ಪರ್ಪಲೆಗಿರಿ ಬ್ರಹ್ಮಕಲಶೋತ್ಸವ ಹಸಿರು ಹೊರೆಕಾಣಿಕೆಗೆ ಚಾಲನೆ
ಕಾರ್ಕಳ : ಅತ್ತೂರು ಪರ್ಪಲೆಯ ಕೃಷ್ಣಗಿರಿ ಶ್ರೀ ಕಲ್ಕುಡ ದೈವಸ್ಥಾನ ಟ್ರಸ್ಟ್ ವತಿಯಿಂದ ಅತ್ತೂರು ಪರ್ಪಲೆಗಿರಿ ಪುನರುತ್ಥಾನ ಸಮಿತಿ ಆಶ್ರಯದಲ್ಲಿ ಕಲ್ಕುಡ ಕಲ್ಲುರ್ಟಿ-ತೂಕತ್ತರಿ ಧರ್ಮದೈವಗಳ ಶಿಲಾಮಯ ಗರ್ಭಗೃಹ ಸಮರ್ಪಣೆ ಮತ್ತು ದೈವ ಬಿಂಬಪ್ರತಿಷ್ಠೆ ಸಾನಿಧ್ಯ ಕಲಶೋತ್ಸವ ಹಾಗೂ ವೈಭವದ ಸಿರಿ ಸಿಂಗಾರ ನೇಮೋತ್ಸವ ಮೇ 17 ರಿಂದ ಮೂರು ದಿನಗಳ ಕಾಲ ನಡೆಯಲಿದೆ.
ಅದರ ಅಂಗವಾಗಿ ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆ ಕಾರ್ಕಳ ಬಂಡೀಮಠದಲ್ಲಿ ಶನಿವಾರ ಚಾಲನೆ ನೀಡ ಲಾಯಿತು.


























