ಪೆಟ್ರೋಲ್ ಬಂಕ್ ಗಳಿಗೆ ಮಾತ್ರ ಬ್ರಹ್ಮಾಸ್ತ್ರ ಪ್ರಯೋಗಿಸಿದ ಲೋಕೋಪಯೋಗಿ ಇಲಾಖೆ
ಪೆಟ್ರೋಲ್ ಬಂಕ್ ಗಳಿಗೆ ಬ್ರಹ್ಮಾಸ್ತ್ರ ಪ್ರಯೋಗಿಸಿದ ಲೋಕೋಪಯೋಗಿ ಇಲಾಖೆ
ಕಾರ್ಕಳ: ಜೋಡುರಸ್ತೆಯಿಂದ ಬೈಪಾಸ್ ರಸ್ತೆಯು ತಾಲೂಕು ಆಫೀಸ್ ನ ಪಕ್ಕದಲ್ಲಿ ರಾಜ್ಯ ಹೆದ್ದಾರಿ -1 ಹಾದು ಹೋಗುತ್ತದೆ. ರಾಜ್ಯ ಹೆದ್ದಾರಿಯಲ್ಲಿ 500 ಮೀಟರ್ ಅಂತರದಲ್ಲಿ ರಸ್ತೆ ವಿಭಜಕವನ್ನು ತೆಗೆಯಬಹುದಾಗಿದೆ. ಮತ್ತು ರಸ್ತೆಯ ಎಡ ಬದಿ ಮತ್ತು ಬಲ ಬದಿಯಲ್ಲಿ ರಸ್ತೆ ಇದ್ದರೂ ರಸ್ತೆ ವಿಭಜಕವನ್ನು ತೆಗೆಯಲು ಅವಕಾಶವಿರುತ್ತದೆ.
ಆದರೆ ಈ ರಸ್ತೆಯಲ್ಲಿ ಇರುವ ಹೆಚ್ಚಿನ ವಿಭಜಕಗಳು ಅನಧಿಕೃತವಾಗಿರುತ್ತದೆ. ಇದರ ಬಗ್ಗೆ ಇದು ವರೆಗೆ ಲೋಕೋಪಯೋಗಿ ಇಲಾಖೆ ಯಾವುದೇ ಕ್ರಮವನ್ನು ಇಲ್ಲಿನ ತನಕ ಕೈಗೊಂಡಿಲ್ಲ.



ಇದೇ ರಸ್ತೆಯ ಒಂದು ಪಾಶ್ವ೯ದಲ್ಲಿ ಇರುವ ಪೆಟ್ರೋಲ್ ಬಂಕ್ ಮಾಲಕರಿಗೆ ಮಾತ್ರ ಲೋಕೋಪಯೋಗಿ ಇಲಾಖೆ ಕಾರ್ಕಳ ವಿಭಾಗದ ಕಚೇರಿಯಿಂದ ಏಕಾಏಕಿ ನೋಟೀಸು ಜಾರಿಗೊಳಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಲೋಕೋಪಯೋಗಿ ಇಲಾಖೆಗೆ ಸೂಚನೆಗಳನ್ನು ಚಾಚುತಪ್ಪದೇ ಪರಿಪಾಲಿಸಿಕೊಂಡ ಮೂರು ಪೆಟ್ರೋಲ್ ಬಂಕ್ ಮಾಲಕರು ತೆರವುಗೊಳಿಸಲಾಗಿದ್ದ ರಸ್ತೆ ವಿಭಜಕಗಳನ್ನು ಮುಚ್ಚಿದ್ದಾರೆ.
ಇದೇ ರಸ್ತೆಯಲ್ಲಿ ಹೆಜ್ಜೆಗೊಂದು ವಿಭಜಕಗಳು ತೆರೆದುಕೊಂಡಿದ್ದು ಅದರ ಬಗ್ಗೆ ಕೂಡಾ ಕಾರ್ಕಳ ವಿಭಾಗದ ಲೋಕೋಪಯೋಗಿ ಮುಂದಾದರೆ ಮಾತ್ರ ಇಲಾಖೆಗೆ ಕಾನೂನಿಗೆ ಬಗ್ಗೆ ಬೆಲೆ ಬರುತ್ತದೆ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನಿರ್ಧಾರದಿಂದ ಇಲಾಖಾಧಿಕಾರಿಗಳು ಮುಂದಾಗಬೇಕೆಂಬುವುದು ಸಾರ್ವಜನಿಕ ವಲಯದಿಂದ ಕೇಳಿಬಂದ ಮಾತು ಆಗಿದೆ.
ರಸ್ತೆ ವಿಭಜಕಗಳನ್ನು ಅಲ್ಲಲ್ಲಿ ತೆರೆದು ಕೊಂಡಿರುವುದು ಎಷ್ಟು ಸತ್ಯವಾಗಿದೆಯೋ ಆ ಸಂದರ್ಭದಲ್ಲಿ ಅವುಗಳನ್ನು ಮುಚ್ಚಿಸುವ ಹೊಣೆಗಾರಿಕೆ ಇಲಾಖೆಯ ಅಧಿಕಾರಿಗಳದಾಗಿದೆ.
ಯಾವುದೇ ಪ್ರಭಾವಕ್ಕೆ ಒಳಗಾಗಿ ಸಿಕ್ಕ ಸಿಕ್ಕಲ್ಲಿ ರಸ್ತೆ ವಿಭಜಕ ತೆರೆಯಲು ಒಂದೆಡೆಯಲ್ಲಿ ಅವಕಾಶ ನೀಡುವ ಇಲಾಖಾಧಿಕಾರಿಗಳು ಇನ್ಯಾರದೋ ಪ್ರಭಾವಕ್ಕೆ ಒಳಗಾಗಿ ಅನಧಿಕೃತ ವಿಭಜಕಗಳನ್ನು ಮುಚ್ಚುವ ಬೆಳವಣಿಗೆ ಕಂಡು ಬರುತ್ತಿದೆ.
ಕಾರ್ಕಳ ವಿಭಾಗದ ಲೋಕೋಪಯೋಗಿ ಇಲಾಖಾಧಿಕಾರಿಗಳು ಇನ್ನಾದರೂ ತಮ್ಮ ಕರ್ತವ್ಯ ನಿಷ್ಠೆ ತೋರಿ, ಭವಾನಿ ಮಿಲ್ ನಿಂದ ಜೋಡು ರಸ್ತೆ ತನಕ ಅನಧಿಕೃತ ರಸ್ತೆ ವಿಭಜಕಗಳನ್ನು ಮುಚ್ಚಬೇಕಾಗಿ ನಾಗರಿಕರು ಆಗ್ರಹಿಸುತ್ತಿದ್ದಾರೆ.






































