ಉಡುಪಿ : ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಉಡುಪಿ ವಲಯ ಸಮಿತಿ ನೇತೃತ್ವದಲ್ಲಿ ಇಂದು ಅಗತ್ಯ ವಸ್ತುಗಳ ಬೆಲೆ ಏರಿಕೆ ,ಬೀಡಿ ಕಾರ್ಮಿಕರು, ರಿಕ್ಷಾಚಾಲಕರೂ ಕಾರ್ಮಿಕರ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಅಪಾರ ಜಿಲ್ಲಾಧಿಕಾರಿ ಮುಖಾಂತರ ರಾಜ್ಯದ ಮುಖ್ಯಮಂತ್ರಿ ಯವರಿಗೆ ಮನವಿ ನೀಡಲಾಯಿತು.
ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು)ನೇತೃತ್ವದಲ್ಲಿ ಇಂದು ಕಾರ್ಮಿಕರ ಮಕ್ಕಳ ಸ್ಕಾಲರ್ಶಿಪ್ ಹಣ ಬಾಕಿ ಹಾಗೂ ಕಾರ್ಮಿಕರ14 ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಅಪಾರ ಜಿಲ್ಲಾಧಿಕಾರಿ ಮುಖಾಂತರ ಕಾರ್ಮಿಕ ಇಲಾಖೆಯ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಿಗೆ ಮನವಿ ನೀಡಲಾಯಿತು
ಪ್ರತಿಭಟನೆಯಲ್ಲಿ ಪಕ್ಷದ ಉಡುಪಿ ವಲಯ ಸಮಿತಿ ಮುಖಂಡರಾದ ಕವಿರಾಜ್. ಎಸ್ .ಕಾಂಚನ್, ಉಡುಪಿ ವಲಯ ಕಾರ್ಯದರ್ಶಿ ಶಶಿಧರ ಗೋಲ್ಲ, ರಾಮ ಕಾರ್ಕಡ ನಾಗೇಶ್, ರೀತೆಶ್,ಸಯ್ಯದ್ ಅದೇ ರೀತಿ ಕಟ್ಟಡ ಸಂಘದ ಜಿಲ್ಲಾ ಅಧ್ಯಕ್ಷ ರಾದ ಶೇಖರ್ ಬಂಗೇರ,ಕೋಶಾಧಿಕಾರಿ ಗಣೇಶ ನಾಯ್ಕ, ಉಪಾಧ್ಯಕ್ಷರಾದ ದಯಾನಂದ ಕೋಟ್ಯಾನ್, ವಾಮನ ಪೂಜಾರಿ,ಉದಯ ಪೂಜಾರಿ,ಸುಭಾಸ್ ನಾಯಕ್ ಬ್ರಹ್ಮವಾರ ಮುಖಂಡರಾದ ವಿಷ್ಣುನಾಯ್ಕ,ಚಂದ್ರಪೂಜಾರಿ,ಪ್ರತಿಮಾ ಕಾಪು,ರಾಮಸಾಲ್ಯಾನ್,ಸಂಜಿವನಾಯ್ಕ್,ಉಪಸ್ಥಿತರಿದ್ದರು.









































