ಮಾತೃಭಾಷೆ ಕೊಂಕಣಿ: ಕಾಸರಗೋಡಿನ ವಿದ್ಯಾರ್ಥಿನಿಗೆ ಉನ್ನತ ಶಿಕ್ಷಣ ನಿರಾಕರಣೆ

Picture of RB NEWS

RB NEWS

Bureau Report

ಕ್ರೈಸ್ತರು ಕೊಂಕಣಿ ಭಾಷೆ ಮಾತನಾಡುವವರು ಕಾಸರಗೋ.ಡಿನ ಗಡಿನಾಡು ಪ್ರದೇಶದಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಮಂದಿ ಇದ್ದಾರೆ

  • ಐವನ್ ಡಿಸೋಜಾ ವಿಧಾನಪರಿಷತ್ ಸದಸ್ಯರು

ಬೆಂಗಳೂರು : ವಿದ್ಯಾರ್ಥಿನಿ ಕರ್ನಾಟಕದಲ್ಲಿ ಉನ್ನತ ಶಿಕ್ಷಣಕ್ಕಾಗಿ ಸಿಇಟಿ ಬರೆದು ಉತ್ತೀರ್ಣಳಾಗಿದ್ದರೂ ಸೀಟು ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆನ್ನುವ ವಿಚಾರವನ್ನು ವಿಧಾನ ಪರಿಷತ್‌ನ ಕಸಾಪದ ಶೂನ್ಯ ವೇಳೆಯಲ್ಲಿ ಸದಸ್ಯರಾದ ಐವನ್ ಡಿಸೋಜಾ ಪ್ರಸ್ತಾಪಿಸಿದ್ದಾರೆ.

ಶಾಲಾ ಪ್ರಮಾಣ ಪತ್ರದಲ್ಲಿ ವಿದ್ಯಾರ್ಥಿನಿಯ ಮಾತೃಭಾಷೆ ಕೊಂಕಣಿ ಎಂದು ದಾಖಲಾಗಿರುವ ಕಾರಣ ಆಕೆಗೆ ಪ್ರವೇಶ ನಿರಾಕರಿಸಲಾಗಿದೆ. ಹೈಯರ್ ಸೆಕೆಂಡರಿಯಲ್ಲಿ ದ್ವಿತೀಯ ಭಾಷೆಯಾಗಿ ಕನ್ನಡವನ್ನೇ ಆಯ್ದುಕೊಂಡಿದ್ದಳು. ಹೈಯರ್ ಸೆಕೆಂಡರಿಯಲ್ಲಿ ಶೇ. 80 ಅಂಕಗಳನ್ನು ಪಡೆದು ಕರ್ನಾಟಕ ಸಿಇಟಿಯಲ್ಲಿ ಉತ್ತೀರ್ಣರಾಗಿ ಬಿಎಸ್ಸಿ (ನರ್ಸಿಂಗ್‌)ಗೆ ಅರ್ಹತೆ ಪಡೆದಿದ್ದರು.ಆದರೆ ಪ್ರಮಾಣ ಪತ್ರ ಪರಿಶೀಲನೆ ವೇಳೆ ವಿದ್ಯಾರ್ಥಿನಿಯ ಮಾತೃಭಾಷೆ ಕೊಂಕಣಿ ಎಂದು ದಾಖಲಾಗಿರುವುದನ್ನು ಕಾರಣವಾಗಿಸಿ ಆಕೆಗೆ ಸೀಟು ನಿರಾಕರಿಸಲಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top