ಲೋಕಸಭಾ ಚುನಾವಣೆ ಯಾವ ರಾಶಿಯವರಿಗೆ ಶುಭ?

Picture of RB NEWS

RB NEWS

Bureau Report


ಲೋಕ ಸಭಾ ಚುನಾವಣೆ ಘೋಷಣೆ ಆಗಿದೆ .ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ .ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಿಗೆ ಏಪ್ರಿಲ್ 26 ರಂದು ಮತ್ತು ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮೇ 7 ರಂದು ಮತದಾನ ನಡೆದು ಫಲಿತಾಂಶ 04.06.2024 ರಂದು ಪ್ರಕಟವಾಗಲಿದೆ .
ಆ ದಿನ ಮಂಗಳವಾರ ,ಭರಣಿ ನಕ್ಷತ್ರ ಮೇಷ ರಾಶಿ ಆಗಿರುತ್ತದೆ .ಚಂದ್ರ ಮತ್ತು ಕುಜ ಮೇಷ ರಾಶಿಯಲ್ಲಿ ; ರವಿ ಬುಧ , ಗುರು,ಶುಕ್ರ ವೃಷಭ ರಾಶಿಯಲ್ಲಿ ,ಕೇತು ಮತ್ತು ಮಾಂದಿ ಕನ್ಯಾ ರಾಶಿಯಲ್ಲಿ ಶನಿ ಕುಂಭ ರಾಶಿಯಲ್ಲಿ ರಾಹು ಮೀನ ರಾಶಿಯಲ್ಲಿ ಇರುತ್ತಾರೆ ,
ಶುಭ ಫಲ ಅಥವಾ ಗುರುವಿನ ಅನುಗ್ರಹ ,ದೈವಾನುಗ್ರಹ ಹೊಂದಿರುವ ರಾಶಿಗಳು ಈ ರೀತಿ ಇವೆ ;1 . ಮೇಷ ರಾಶಿಯವರಿಗೆ ದ್ವಿತೀಯಾದಲ್ಲಿ ರವಿ ಬುಧ,ಗುರು ಶುಕ್ರ ಬಂದಿದ್ದುಉತ್ತಮ ಯೋಗವನ್ನು ಕೊಡುತ್ತಿದ್ದಾರೆ . ಶನಿಯೂ ರಾಜಕೀಯ ಬಲವನ್ನು ಕೊಡುವವನಾಗಿದ್ದು ಲಾಭ ಕ್ಷೇತ್ರದಲ್ಲಿ ಇದ್ದಾನೆ .
2.ಕರ್ಕಾಟಕ ರಾಶಿಯವರಿಗೆ ಲಾಭ ಕ್ಷೇತ್ರದಲ್ಲಿ ರವಿ ಬುಧ ಗುರು ಶುಕ್ರ ಹೀಗೆ 4 ಗ್ರಹರ ಸಂಯೋಗ ಅತ್ಯುತ್ತಮವಾಗಿದೆ . ಶನಿಗೆ ಉತ್ತಮವಾದ ಪರಿಹಾರವೊಂದನ್ನು ಮಾಡಿಕೊಳ್ಳಬೇಕು . ವಿಷ್ಣು ಸಹಸ್ರನಾಮ ಪಾರಾಯಣ 1008 ಬಾರಿ ಮಾಡಿಸಿ ವಿಷ್ಣು ದೇವರಿಗೆ ವಿಶೇಷ ಸೇವೆಯನ್ನು ಮಾಡಿಸಬೇಕು .
3.ಕನ್ಯಾ ರಾಶಿಯವರಿಗೆ ಜನ್ಮದಲ್ಲಿ ಇರುವ ಕೇತುವಿಗೆ ,ಅಷ್ಟಮದಲ್ಲಿ ಇರುವ ಚಂದ್ರ ಮತ್ತು ಕುಜನಿಗೆ ಪರಿಹಾರ ಅಗತ್ಯ . ಆದರೆ ಭಾಗ್ಯದಲ್ಲಿ 4 ಗ್ರಹರು ರವಿ,ಬುಧ ,ಗುರು ,ಶುಕ್ರ ಮತ್ತು 6 ನೇ ಮನೆಯಲ್ಲಿ ಶನಿ ಇರುವುದರಿಂದ ಇವರಿಗೆ ಶುಭವಾಗಲಿದೆ .
4.ವೃಶ್ಚಿಕ ರಾಶಿಯ ಅಭ್ಯರ್ಥಿಗಳಿಗೆ ಅತ್ಯಂತ ಶುಭದಾಯಕವಾದ ದಿನವಾಗಿದೆ . ಶನಿ ಮತ್ತು ರಾಹುವಿಗೆ ಪರಿಹಾರ ಅಗತ್ಯ .6 ನೇ ಮನೆಯಲ್ಲಿ ಚಂದ್ರ ಮತ್ತು ಕುಜ ಸಪ್ತಮದಲ್ಲಿ ಇರುವ ರವಿ,ಬುಧ ,ಗುರು ,ಶುಕ್ರ ,ಲಾಭ ಕ್ಷೇತ್ರದಲ್ಲಿ ಬಂದಿರುವ ಕೇತು ಮತ್ತು ಮಾಂದಿ ಅದ್ಭುತ ಯಶಸ್ಸನ್ನು ನೀಡಲಿದ್ದಾರೆ .
5.ಮಕರ ರಾಶಿಯ ಅಭ್ಯರ್ಥಿಗಳಿಗೆ ದ್ವಿತೀಯದ ಶನಿಗೆ ಪರಿಹಾರ ಅಗತ್ಯ . ಸುಖ ಸ್ಥಾನದ ಚಂದ್ರ ಮತ್ತು ಕುಜನಿಗೆ ಪರಿಹಾರ ಅಗತ್ಯವಿದೆ ,ಪಂಚಮದಲ್ಲಿ ಬಂದಿರುವ ರವಿ ಬುಧ ಶುಕ್ರ ದೋಷವನ್ನು ಸೂಚಿಸುತ್ತಿದ್ದರೂ ,ಜೊತೆಯಲ್ಲಿ ಗುರು ಬಂದಿರುವುದರಿಂದ ಶುಭವಾಗಲಿದೆ . ಪ್ರಯತ್ನ ಅಗತ್ಯವಿದೆ .
ಉಳಿದ ರಾಶಿಯವರಿಗೆ ಈ ಸಮಯದಲ್ಲಿ ಗುರುವಿನ ಅನುಗ್ರಹವಿರುವುದಿಲ್ಲ .ಮೂಲ ಜಾತಕದ ವಿಮರ್ಶೆ ಮಾಡಿಕೊಂಡು ಮುಂದುವರಿಯಬೇಕು .ಎಲ್ಲರಿಗೂ ಶುಭವಾಗಲಿ .

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top