ಶಸ್ತ್ರ ಚಿಕಿತ್ಸೆ ಮೂಲಕ 8 ಕೆ.ಜಿ ದುರ್ಮಾಂಸ ಹೊರ ತೆಗೆದ ವೈದ್ಯರು!
RB NEWS
Bureau Report
ಶಸ್ತ್ರ ಚಿಕಿತ್ಸೆ ಮೂಲಕ 8 ಕೆ.ಜಿ ದುರ್ಮಾಂಸ ಹೊರ ತೆಗೆದ ವೈದ್ಯರು!
ಉಡುಪಿ : ಕಳೆದ 32 ವರ್ಷಗಳಿಂದ ದುರ್ಮಾಂಸ ಗಡ್ಡೆಯಿಂದ ಬಳಲುತ್ತಿದ್ದ ಮಹಿಳೆಗೆ ಅಗತ್ಯ ಶಸ್ತ್ರ ಚಿಕಿತ್ಸೆ ನಡೆಸಿ ಸುಮಾರು 8 ಕೆ.ಜಿ. ದುರ್ಮಾಂಸ ಯಶಸ್ವಿಯಾಗಿ ಹೊರತೆಗೆದಿರುವ ಘಟನೆ ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಕಾರ್ಕಳದ ನಿವಾಸಿ ಪುಪ್ಪಾ(71) ಎಂಬವರ ಭುಜದ ಭಾಗದಲ್ಲಿ ದುರ್ಮಾಂಸ ಗಡ್ಡೆಯೊಂದು ಬೆಳೆಯಲಾರಂಭಿಸಿ ಸುಮಾರು 32 ವರ್ಷಗಳು ಕಳೆಯುತ್ತಾ ಬಂದಿದೆ.
ಅವರನ್ನು ಉಡುಪಿಯ ಅಜ್ಜರಕಾಡುನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಲಾಗಿತ್ತು.
ಜೂನ್ 26 ರಂದು ಮಹಿಳೆಗೆ ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ತಜ್ಞ ಡಾ.ಸುಜಿತ್ ಇವರು ಶಸ್ತ್ರಚಿಕಿತ್ಸಾ ತಂಡದೊಂದಿಗೆ ಸುಮಾರು 3 ಗಂಟೆಗಳವರೆಗೆ ಶಸ್ತ್ರಚಿಕಿತ್ಸೆ ನಡೆಸಿ 8 ಕೆ.ಜಿ ದುರ್ಮಾಂಸ ಗಡ್ಡೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಆಸ್ಪತ್ರೆಯ ಜನರಲ್ ಸರ್ಜನ್ ಆಗಿರುವ ಡಾ.ಸುಜಿತ್ ಇವರ ನೇತೃತ್ವದಲ್ಲಿ ಅರವಳಿಕೆ ತಜ್ಞರಾದ ಡಾ.ಉಮೇಶ್ ಉಪಾಧ್ಯಾಯ ಹಾಗೂ ಡಾ.ವಿಶ್ವನಾಥ್ ಶೆಟ್ಟಿ ಹಾಗೂ ನುರಿತ ಶುಶೂಷಕ ಅಧಿಕಾರಿಯವರ ಸಹಯೋಗದೊಂದಿಗೆ ಶಸ್ತ್ರ ಚಿಕಿತ್ಸೆ ನಡೆಲಾಗಿದೆ
ರೋಗಿಯು ಈಗ ಜಿಲ್ಲಾಸ್ಪತ್ರೆಯ ಒಳರೋಗಿ ವಿಭಾಗದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.