ಅತ್ಯಂತ ನೋವಿನ ಸಂಗತಿ ಸರಕಾರದಿಂದ ಕುಟುಂಬಕ್ಕೆ ಗರಿಷ್ಠ ಪರಿಹಾರ : ಯು.ಟಿ.ಖಾದರ್

Picture of RB NEWS

RB NEWS

Bureau Report

ಉಳ್ಳಾಲ : ಕುತ್ತಾರು ಮದನಿನಗರ ಘಟನಾ ಸ್ಥಳಕ್ಕೆ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಭೇಟಿ ನೀಡಿದರು.

ಬಳಿಮ ಮಾಧ್ಯಮದ ಜೊತೆಗೆ ಮಾತನಾಡಿದ ಅವರು ‘ಅತ್ಯಂತ ನೋವಿನ ಸಂಗತಿಯಾಗಿದೆ. ಪ್ರಕೃತಿ ನಮ್ಮ ಕೈಯ್ಯಲಿಲ್ಲ ದೇವರ ಕೈಯಲ್ಲಿದ್ದು,
ಯಾಸೀರ್ ಕುಟುಂಬಸ್ಥರು ನೋವಿನ ಜೊತೆಗೆ ಎಲ್ಲರೂ ಇದ್ದೇವೆ, ಮತ್ತೆ ಇಂತಹ ಘಟನೆ ಮರುಕಳಿಸದಂತೆ ಜಿಲ್ಲಾಧಿಕಾರಿ, ಸಿಇಒ ಜೊತೆಗೆ ಚರ್ಚಿಸಿ ತಾತ್ಕಾಲಿಕ ಪರಿಹಾರ ತಕ್ಷಣ ಕ್ರಮಕೈಗೊಳ್ಳಲಾಗುವುದು. ಪರಿಹಾರ ಸಂಬಂಧಿಸಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಸಂಪರ್ಕಿಸಿ ಸರಕಾರದಿಂದ ಸಾಧ್ಯವಾದಷ್ಟು ಸಹಕಾರ ನೀಡುವ ಕುರಿತು ಚರ್ಚಿಸಲಾಗಿದೆ. ಮದನಿನಗರದ ಎಲ್ಲಾ ಯುವಕರು, ಗ್ರಾ.ಪಂ ಸದಸ್ಯರ ಕಾರ್ಯಾಚರಣೆ ಶ್ಲಾಘಿಸುತ್ತೇನೆ. ಸರಕಾರದ ಅಧಿಕಾರಿಗಳ ಜೊತೆಗೆ ಸಹಕರಿಸಿ ಎಲ್ಲಾ ರೀತಿಯಲ್ಲೂ ಕುಟುಂಬಸ್ಥರಿಗೆ ಸಹಕರಿಸುತ್ತೇವೆ, ಮಗಳು ಬಂದ ತಕ್ಷಣ ಗೌರವಪೂರ್ವಕವಾಗಿ ಎಲ್ಲರೂ ಸೇರಿಕೊಂಡು ಅಂತ್ಯಸಂಸ್ಕಾರ ನಡೆಸಲಾಗುವುದು. ಸರಕಾರ, ಶಿಕ್ಷಣ ಇಲಾಖೆಯ ಪರಿಹಾರದ ಕುರಿತು ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ಜೊತೆಗೆ ಚರ್ಚಿಸುತ್ತೇನೆ. ಸರಿಯಿರುವ ಪ್ರದೇಶದಲ್ಲೂ ಪ್ರಕೃತಿ ವಿಕೋಪಗಳು ನಡೆದಿದೆ. ಸರಕಾರ, ಮನೆ ಕಟ್ಟುವವರಿಗೆ ಎಲ್ಲರೀಗೂ ಇದು ಎಚ್ಚರಿಕೆಯ ಸಂದೇಶ. ಮೇಲೆ ಮನೆಕಟ್ಟುವವರು ಕೆಳಗಿನ ಮನೆಯವರ ಬಗ್ಗೆ ಕಾಳಜಿ ವಹಿಸಿ. ಆರ್ಥಿಕ ಸಂಕಷ್ಟದಿಂದ ಕೆಲವರು ಅನಿವಾರ್ಯ ರೀತಿಯಲ್ಲಿ ಮನೆಯನ್ನು ಕಟ್ಟುತ್ತಿದ್ದಾರೆ. ಕರಾವಳಿಯ ವಾತಾವರಣ ಅಪಾಯಕಾರಿಯಾಗಿದೆ.


ಮೇಲಿನ ಮನೆಯು ಆತಂಕದಲ್ಲಿದ್ದು, ಮಣ್ಣು ತೆಗೆದಲ್ಲಿ ಅದು ಬೀಳುವ ಸಾಧ್ಯತೆಯಿದೆ. ಸ್ಯಾಂಡ್ ಬ್ಯಾಗ್ ತಾತ್ಕಾಲಿಕ ಪರಿಹಾರ ಮಳೆಗಾಲ ಮುಗಿಯುವವರೆಗೂ ನಡೆಸಲಾಗುವುದು. ಸರಕಾರದ ನಿಯಮ ಮೀರಿ ಮನೆ ನಿರ್ಮಿಸದಂತೆ ಸ್ಥಳೀಯಾಡಳಿತ ಎಚ್ಚರಿಕೆ ವಹಿಸಬೇಕು ಎಂದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top