ಗಡಿನಾಡಲ್ಲಿ ನೆಲೆಯೂರಿದ ಕೊಪ್ಪಲು (ಶ್ರೀಮಂತ) ಗುಳಿಗ

Picture of RB NEWS

RB NEWS

Bureau Report

ಗಡಿನಾಡಲ್ಲಿ ನೆಲೆಯೂರಿದ ಕೊಪ್ಪಲು (ಶ್ರೀಮಂತ) ಗುಳಿಗ
– ಆರ್.ಬಿ.ಜಗದೀಶ್

ವಿಜಯನಗರ ಸಾಮ್ರಾಜ್ಯದ ಕಾಲಘಟ್ಟ ಅದಾಗಿತ್ತು. ಇಕ್ಕೇರಿ ರಾಜನು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ ಸಂದರ್ಭದಲ್ಲಿ ಕಾಸರಗೋಡಿನ ವಿವಿಧೆಡೆಗಳಲ್ಲಿ ಹಲವು ಕೋಟೆಗಳು ನಿರ್ಮಾಣಗೊಂಡಿದವು‌.

ಹೊಸದುರ್ಗ, ಬಂದಡ್ಕ, ಬೇಕಲ, ಚಂದ್ರಗಿರಿ, ಕಾಸರಗೋಡು, ಎಡನೀರು, ಕುಂಬಳೆ ಕೋಟೆಗಳು ಒಳಗೊಂಡಿದೆ.

ಇಕ್ಕೇರಿ ನಾಯಕನ ಅತೀ ವಿಶ್ವಾಸಿಗಳ ಪೈಕಿ ರಾಮಕ್ಷತ್ರಿಯ ಯಾ ಕೋಟೆಯವರು ಅಗ್ರಪಂಕ್ತಿಗೆ ಸೇರಿದವರು.

ಕೋಟೆಗಳ ರಕ್ಷಣೆಯಲ್ಲಿ ರಾಮಕ್ಷತ್ರಿಯ ಯಾ ಕೋಟೆಯವರ ಪಾತ್ರ ಮಹತ್ವವಾಗಿದೆ.‌

ರಾಮಕ್ಷತ್ರಿಯ ಯಾ ಕೋಟೆಯವರು ಕೋಟೆಗಳ ಪರಿಸರದಲ್ಲಿ ನೆಲೆಸಿಕೊಂಡು ಕೋಟೆ ಹನುಮಂತ ಹಾಗೂ ಮಾರಿಯಮ್ಮ ದೇವಿಯ ಆರಾಧನೆಯನ್ನು ನಡೆಸುತ್ತಾ ಬಂದಿದ್ದಾರೆ. ಒಂದೊಂದು ಕುಟುಂಬವು ಒಂದೊಂದು ದೇವರನ್ನು ಆರಾಧಿಸಿಕೊಂಡು ಬಂದಿದ್ದಾರೆ.

ವರ್ಷಾವಧಿಯ ಪ್ರತಿಷ್ಠಾಮಹೋತ್ಸವದ ಸಂದರ್ಭದಲ್ಲಿ ಮೂಲ ದೇವರಿಗೆ ವಿಶೇಷ ಅಲಂಕಾರದೊಂದಿಗೆ ಪೂಜಾ ಕೈಂಕರ್ಯದ ಜೊತೆಗೆ ವೆಂಕಟರಮಣ ದೇವರ ಹುಂಡಿ(ಮುಡುಪು) ,ನಾಗರಾಧನೆ, ಗುಳಿಗ ಕೋಲಗಳೊಂದಿಗೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುತ್ತಾ ಬರುತ್ತಾರೆ.

ಕೊಪ್ಪಲು ಕುಟುಂಬದಲ್ಲಿ ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ಹಾಗೂ ಧಾರ್ಮಿಕ ಶ್ರದ್ಧೆ ಭಕ್ತಿಯನ್ನು ಚಾಚು ತಪ್ಪದೇ ಪರಿಪಾಲಿಸುತ್ತಾ ಬಂದಿರುವವರು ಆಗಿರುತ್ತಾರೆ. ದೇಶದ ನಾನಾ ಭಾಗಗಳಲ್ಲಿ ಇವರು ನೆಲೆಸಿದರೂ ಪ್ರತಿಷ್ಠಾಮಹೋತ್ಸವದ ದಿನಗಳಲ್ಲಿ ಮೂಲಮನೆಗೆ ಬಂದೇ ಬರುತ್ತಾರೆ.

ರಾಮಕ್ಷತ್ರಿಯ ಯಾ ಕೋಟೆಯವರ ಕುಟುಂಬಸ್ಥರ ಮನೆಯಲ್ಲಿ ಜರಗುತ್ತಾ ಬಂದಿರುವ ಧಾರ್ಮಿಕ, ಸಾಂಸ್ಕ್ರತಿಕ, ಕಲೆ, ಆಚಾರ-ವಿಚಾರಗಳಿಂದಾಗಿ ಕಾಸರಗೋಡಿನಲ್ಲಿ ಕನ್ನಡ ಬಾಷೆ ಉಳಿದು ಬೆಳೆಯಲು ಒಂದು ಕಾರಣವೂ ಆಗಿದೆ ಎಂದರೆ ತಪ್ಪಾಗಲಾರದು.
ಕಾರಣಿಕವುಳ್ಳ ಕೊಪ್ಪಲು(ಶ್ರೀಮಂತ) ಗುಳಿಗ……

ಚಂದ್ರಗಿರಿ ಕೋಟೆಗೆ ಸಂಬಂಧಿಸಿದಂತೆ ಚಂದ್ರಗಿರಿ ಕೊಪ್ಪಲು ಶ್ರೀ ಮಹಮ್ಮಾಯಿ ಅಮ್ಮನವರ ದೇವಳ ಎಂಬುವುದು ರಾಮಕ್ಷತ್ರಿಯ ಅಥವಾ ಕೋಟೆಯವರ ಒಂದು ಕುಟುಂಬಸ್ಥರ ಮನೆಯಾಗಿದೆ.

ಮಹಮ್ಮಾಯಿ ದೇವಿ ಇವರು ಆರಾಧಿಸುತ್ತಿರುವ ಕುಲದೇವರು. ಕೊಪ್ಪಲು ಗುಳಿಗವು ಕಾರಣಿಕ ದೈವ ಶಕ್ತಿಯಾಗಿದೆ.
ಜಾತಿ-ಧರ್ಮ-ಭಾಷೆ ಇವೆಲ್ಲವನ್ನು ಮೀರಿ ಸರ್ವರು ಭಕ್ತಿಪರವಶರಾಗಿ ಆರಾಧಿಸುತ್ತಾರೆ. ತಮ್ಮ ಇಷ್ಟಾರ್ಥವಾಗಿ ಹರಕೆ ಸಂದಾಯ ಮಾಡುತ್ತಾ ಬಂದಿದ್ದಾರೆ. ಇದರ ಭಾಗವಾಗಿ ಕೊಪ್ಪಲು ಗುಳಿಗನಿಗೆ ಭಕ್ತಾದಿಗಳು ಸಂದಾಯ ಮಾಡಿದ ಚಿನ್ನ, ಬೆಳ್ಳು ಆಭರಣಗಳ ಸಂಪತ್ತಿನಿಂದಾಗಿ ಶ್ರೀಮಂತ ಗುಳಿಗ ಎಂದು ಚಾಲ್ತಿಗೆ ಬಂದಿದೆ. ಕಾರಣಿಕ ಶಕ್ತಿಯಿಂದಾಗಿ ದಿನದಿಂದ ದಿನಕ್ಕೆ ಹರಕೆ ಸಲ್ಲಿಸುವ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿರುವುದು ಗಮನಾರ್ಹ.

ಪ್ರತಿವರ್ಷ ಡಿಸೆಂಬರ್ ತಿಂಗಳ ಆರಂಭದಿಂದ ಜುಲಾಯಿ ತಿಂಗಳ ಸಂಕ್ರಮಣದ ವರೆಗಿನ ಕಾಲಘಟ್ಟದಲ್ಲಿ 100 ಕ್ಕೂ ಮಿಕ್ಕಿ ಹರಕೆ ಕೋಲಗಳು ನಡೆಯುತ್ತದೆ.
ನಿಗದಿತ ದಿನಗಳಲ್ಲಿ ನಡೆಯುವ ಹರಕೆ ಕೋಲಗಳು ಒಂದು, ಎರಡು,ಮೂರು ನಡೆಯುತ್ತದೆ.

ಹರಕೆ ಕೋಲ ನೀಡುವ ಭಕ್ತರಿಗೆ ಮಧ್ಯಾಹ್ನ ಅನ್ನದಾನ ನೀಡುವ ಪರಿಪಾಠವನ್ನು ಇಂದಿಗೂ ಕೊಪ್ಪಲು ಕುಟುಂಬಸ್ಥರು ಚಾಚುತಪ್ಪದೇ ಮುಂದುವರಿಸುತ್ತಾ ಬಂದಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top