ಕ್ರಿಮಿನಲ್ ನಿಂದ ಕಿಡ್ನಾಪ್ ಅದ ಯುವತಿಯ ಪತ್ತೆ ಹಚ್ಚಿದ ಪೊಲೀಸರು
ಮಂಗಳೂರು: ನಗರದ ಪಾಂಡೇಶ್ವರ ಶಿಕ್ಷಣ ಸಂಸ್ಥೆಯೊಂದರಲ್ಲಿ ಶಿಕ್ಷಣ ಪಡೆಯುತ್ತಿದ್ದ ಯುವತಿಯ ಕಿಡ್ನಾಪ್ ಪ್ರಕರಣವನ್ನು ಭೇದಿಸಿದ ಪಾಂಡೇಶ್ವರ ಪೊಲೀಸರು ಯುವತಿಯನ್ನು ಪತ್ತೆ ಹಚ್ಚಿದ್ದಾರೆ.



ಕ್ರಿಮಿನಲ್ ಮಹಮ್ಮದ್ ಅಶ್ಪಕ್ ಎಂಬಾತ ಯುವತಿಯನ್ನು ಕಿಡ್ನಾಪ್ ಮಾಡಿ ಇಸ್ಲಾಂಗೆ ಮತಾಂತರ ಮಾಡಿದ್ದಾನೆ ಎಂಬ ಅಘಾತಕಾರಿ ಬೆಳವಣಿಯ ನಡೆದಿದೆ ಎಂದು ಯುವತಿಯ ತಂದೆ ಮಂಗಳೂರು ಪೊಲೀಸ್ ಕಮೀಷನರ್ ರವರಿಗೆ ದೂರು ನೀಡಿದ್ದಾರೆ.
ವಿವಾಹಿತಮಾಗಿರುವ ಕ್ರಿಮಿನಲ್ ಮಹಮ್ಮದ್ ಅಶ್ಪಕ್ ನಿಗೆ ಈಗಾಗಲೇ ಬೇರೆಯೊಬ್ಬಳೊಂದಿಗೆ ವಿವಾಹವಾಗಿದ್ದು, ಕಾಸರಗೋಡು ವಿದ್ಯಾನಗರ ಠಾಣೆಯಲ್ಲಿ ಇತನ ಮೇಲೆ 8 ಕ್ರಿಮಿನಲ್ ಕೇಸು ದಾಖಲಾಗಿದೆ.
ಈ ನಡುವೆ ಉಳ್ಳಾಲದ ಸಂಬಂಧಿಕರೊಬ್ಬರ ಮನೆಯಲ್ಲಿ ವಾಸ್ತವ್ಯ ಇದ್ದು, ಮಂಗಳೂರಿನ ಪಾಂಡೇಶ್ವರ ಕಾಲೇಜಿನಲ್ಲಿ ಕಲಿಯುತ್ತಿದ್ದ ಅನ್ಯಧರ್ಮಿಯ ಯುವತಿಗೆ ಕ್ರಿಮಿನಲ್ ಮಹಮ್ಮದ್ ಅಶ್ಪಕ್ ಮಂಕುಬೂದಿ ಎರಚಿ ಕಿಡ್ನಾಪ್ ಮಾಡಿ ಮತಾಂತರ ನಡೆಸಿದ್ದಾನೆ ಎಂದು ದೂರಿನಲ್ಲಿ ಯುವತಿಯ ತಂದೆ ತಿಳಿಸಿದ್ದಾರೆ.
ಯುವತಿಯನ್ನು ಪತ್ತೆಹಚ್ಚಿ ಕರೆತಂದಿರುವ ಪೊಲೀಸರು ಯುವತಿಯನ್ನು ಮುಡಿಪಿನ ಪ್ರಜ್ಞಾ ಸಲಹಾ ಕೇಂದ್ರಕ್ಕೆ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.






































