ಶುಭದ ರಾವ್ ವಿರುದ್ಧ ಬಿಜೆಪಿ ಯುವ ಮೋರ್ಚಾದ ವತಿಯಿಂದ ಪೊಲೀಸರಿಗೆ ದೂರು

Picture of RB NEWS

RB NEWS

Bureau Report

ಜನಸ್ಪಂದನ ಸರಕಾರಿ ಕಾರ್ಯಕ್ರಮದಲ್ಲಿ ಕಾನೂನುಬಾಹಿರವಾಗಿ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಲ್ಲದೆ ಅದನ್ನು ಪ್ರಶ್ನಿಸಿದ ಅಧಿಕಾರಿಯ ವಿರುದ್ಧ
ಏರು ದನಿಯಲ್ಲಿ ಮಾತಾಡಿ ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಶುಭದ ರಾವ್‌ ಅವರು ಶಾಂತಿ ಭಂಗ ಮಾಡಿರುತ್ತಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ತಿಂಗಳ ಹಿಂದೆಯೂ ಕೂಡ ಬೈಲೂರಿನ ಉಮಿಕಲ್ ಬೆಟ್ಟಕ್ಕೆ ಕಾನೂನುಬಾಹಿರವಾಗಿ ತೆರಳಿ, ಪರಶುರಾಮ ಮೂರ್ತಿಯ ಭಾಗಗಳನ್ನು ಕಿತ್ತು ಸಾರ್ವಜನಿಕ ಆಸ್ತಿಯನ್ನು ಹಾನಿ ಮಾಡಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಕಳ ಶಾಸಕರನ್ನು ತುಚ್ಛ ಶಬ್ದಗಳಿಂದ ನಿಂದನೆ ಕೂಡ ಮಾಡಿದ್ದಾರೆ.

ಸಾರ್ವಜನಿಕ ಸರ್ಕಾರಿ ಕಾರ್ಯಕ್ರಮಗಳಲ್ಲಿ ಈ ರೀತಿ ವರ್ತನೆ ಮಾಡುವುದು ಸಮಾಜದಲ್ಲಿ ಅಹಿತಕರ ಘಟನೆ ನಡೆಯುವಂತೆ ಪ್ರಚೋದನೆ ಮಾಡುವುದಲ್ಲದೇ, ಸಾರ್ವಜನಿಕ ಶಾಂತಿ ಭಂಗ ಹಾಗೂ ವೈಯಕ್ತಿಕ ನಿಂದನೆಯನ್ನು ಕೂಡ ಮಾಡುತ್ತಿದ್ದಾರೆ. ಇಂತಹ ಶಾಂತಿ ಕದಡುವ ಕಾರ್ಯಗಳು ಮರುಕಳಿಸಬಾರದು. ಶುಭದ್ ರಾವ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಕಾರ್ಕಳ ಮಂಡಲದಿಂದ ದೂರು ಸಲ್ಲಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top