ಆಷಾಢ ಮಾಸದಲ್ಲಿ ಮಾಡುವ ಲಕ್ಷ್ಮೀ ಪೂಜೆಯ ಮಹತ್ವ ,ಪೂಜಾ ವಿಧಾನ ✍️ ಕೆ.ಸುಬ್ರಹ್ಮಣ್ಯ ಆಚಾರ್ಯ
ಯಾಸಾ ಪದ್ಮಾನಸ್ಥಾ ವಿಪುಲಕಟಿತಟೀ ಪದ್ಮಪತ್ರಾಯತಾಕ್ಷೀ ಗಂಭೀರಾವರ್ತನಾಭಿ : ಸ್ತನಭರನ ಮಿತಾ
ಶುಭ್ರ ವಸ್ತ್ರೋತ್ತರೀಯಾ !ಲಕ್ಷ್ಮೀರ್ದಿವ್ಯೈ ರ್ಗಜೇಂದ್ರೈರ್ಮಣಿಗಣಖಚಿತೈ: ಸ್ನಾಪಿತಾ ಹೇಮಕುಂಬೈ
ರ್ನಿತ್ಯಂ ಸಾ ಪದ್ಮಹಸ್ತಾ ಮಮ ವಸತು ಗೃಹೇ ಸರ್ವ ಮಾಂಗಲ್ಯಯುಕ್ತಾ!!
ಆಷಾಢ ಮಾಸ ಜುಲಾಯಿ ತಿಂಗಳ ದಿನಾಂಕ 06 ರಿಂದ ಆಗಸ್ಟ್ ತಿಂಗಳ ದಿನಾಂಕ 04 ರ ವರೆಗೆ ಇರುತ್ತದೆ
.ಮುತ್ತೈದೆಯರು ಈ ತಿಂಗಳಲ್ಲಿಬರುವ ಶುಕ್ರವಾರಗಳಂದು ಲಕ್ಷ್ಮೀ ಪೂಜೆಯನ್ನು ಮಾಡುತ್ತಾರೆ . ಈ
ಬಾರಿ ದಿನಾಂಕ 12, 19, 26, ಮತ್ತು ಆಗಸ್ಟ್ ತಿಂಗಳ ದಿನಾಂಕ 2 ರಂದು ಬರುತ್ತದೆ .ಈ ಪೂಜೆಗೆ ಅತ್ಯಂತ
ಮಹತ್ವವಿದೆ.
ಒಂದು ಹೆಣ್ಣಿಗೆ ದೇವಿಯ ಸ್ಥಾನ ಮಾನವನ್ನು ಜಗತ್ತು ಕೊಟ್ಟಿದೆ .ಮಹಾಲಕ್ಷ್ಮೀ ,ಮಹಾ
ಸರಸ್ವತಿ ,ಮಹಾ ಕಾಳೀ ಸ್ವರೂಪಿಯಾದ ಮಹಾ ಶಕ್ತಿಯನ್ನುಧರ್ಮಸಿಂಧು ಗ್ರಂಥದಲ್ಲಿ ವಿವರಿಸಿರುವಂತೆ
ಆಚರಿಸಬೇಕು. ,ರಾಕ್ಷಸರಾದ ಮಧುಕೈಟಭ, ಮಹಿಷಾಸುರ ,ಸುಧೂರ್ಮಲೋಚನ ,ರಕ್ತಬೀಜಾಸುರ
,ನಿಶುಂಭ ,ಇವರನ್ನುದೇವಿ ವಿವಿಧ ರೂಪಗಳಿಂದ , ವಧೆ ಮಾಡಿ ಈ ಜಗತ್ತನ್ನು ರಕ್ಷಣೆ ಮಾಡಿದವಳು
.ಇವಳನ್ನು ಪೂಜೆ ಮಾಡುತ್ತಾ ನಾವು ಭಕ್ತಿಯಿಂದ “ದೇಹಿ ಸೌಭಾಗ್ಯಮಾರೋಗ್ಯದೇಹಿ ದೇವಿ ಪರಮ್
ಸುಖಮ್ ! ದೇಹಿ ಕಲ್ಯಾಣಮ್ , ವಿಪುಲಾಮ್ ಶ್ರಿಯಮ್, ವಿದ್ಯಾವಂತಮ್ ,ಯಶಸ್ವಂತಮ್ ಕುರು
,ಪುತ್ರಾನ್ ದೇಹಿ ,ಧನಮ್ ದೇಹಿ ,ಸರ್ವ ಕಾಮಾಂಶ್ಚ ದೇಹಿ ಮೇ !!ಈ ರೀತಿಯಾಗಿ ಬೇಡುತ್ತೇವೆ .ಈ ರೀತಿ
ಬೇಡುವುದರಿಂದ ನಮ್ಮನ್ನುಕಾಡುವ ವಿನಾಶಕಾರಿ ಶಕ್ತಿಗಳಿಂದ ರಕ್ಷಣೆ ಪಡೆಯುತ್ತೇವೆ .”ಅಂತರಿಕ್ಷಚರಾ
ಘೋರಾ ಡಾಕಿನ್ಯಶ್ಚ ಮಹಾ ಬಲಾ: !ಗ್ರಹಾಭೂತಪಿಶಾಚಾಶ್ಚ ಯಕ್ಷ ಗಂಧರ್ವ ರಾಕ್ಷಸಾ:!!ಬ್ರಹ್ಮ ರಾಕ್ಷಸ
ವೇತಾಲಾ: ಕೂಷ್ಮಾಂಡಾ ಭೈರವಾದಯ: !ನಶ್ಯಂತಿ ದರ್ಶನಾತ್ಯಸ್ಯ ಕವಚೇ ಹೃದಿ ಸಂಸ್ಥಿತೆ ಅಂದರೆ ಮಾಟ
ಮಂತ್ರ ಕೃತ್ರಿಮ ಬ್ರಹ್ಮರಾಕ್ಷಸ ಇತ್ಯಾದಿ ಭಾಧೆಗಳಿಂದ ಮುಕ್ತಿಯನ್ನು ಹೊಂದುತ್ತೇವೆ !!ನಮ್ಮ ಮರಣಾ
ನಂತರ “ದೇಹಾಂತೆ ಪರಮಂ ಸ್ಥಾನಂ ಯತ್ಸುರೈರಪಿ ದುರ್ಲಭಮ್ “ದೇವತೆಗಳಿಗೂ ದುರ್ಲಭವಾದ
ಮೋಕ್ಷವನ್ನು ದೇವಿ ನಮಗೆ ಕರುಣಿಸುತ್ತಾಳೆ .
ಪೂಜೆ ಮಾಡುವ ವಿಧಾನ ಅತ್ಯಂತ ಸರಳವಾಗಿದೆ .ಶುದ್ಧವಾದ ಮನಸ್ಸು ಇದ್ದರೆ ಸಾಕು .ನಮಗೆ ಒದಗಿ
ಬರುವ 4 ಶುಕ್ರವಾರಗಳಂದು ಬ್ರಾಹ್ಮೀ ಮುಹೂರ್ತದಲ್ಲಿ ಅಂದರೆ ಬೆಳಿಗ್ಗೆ ಐದೂವರೆ ಗಂಟೆಯಿಂದ
ಆರೂವರೆ ಗಂಟೆಯ ಒಳಗೆ ಅಥವಾ ರಾಹುಕಾಲ ಬರುವ ಮೊದಲು ಅಂದರೆ ಬೆಳಿಗ್ಗೆ ಹತ್ತೂವರೆ ಗಂಟೆಯ
ಒಳಗೆ ಅಥವಾ ಸಂಧ್ಯಾ ಕಾಲದಲ್ಲಿ ಉತ್ತರ ಅಥವಾ ಪೂರ್ವಾಭಿಮುಖವಾಗಿ ಕುಳಿತುಕೊಂಡು ಪೂಜೆ
ಮಾಡಲು ಅನುಕೂಲವಾಗುವಂತೆ ಗುರು ,ಪದ್ಮ ,ಗಣಪತಿ ಮಂಡಲವನ್ನು ರಂಗೋಲಿಯಲ್ಲಿ ಬಿಡಿಸಿ ಆಷ್ಟ
ದಳ ಪದ್ಮದ ರಂಗೋಲಿಯ ಮೇಲೆ ಪೀಠವನ್ನಿರಿಸಿ ಲಕ್ಷ್ಮಿಯ ಭಾವಚಿತ್ರ /ಅಥವಾ ಮೂರ್ತಿಯನ್ನು
ಇಟ್ಟುಎರಡುತುಪ್ಪದ ದೀಪಗಳನ್ನುಬೆಳಗಿಸಿ ಅದರ ಎದುರಿಗೆ ಒಂದು ತಟ್ಟೆಯಲ್ಲಿ ಐದು ಹಿಡಿ ಬೆಳ್ತಿಗೆ
ಅಕ್ಕಿಯ ಮೇಲೆ ಬೆಳ್ಳಿಯ /ತಾಮ್ರ/ಹಿತ್ತಾಳೆಯ ಕಲಶವನ್ನು ಇಟ್ಟು[ಸ್ಟೀಲ್ ಬೇಡ ] ಶುದ್ಧವಾದ ಬಾವಿ
ನೀರನ್ನು ತುಂಬಿಸಿ ಕಲಶಕ್ಕೆ ಕಂಕಣ ಕಟ್ಟಿ ಅದರ ಒಳಗೆ ಪಚ್ಚೆ ಕರ್ಪೂರ ,ಒಂದು ನಾಣ್ಯ ಮತ್ತು
ಅಡಿಕೆಯನ್ನು ಹಾಕಿ ಕಲಶದ ಮೇಲೆ ಐದು ಮಾವಿನ ಎಲೆಗಳನ್ನಿಟ್ಟುಅದರ ಮೇಲೆ ಸಿಪ್ಪೆ ತೆಗೆದ ತೆಂಗಿನ
ಕಾಯಿ ಅದರ ಎರಡು ಕಣ್ಣು ಮೇಲೆ ಕಾಣುವಂತೆ ಇಟ್ಟು ಅದರ ಮೇಲೆ ರವಕೆ ಕಣ ಅಥವಾ ಬೆಳ್ಳಿಯ
ದೇವಿಯ ಮುಖವಾಡ ಇದ್ದರೆ ಅದನ್ನಿಟ್ಟು ಅದಕ್ಕೆ ಜರಿ ಸೀರೆಯನ್ನುಉಡಿಸಿ ಅರಶಿನ ,ಕುಂಕುಮ ಶ್ರೀ
ಗಂಧವನ್ನು ಮುಟ್ಟಿಸಿ ,ಗೆಜ್ಜೆ ಮಾಲೆಯನ್ನು ಸಿಂಗರಿಸಿ ಮಾಂಗಲ್ಯವನ್ನು ಧಾರಣೆ ಮಾಡಿ ಹೂಗಳಿಂದ
ಶೃಂಗಾರ ಗೊಳಿಸಬೇಕು.ಮುತ್ತೈದೆಯರನ್ನು ಆಹ್ವಾನ ಮಾಡಬೇಕು .ಅವರಿಗೆ ಮಹಾಪೂಜೆಯ ನಂತರ
ಕೊಡಲು ವೀಳ್ಯದೆಲೆ ಅರಶಿನ ,ಕುಂಕುಮ ,ರವಕೆ ಬಟ್ಟೆ ತೆಂಗಿನ ಕಾಯಿ ತಂದಿರಬೇಕು.ನೈವೇದ್ಯ ಮಾಡಲು
ಸಿಹಿ ತಿಂಡಿಗಳು ,ಪಾಯಸ ,ಪಾನಕ ,ಹಣ್ಣುಗಳು ತಂದಿರಬೇಕು .ಮೊದಲು ಸಂಕಲ್ಪಮಾಡಬೇಕು . ನಂತರ
ಮುತ್ತೈದೆಯರ ಸಹಿತ ಎಲ್ಲರೂ ಲಕ್ಷ್ಮೀ ಅಷ್ಟೋತ್ತರ ಹೇಳುತ್ತಾ ಕುಂಕುಮಾರ್ಚನೆ ಮಾಡಬೇಕು
.ಅಗತ್ಯವಿದ್ದಲ್ಲಿ ನಿಮ್ಮ ಅರ್ಚಕರ ಸಹಾಯ ಪಡೆಯಬಹುದು .ನಂತರ ಮಹಾ ಪೂಜೆ ಮಾಡಬೇಕು
.ಕೊನೆಯಲ್ಲಿ ಬ್ರಹ್ಮಾರ್ಪಣವನ್ನು ಬಿಡಬೇಕು .ಪ್ರಸಾದ ವಿತರಣೆ ಮಾಡಿ ನಂತರ ,ಮಹಿಳೆಯರನ್ನು ಕೈ
ಹಿಡಿದು ಇಂದು ಮಣೆಯ ಮೇಲೆ ಕುಳ್ಳಿರಿಸಿ ಅವರಿಗೆ ಹಣೆಗೆ ಕುಂಕುಮ ಅರಶಿನವನ್ನು ಇಟ್ಟು ತಲೆಗೆ ಹೂ
ಮುಡಿಸಿ ಕೈಗೆ ಐದು ವೀಳ್ಯದೆಲೆ ಒಂದು ಅಡಿಕೆ ಒಂದು ನಾಣ್ಯ ಬ್ಲೌಸ್ ಪೀಸ್ ಅಥವಾ ಸೀರೆ ಯನ್ನು
ಕೊಟ್ಟು ಅವರ ಆಶೀರ್ವಾದ ಪಡೆಯಬೇಕು.
ಇದೇ ರೀತಿ 4 ಶುಕ್ರವಾರವೂ ಮಾಡುತ್ತಾ ನೈವೇದ್ಯದ
ಬದಲಾವಣೆ ,ಮುತ್ತೈದೆಯರ ಬದಲಾವಣೆ ಅನುಕೂಲವಿದ್ದಲ್ಲಿ ಮಾಡಿಕೊಳ್ಳಬೇಕು .ಸಂಧ್ಯಾ ಕಾಲದಲ್ಲಿ
ಹೊಸ್ತಿಲಲ್ಲಿ ಎರಡು ದೀಪಗಳನ್ನು ಪ್ರಜ್ವಲನೆ ಮಾಡಿ ಕನಕದಾರಾ ಸ್ತೋತ್ರವನ್ನು ಹೇಳುವುದು ಅತೀ
ಆಗತ್ಯ .ಭಗವಾನ್ ವಿಷ್ಣು ಯೋಗ ನಿದ್ರೆಗೆ ಹೋಗುವ ಸಮಯವೂ ಇದಾಗಿದೆ ಚಾತುರ್ಮಾಸ ಆಚರನೆಯೂ
ಈ ಸಮಯದಲ್ಲಿ ಆರಂಭವಾಗುತ್ತದೆ .ಆಷಾಢ ಮತ್ತು ಶ್ರಾವಣ ಮಾಸಗಳು ನಮ್ಮ ಇಷ್ಟಾರ್ಥಗಳನ್ನು
ಈಡೇರಿಸುವ ತಿಂಗಳು ಎನ್ನಲಾಗುತ್ತದೆ .ಆಷಾಢ ಮಾಸವು ಭಗವಾನ್ ವಿಷ್ಣು ,ಸೂರ್ಯ ,ಕುಜ ,ಮತ್ತು
ದುರ್ಗಾ ದೇವಿಗೆ ಸಮರ್ಪಿತವಾಗಿದೆ . ಆಷಾಢ ಮಾಸದಲ್ಲಿ ಮದುವೆಯನ್ನು ಮಾಡುವುದಿಲ್ಲ .ಯಾಕೆಂದರೆ
ಈ ಮಾಸದಲ್ಲಿ ಹೊಸತಾಗಿ ಮದುವೆಯಾದ ಪತಿ ಪತ್ನಿಯರು ಒಂದಾಗಿ ಗರ್ಭಿಣಿಯಾದರೆ ಹೆರಿಗೆಯಾಗುವ
ತಿಂಗಳು ಅತಿಯಾದ ಸೆಕೆಯ ಸಮಯವಾಗಿರುತ್ತದೆ ,ಅದಕ್ಕಾಗಿ ಸೊಸೆಯನ್ನು ತವರು ಮನೆಗೆ
ಕಳುಹಿಸಲಾಗುತ್ತದೆ .ಶುಭ ಕೆಲಸಗಳನ್ನು ಈ ಮಾಸದಲ್ಲಿ ಮಾಡುವುದಿಲ್ಲ .ಯಾಕೆಂದರೆ ರೈತರು
ಬೇಸಾಯದ ಕೆಲಸದಲ್ಲಿ ತುಂಬಾ ತಮ್ಮನ್ನು ತೊಡಗಿಸಿ ಕೊಂಡಿರುತ್ತಾರೆ . ಇಂದಿನ ಯುವ ಪೀಳಿಗೆಗೆ
ಆಷಾಢ ಮಾಸದ ಪ್ರಾಮುಖ್ಯತೆಯನ್ನು ತಿಳಿಸಿಕೊಡುವ ಕೆಲಸವನ್ನು ಮಾಡುತ್ತಾ ಅವರನ್ನೂ ಪೂಜೆಯಲ್ಲಿ
ಸೇರಿಕೊಳ್ಳುವಂತೆ ಮಾಡೋಣ .







































