಿ ನಿಮಗೆ ಬೆನ್ನೆಲುಬಾಗಿ ಬರಲಿದೆ. ನಾಗ ದೇವರ ಯಥಾ ಶಕ್ತಿ ಸೇವೆ ಅತೀ ಅಗತ್ಯವಾಗಿದೆ. 2026, ಜೂನ್ 2 ರವರೆಗೆ ಇದೇ ರೀತಿ ಮುಂದುವರಿಯಲಿದೆ.

ಸಿಂಹ : ಉತ್ತಮ ದೈವಾನುಗ್ರಹ ನಿಮಗಿರುವುದರಿಂದ ಎಲ್ಲವೂ ನಿಮ್ಮ ಆಸೆಯಂತೆ ನೆರವೇರಲಿದೆ. ಮನೆ ವಾಹನ ಭೂಮಿ ಖರೀಧಿ ಯೋಗವಿದೆ. ಶ್ರೀ ವಿಷ್ಣು ಜನಾರ್ಧನ ದೇವರ ಅನುಗ್ರಹದಿಂದ ಇದು ನೆರವೇರಲಿದೆ. ಮಕ್ಕಳ ವಿದ್ಯಾಭ್ಯಾಸದ ಕಡೆಗೆ ನಿಮ್ಮ ಗಮನವಿರಲಿ. ಮಾನಸಿಕ ಒತ್ತಡವನ್ನು ಅನುಭವಿಸುವ ಸಾಧ್ಯತೆಯನ್ನು ಶನಿ ಮತ್ತು ಚಂದ್ರ ತಿಳಿಸುತ್ತಿದ್ದಾರೆ. ಯಾರ ಮೇಲೆಯೂ ವೈರತ್ವ ಸಾಧನೆ ಮಾಡಬೇಡಿರಿ. ನೀವು ತೆಗೆದು ಕೊಳ್ಳುವ ಯಾವುದೇ ತೀರ್ಮಾನ ಸಕಾರಾತ್ಮಕವಾಗಿರಲಿ,

ಕನ್ಯಾ : ದೂರ ಪ್ರಯಾಣ ಮಾಡುವ ಯೋಗವಿದೆ. ಧಾರ್ಮಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಿರಿ. ನಿಮ್ಮ ಅನಾರೋಗ್ಯ ದೂರವಾಗಲಿದೆ. ಮನೆಯ ಸದಸ್ಯರೊಳಗಿನ ಭಿನ್ನಾಭಿಪ್ರಾಯ ದೂರವಾಗಲಿದೆ ಕೋರ್ಟ್ ಮೆಟ್ಟಲೇರುವ ಸಾಧ್ಯತೆ ಕಂಡು ಬರುತ್ತಿದೆ. ಹೊಡಿ, ಬಡಿ ಅದನ್ನು ಬಿಟ್ಟು ಬಿಡಿ, ಸಂಗಾತಿಯೊಂದಿಗೆ ಹೊಂದಾಣಿಕೆ ಅತೀ ಅಗತ್ಯವಿದೆ. ಸಕಾರಾತ್ಮಕ ಸ್ಪಂದನೆ ನಿಮ್ಮಲ್ಲಿರಲಿ, ಬಿಸಿನೀರು, ಬೆಂಕಿ, ವಿದ್ಯುತ್ ಬಗ್ಗೆ ಎಚ್ಚರವಿರಲಿ, ದೇವೀ ಖಡ್ಗ ಮಾಲಾಪಾರಾಯಣ ಮುಂದುವರಿಸಿರಿ.

ತುಲಾ : ಉತ್ತಮ ದೈವಾನುಗ್ರಹವಿದೆ, ಬರುತ್ತಿರುವ ಆದಾಯದಲ್ಲಿ ಗಣನೀಯವಾಗಿ ಏರಿಕೆಯಾಗಲಿದೆ, ಅತಿಯಾಸೆ ಗತಿಗೇಡು ಎಂಬ ಗಾದೆಯಿದೆ, ಎಲ್ಲದಕ್ಕೂ ಇತಿಮಿತಿ ಇರಲಿ. ಶಿಕ್ಷಕ ವಕೀಲ ವೃತ್ತಿಯವರಿಗೆ ಪೌರೋಹಿತ್ಯ ವೃತ್ತಿಯವರಿಗೆ ಒಳ್ಳೆಯ ಕಾಲವಾಗಿದೆ. ಸಮಾಜದಲ್ಲಿ ಗೌರವ ಸನ್ಮಾನ ದೊರೆಯಲಿದೆ, ಉನ್ನತ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳಿಗೆ ಹೇಳಿ ಮಾಡಿಸಿದ ಸಮಯವಾಗಿದೆ. ಅತಿಯಾದ ಸಂಚಾರ ಬೇಡ,

ವೃಶ್ಚಿಕ : ಬಹಳ ಸಮಯದಿಂದ ಅನುಭವಿಸುತ್ತಾ ಬಂದಿರುವ ತೊಂದರೆಗಳು ಕಡಿಮೆಯಾಗುತ್ತಾ ಬರುತ್ತಿದೆ, ನಿಮ್ಮ ಕಾಲ ಮೇಲೆ ನಿಂತುಕೊಳ್ಳುವ ಕಾಲ ಬಹಳ ಹತ್ತಿರದಲ್ಲಿದೆ. ಹಿರಿಯರೊಂದಿಗೆ ಕಿರಿಯರೊಂದಿಗೆ ವಿರಸ ಬಂದರೂ ಅವರಿಗೆ ತಲೆಬಾಗಿ ನಿವಾರಿಸಿ ಕೊಳ್ಳಿರಿ. ಅನಾರೋಗ್ಯ ಆಗಾಗ ತೊಂದರೆ ನೀಡಬಹುದು ರಾಹು ದೆಶೆ, ರಾಹು ಭುಕ್ತಿ ಇರುವವರು ಹೃದಯ ಸಮಸ್ಯೆಗೆ ಒಳಗಾಗಬಹುದು. ಜಾತಕ ವಿಮರ್ಶೆ ಅಗತ್ಯವಿದೆ.

ಧನು : ಬಹು ಸಮಯದಿಂದ ಕಾಡುತ್ತಿದ್ದ ಪಿತ್ರಾರ್ಜಿತ ಆಸ್ತಿಯ ಸಮಸ್ಯೆ ಬಗೆಹರಿಯಲಿದೆ, ತ್ಯಾಗ ಬುದ್ದಿಯನ್ನು ಬೆಳೆಸಿಕೊಳ್ಳಿರಿ. ಮಾನಸಿಕ ನೆಮ್ಮದಿ ಕಾಣಲಿದ್ದೀರಿ. ನಿಮ್ಮಲ್ಲಿರುವ ಪಾಂಡಿತ್ಯ ಜಾಗೃತಗೊಳ್ಳಲಿದೆ, ಕಾನೂನು ವಿಷಯಗಳಲ್ಲಿ ತೊಡಕುಗಳು ಬಂದರೂ ನಿಭಾಯಿಸುವಿರಿ, ಹಲ್ಲಿನ ಸಮಸ್ಯೆಗಳು ಕಾಡಬಹುದು, ಪತ್ನಿಯ ಸಹಕಾರ ದೊರೆಯಲಿದೆ. ನಿಮ್ಮ ಬಿಪಿ ಷುಗರ್ ಸಮಸ್ಯೆಯನ್ನು ಹತೋಟಿಯಲ್ಲಿ ಇರಿಸಿಕೊಳ್ಳಿರಿ.

ಮಕರ : ಸಂಸಾರದೊಂದಿಗೆ ಸಮಯ ಕಳೆಯುವುದರಿಂದ ಅನೇಕ ಸಮಸ್ಯೆಗಳು ಪರಿಹಾರವಾಗಲಿದೆ. ಆಸ್ತಿ ಖರೀಧಿ ಮಾಡುವಾಗ ಅನುಭವಿಗಳ ಸಲಹೆ ಪಡೆದುಕೊಳ್ಳಲು ಮರೆಯದಿರಿ, ಅವಿವಾಹಿತರು ವಿವಾಹವಾಗಲು ಇದು ಸರಿಯಾದ ಕಾಲವಲ್ಲ, ವಿದ್ಯಾರ್ಥಿಗಳು ಹೆಚ್ಚು ಪರಿಶ್ರಮ ಪಡಬೇಕಾಗಿದೆ, ಉದ್ಯೋಗವನ್ನು ಅರಸುತ್ತಿರುವವರಿಗೆ ಶುಭ ಕಾಲವಾಗಿದೆ. ಕೆಲವೊಮ್ಮೆ ನೀವಾಡುವ ಸುಳ್ಳು ಮಾತುಗಳೇ ನಿಮಗೆ ಮುಳ್ಳಗಬಹುದು.

ಕುಂಭ :ಉಂಡು ಹೋದ ಕೊಂಡೂ ಹೋದ ‘ಎಂಬ ಮಾತಿನಂತೆ ಒಮ್ಮೆ ಕುಬೇರನೇ ಬಂದು ಹಣದ ಮಳೆಯನ್ನೇ ಸುರಿಸಿ, ಮತ್ತೊಮ್ಮೆ ಎಲ್ಲವೂ ಗುಡಿಸಿಕೊಂಡು ಹೋದಹಾಗೆ ಆಗುವ ಸಾಧ್ಯತೆ ಇರುತ್ತದೆ, ತಾಳ್ಮೆಯಿಂದ ಯೋಚಿಸಿ ಮುನ್ನೆಡೆದರೆ ಶುಭವಾಗಲಿದೆ. ನಿಮ್ಮ ಹಿತ ಶತ್ರುಗಳೇ ನಿಮಗೆ ಮುಳುವಾಗಲಿದ್ದಾರೆ. ಕಾನೂನಾತ್ಮಕ ವಿಚಾರಗಳಲ್ಲಿ ಯಶಸ್ವಿಯಾಗಲಿದ್ದೀರಿ. ಚರ್ಮ ಸಂಬಂಧಿ ಅನಾರೋಗ್ಯ ಬರುವ ಸಾಧ್ಯತೆ ಇರುತ್ತದೆ, ನಿಮ್ಮ ಭೂಮಿಯೊಂದು ಮಾರಾಟವಾಗಲಿದೆ.

ಮೀನ : ಚಂದ್ರ ಶನಿ ಜನ್ಮ ರಾಶಿಯಲ್ಲಿ ಇರುವುದರಿಂದ ಮಕ್ಕಳ ವಿಷಯದಲ್ಲಿ ಗೊಂದಲವೊಂದು ಬರುವ ಸಾಧ್ಯತೆ ಇರುತ್ತದೆ. ಒತ್ತಾಯದ ಮೇಲೆ ಹೂಡಿಕೆ ಮಾಡಿ ನಷ್ಟ ತಂದು ಕೊಳ್ಳಬೇಡಿರಿ. ಸ್ವಂತ ಆಲೋಚಿಸಿ ಅವಿವಾತರಿಗೆ ವಿವಾಹ ಪ್ರಸ್ತಾಪಗಳು ಕೂಡಿ ಬರಲಿದೆ. ಕರ್ಮ ಕ್ಷೇತ್ರದಲ್ಲಿ ಪರಿವರ್ತನೆ ಆಗುವ ಸಮಯ. ಮಕರ ಸಂಕ್ರಾಂತಿ ನಿಮಗೆ ಶುಭವನ್ನು ತರಲಿದೆ, ಕೆಲವೊಂದು ವ್ಯವಹಾರಗಳನ್ನು ಗೌಪ್ಯವಾಗಿ ಇಡುವುದು ಉತ್ತಮ .

ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು. ವಾಸ್ತು ಸಲಹೆ /ವಿವಾಹ ಹೊಂದಾಣಿಕೆಯನ್ನು ತಿಳಿಸಲಾಗುವುದು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top