ಕಾರ್ಕಳ : ಚುನಾವಣಾ ಹಿಂದು ರಾಹುಲ್ ಗಾಂಧಿ ಹಿಂದುಗಳೆಲ್ಲ ಹಿಂಸೆ ಮಾಡುವವರು ಎಂದು ಸಂಸತ್ತಿನಲ್ಲಿ ಮಾಡಿರುವ ಆರೋಪ ಸಮಸ್ತ ಹಿಂದು ಸಮಾಜ ಮಾತ್ರವಲ್ಲ, ಇಡಿ ಭಾರತೀಯ ನಾಗರಿಕರಿಗೆ ಮಾಡಿರುವ ಅಪಮಾನ.ಶತಶತಮಾನಗಳಿಂದ ” ವಿದೇಶಿ” ದಬ್ಬಾಳಿಕೆ ಸಹಿಸಿಕೊಂಡು, ಸ್ವಾಭಿಮಾನದಿಂದ ಬದುಕುತ್ತಿರುವ ಹಿಂದುಗಳು ಎಲ್ಲರನ್ನೂ ಒಳಗೊಳ್ಳುವವರೇ ಹೊರತು ಹಿಂಸಿಸುವವರಲ್ಲ. ಹಿಂದು ವಿರೋಧಿ ಧೋರಣೆ ಕಾಂಗ್ರೆಸ್ ಹಾಗೂ ಅದರ ಮಿತ್ರಕೂಟಗಳ ರಕ್ತದಲ್ಲೇ ಇದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ವಿ.ಸುನೀಲ್ ಕುಮಾರ್ ಆರೋಪಿಸಿದ್ದಾರೆ.
ಈ ಹಿಂದೆ ಡಿಎಂಕೆಯ ಸಚಿವ ಉದಯನಿಧಿ ಸನಾತನ ಧರ್ಮವನ್ನು ಅವಹೇಳನ ಮಾಡಿದ್ದರು. ರಾಜ್ಯ ಕಾಂಗ್ರೆಸ್ ಸರ್ಕಾರದ ಲೋಕೋಪಯೋಗಿ ಸಚಿವ ಹಿಂದು ಶಬ್ದಕ್ಕೆ ಅಪಮಾನ ಮಾಡಿದ್ದರು. ಇದೀಗ ರಾಹುಲ್ ಗಾಂಧಿ ಸಂಸತ್ತಿನೊಳಗೆ ಹಿಂದುಗಳಿಗೆ ಅಪಮಾನ ಮಾಡಿದ್ದಾರೆ. ಇನ್ನೆಷ್ಟು ದಿನ ಈ ವಿರೋಧ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ವಿ.ಸುನೀಲ್ ಕುಮಾರ್ ಪ್ರಶ್ನಿಸಿದ್ದಾರೆ.






































