ನೀರಿನಲ್ಲಿ ರಸ್ತೆಯೋ? ರಸ್ತೆಯಲ್ಲಿ ನೀರೋ?
ಉಡುಪಿ : ಕಡಿಮೆ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಹೊಂದಿದ್ದ ಉಡುಪಿ ಜಿಲ್ಲೆಯಲ್ಲಿ ಇನ್ನಷ್ಟು ಅಭಿವೃದ್ಧಿ ಚಟುವಟಿಕೆಗಳ ಕಾಣಬೇಕಾಗಿದೆ.
ಉಡುಪಿ ನಗರಸಭೆಯ ಕುಕ್ಕಿಕಟ್ಟೆ ಪರಿಸರದಲ್ಲಿ ಮೂಲ ಸೌಕರ್ಯ ವಂಚಿತಗೊಂಡಿರುವುದರಿಂದ ಮಳೆಗಾಲದಲ್ಲಿ ಮಳೆ ನೀರು ಇಡೀ ರಸ್ತೆಯನ್ನೇ ಆವರಿಸುತ್ತಿದೆ.
ಇದರಿಂದ ವಾಹನ ಓಡಾಟಕ್ಕೆ ಹಾಗೂ ಪಾದಚಾರಿಗಳ ನಡೆದಾಟಕ್ಕೂ ತ್ರಾಸಕರವಾಗಿದೆ. ಕೆಲವೊಂದು ಸಂದರ್ಭದಲ್ಲಿ ಪಾದಚಾರಿಗಳಿಗೆ ಇದೇ ರಸ್ತೆಯ ಕೆಸರು ನೀರಿನ ಅಭಿಷೇಕವಾಗುತ್ತಿರುತ್ತದೆ.
ತಗ್ಗು ಪ್ರದೇಶವನ್ನು ಎತ್ತರಿಸುವ ಮೂಲಕ ಕಾಂಕ್ರೀಟ್ ಕರಣ ರಸ್ತೆ ನಿರ್ಮಾಣದ ಜೊತೆಗೆ ಮಳೆನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಅಗತ್ಯವಾಗಿದ್ದು, ಇದರ ಯೋಜನೆಯೂ ಅನುಷ್ಠಾನದ ಹೊಣೆಗಾರಿಕೆ ನಗರ ಸಭೆಯದಾಗಿದೆ.


ಚಿತ್ರರಂಗದಲ್ಲಿ ಭಾರೀ ಹೆಸರು ಗಳಿಸಿರುವ ರಕ್ಷಿತ್ ಶೆಟ್ಟಿಯ ಮನೆ ಇದ್ದು, ಕೆಲವೊಂದು ಸಂದರ್ಭದಲ್ಲಿ ಅಭಿಮಾನಿಗಳ ತಂಡವು ರಾಜ್ಯದ ನಾನಾ ಕಡೆಗಳಿಂದ ಬಂದು ಹೋಗುತ್ತಿದ್ದಾರೆ.
ದೈನಂದಿನ ಚಟುವಟಿಗೆಗಳಿಗೆ ಸ್ಥಳೀಯರು ಇದೇ ರಸ್ತೆಯನ್ನು ಉಪಯೋಗಿಸುತ್ತಾ ಬಂದಿದ್ದಾರೆ.






































