[t4b-ticker]

ಲೇಖಕಿ ಡಾ.ಲಾವಣ್ಯಪ್ರಭೆಯವರ “ಪಾರು”(ಬೆಲೆವೆಣ್ಣು)ಕಾದಂಬರಿ ಲೋಕಾರ್ಪಣೆ

Picture of RB NEWS

RB NEWS

Bureau Report

ಬೆಂಗಳೂರು : ಲೇಖಕಿ ಡಾ.ಲಾವಣ್ಯಪ್ರಭೆಯವರ “ಪಾರು”(ಬೆಲೆವೆಣ್ಣು) ಕಾದಂಬರಿಯನ್ನು ಲೇಖಕ ನಾಗಲೇಖ ಲೋಕಾರ್ಪಣೆಗೈದಿದ್ದಾರೆ‌

ಬೆಂಗಳೂರು ಬಸವನಗುಡಿ ಡಾಕ್ಟರ್ ಅಶ್ವಥ ಭವನದಲ್ಲಿ
ಮಾರ್ಚ್ 9 ಸಂಜೆ ಏರ್ಪಡಿಸಲಾದ ಸರಳ ಕಾರ್ಯಕ್ರಮದಲ್ಲಿ ಲೇಖಕ‌ ನಾಗಲೇಖ ಅವರು ಕೃತಿಯನ್ನು ಬಿಡುಗಡೆಗೊಳಿಸಿದರು.

ಅವ್ಯಕ್ತ‌ ಪ್ರಕಾಶನ ಹಾಗೂ‌ ರಕ್ಷಣ್ ಪಬ್ಲಿಕೇಷನ್ ನವರ ಕೊಡುಗೆ ಆಗಿದೆ.
ಪ್ರತಿಲಿಪಿಯಲ್ಲಿ ಅಪಾರ ಜನಮನ್ನಣೆಗಳಿಸಿ
ಮನ ಮುಟ್ಟಿರುವ ಈ ಕಾದಂಬರಿಯನ್ನು ಪುಸ್ತಕ ರೂಪದಲ್ಲಿ ಹೊರತಂದು ಅದನ್ನು ಮಾದರಿ ಆದರ್ಶ ಪತ್ರಕರ್ತರಾದ ದಿವಂಗತ ಮನೋಹರ್ ಪ್ರಸಾದ್ ಅವರಿಗೆ ಲಾವಣ್ಯಪ್ರಭೆ ಅರ್ಪಿಸಿದ್ಧಾರೆ.

ಪುಸ್ತಕದ ಪ್ರತಿಗಳನ್ನು ಉಚಿತವಾಗಿ ಗ್ರಂಥಾಲಯಗಳಿಗೆ ನೀಡಲು ಬಯಸಿದ್ದಾರೆ.

ಸಾಹಿತ್ಯ ಅಭಿಮಾನಿಗಳು ಪಾಲ್ಗೊಂಡರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top