ಅಂತರ್ ಜಿಲ್ಲಾ ಕಳ್ಳ ಪೊಲೀಸರ ಬಲೆಗೆ

Picture of RB NEWS

RB NEWS

Bureau Report

ಮೂಡುಬಿದಿರೆ: ಕಳವು ಪ್ರಕರಣವನ್ನು ಭೇದಿಸಿದ ಮೂಡುಬಿದಿರೆ ಪೊಲೀಸರು ಅಂತರ್ ಜಿಲ್ಲಾ ಕಳ್ಳನೊಬ್ಬನನ್ನು ಮೂಡಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ.ನೇತೃತ್ವದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಳವು ಆದ ಸೊತ್ತು ಸಹಿತ ನಗದನ್ನು ವಶಪಡಿಸಿದ್ದಾರೆ.

ಮೂಡಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎ.04 ರಂದು ಸಂಜೆ 4.00 ಗಂಟೆಯಿಂದ ಎ.28ರಂದು ಬೆಳಿಗ್ಗೆ. 07.25 ಗಂಟೆಯ ಮದ್ಯಾವಧಿಯಲ್ಲಿ ಮಾರ್ಪಾಡಿ ಗ್ರಾಮದ ಕಡಲಕೆರೆ ಇಂಡಸ್ಟ್ರೀಯಲ್ ಏರಿಯಾದ VILCART ಎಂಬ ಹೆಸರಿನ ಗೋಡೌನ್ ನ ಶಟರಿನ ಬೀಗವನ್ನು ಯಾರೋ ಕಳ್ಳರು ಮೀಟಿ ಗೋಡೌನ ಒಳಗೆ ಪ್ರವೇಶಿಸಿ ಗೋಡೌನ್ ನಲ್ಲಿದ್ದ 2 ಲ್ಯಾಬ್ ಟಾಪ್ ಮತ್ತು ನಗದು ಹಣ ಇರುವ ಲಾಕರನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಕುರಿತು ನೀಡಿದ ದೂರಿನ ಮೇರೆಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.‌

ಪ್ರಕರಣದ ಆರೋಪಿಗಳ ಮತ್ತು ಸೊತ್ತು ಪತ್ತೆಯ ಬಗ್ಗೆ ಮೂಡಬಿದ್ರೆ ಪೊಲೀಸ್ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಗೋಡೌನ್ ನಲ್ಲಿ ಕಳ್ಳತನ ಮಾಡಿದ ಅಂತರ್ ಜಿಲ್ಲಾ ಆರೋಪಿಯಾದ ಚಂದ್ರು ಪ್ರಾಯ 33 ವರ್ಷ ತಂದೆ: ರಾಮಣ್ಣ, ವಾಸ: ಅಂಬೇಡ್ಕರ್ ಕಾಲೋನಿ, ತಡಕಲ್ ಗ್ರಾಮ ಉಟಕನೂರು ಅಂಚೆ, ಮಾನ್ವಿ ತಾಲೂಕು ರಾಯಚೂರು ಜಿಲ್ಲೆ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು.

ಆರೋಪಿಯು ಈ ಮೇಲೆ ನಮೂದಿಸಿದ ಕೃತ್ಯವನ್ನು ವ್ಯಸಗಿರುವುದಾಗಿ ಒಪ್ಪಿಕೊಂಡು, ಗೋಡೌನ್ ನಲ್ಲಿ ಕಳ್ಳತನ ಮಾಡಿದ H.P ಕಂಪನೀಯ 2 LAPTOP ಮತ್ತು ಲಾಕರ್ ಹಾಗೂ ಲಾಕರ್ ನಲ್ಲಿದ್ದ ರೂ. 2,88,000 ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಮಹೀಂದ್ರ ಕಂಪನೀಯ ಬೊಲೇರೊ ಪಿಕಪ್ ವಾಹನವನ್ನು ಕೂಡ ಸ್ವಾಧೀನ ಪಡಿಸಿಕೊಂಡಿರುವುದಾಗಿದೆ.

ಆರೋಪಿಯಿಂದ ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂ 6,50,000 ಆಗಬಹುದು.

ಈ ಪ್ರಕರಣದಲ್ಲಿ ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್, IPS ರವರ ಮಾರ್ಗದರ್ಶನದಂತೆ, ಡಿಸಿಪಿ ಸಿದ್ಧಾರ್ಥ ಗೊಯಲ್ IPS (ಕಾ&ಸು), ರವಿಶಂಕರ್ ಡಿಸಿಪಿ (ಅ & ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀಕಾಂತ್.ಕೆ ರವರ ನಿರ್ದೇಶನದಂತೆ, ಈ ಕಾರ್ಯಚರಣೆಯಲ್ಲಿ ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ರವರ ನೇತೃತ್ವದ ತಂಡ ಪಿ.ಎಸ್.ಐ. ಪ್ರತಿಭಾ ಕೆ.ಸಿ, ಹಾಗೂ ಎ.ಎಸ್.ಐ ರಾಜೇಶ್ ಮತ್ತು ಹೆಚ್.ಸಿ ಗಳಾದ ರಾಜೇಶ್, ಮೊಹಮ್ಮದ್ ಇಕ್ಬಾಲ್, ಮೊಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್, ನಾಗರಾಜ್ ಲಮಾಣಿ ಮತ್ತು ಪಿ.ಸಿ ವೆಂಕಟೇಶ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top