ಟೀಮ್ ನೇಷನ್ ಫಸ್ಟ್ ಇದರ ವತಿಯಿಂದ ಚಿಣ್ಣರ ನಟ್ಟಿ

Picture of RB NEWS

RB NEWS

Bureau Report

ಉಡುಪಿ : ಟೀಮ್ ನೇಷನ್ ಫಸ್ಟ್ (ರಿ) ಇದರ ವತಿಯಿಂದ ಆಯೋಜಿಸಿದ್ದ “ಚಿಣ್ಣರ ನಟ್ಟಿ” ಕಾರ್ಯಕ್ರಮವು ಆದಿತ್ಯವಾರದಂದು ಸಂಕೇಶ ಕಿದಿಯೂರು ಹೊಸ ನೀರಿನ ಟ್ಯಾಂಕ್ ಬಳಿ ಯಶಸ್ವಿಯಾಗಿ ಜರಗಿತು.

ಶಾಸಕ ಯಶ್ಪಾಲ್ ಸುವರ್ಣ , ಮಾಜಿ ಶಾಸಕ ರಘುಪತಿ ಭಟ್, ಉದ್ಯಮಿ ಪ್ರವೀಣ್ ಶೆಟ್ಟಿ ಕಪ್ಪೆಟ್ಟು ಹಾಗು ಮಲ್ಪೆ ಠಾಣಾಧಿಕಾರಿ ಲೋಹಿತ್ ಕುಮಾರ್ ಪಾಲ್ಗೊಂಡರು.

ಟೀಮ್ ನೇಷನ್ ಫಸ್ಟ್ ಅಧ್ಯಕ್ಷ ಸೂರಜ್ ಕಿದಿಯೂರ್ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು.

ಸುಮಾರು ೨೦೦ ಶಾಲಾ ಮಕ್ಕಳು, ಸುಮಾರು ೧೫೦ ಸಾರ್ವಜನಿಕರು ಹಾಗು ಊರಿನವರು ನಟ್ಟಿ ಯಲ್ಲಿ ಪಾಲ್ಗೊಂಡರು.

ತಂಡದ ಉಪಾಧ್ಯಕ್ಷ. ಡಾ. ಅತುಲ್ ಯು ಆರ್ ಧನ್ಯವಾದ ಅರ್ಪಿಸಿದರು. ಸುಷ್ಮಾ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಮಕ್ಕಳಿಗೆ ಭತ್ತದ ಸಸಿ ನೆಡುವ ಪ್ರಾತ್ಯಕ್ಷಿಕೆ ನೀಡಿ ನಾಟಿ ಮಾಡಿಸಲಾಯಿತು. ವಡಭಾಂಡೇಶ್ವರ ವಾರ್ಡಿನ ಕೌನ್ಸಿಲರ್ ಯೋಗೇಶ್ ಸಾಲಿಯಾನ್ , ತಂಡದ ಹಿರಿಯ ಸದಸ್ಯರಾದ ಸಂತೋಷ್ ಕಿದಿಯೂರ್, ಪೂಜಾ ಸೂರಜ್ , ಸಾತ್ವಿಕ್ ಗಡಿಯಾರ್, ಅಜಿತ್ ಬನ್ನೂರು ಮುಂತಾದವರು ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top