ಕಾರ್ಕಳ : ಉತ್ತರ ಕನ್ನಡ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಕೆ.ಅಶೋಕ್ ಅವರಿಗೆ ಕಾರ್ಕಳ ವಕೀಲರ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಯಿತು.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ 1985 ಸೆಪ್ಪೆಂಬರ್ 23ರಂದು ಸಹಾಯಕ ಸರಕಾರಿ ಅಭಿಯೋಜಕರ ಕಚೇರಿಯಲ್ಲಿ ಬೆರಳಚ್ಚುಗಾರರಾಗಿ ನಿಯುಕ್ತಿಗೊಂಡರು, ತದಬಳಿಕ ಮಂಗಳೂರು, ಬಂಟವಾಳ, ಕುಮಟಾ, ಕಾರ್ಕಳ, ಮಂಗಳೂರು ಗಳಲ್ಲೂ ಸೇವೆ ಸಲ್ಲಿಸಿರುವುದರೊಂದಿಗೆ ಕೆ. ಅಶೋಕ ಅವರು ಒಟ್ಟು 38 ವರ್ಷ 8 ತಿಂಗಳು ಮತ್ತು 9 ದಿನಗಳ ಸೇವೆಯನ್ನು ಪೂರೈಸಿದ್ದಾರೆ.
ಕಾರ್ಕಳದ ವಕೀಲರ ಸಂಘದ ಅಧ್ಯಕ್ಷ ಸುನೀಲ್ಕುಮಾರ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರ ಉಪಸ್ಥಿತರಿದ್ದರು.






































