ಹಳೆ ವಿದ್ಯಾರ್ಥಿಗಳಿಂದ ನೋಟ್ಸ್ ಪುಸ್ತಕ ವಿತರಣೆ

Picture of RB NEWS

RB NEWS

Bureau Report

ಕಾರ್ಕಳ : ಇರ್ವತ್ತೂರು ಕೊಳಕೆ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ರೂ. 30 ಸಾವಿರ ಮೌಲ್ಯದ ಉಚಿತ ನೋಟ್ಸ್ ಪುಸ್ತಕಗಳನ್ನು ಶಾಲೆಯ ಹೆಮ್ಮೆಯ ಹಳೆ ವಿದ್ಯಾರ್ಥಿಗಳಾದ ಉದಯ.ಎಸ್.ಕೋಟ್ಯಾನ್(ಉಡುಪಿ ಜಿಲ್ಲಾ ಪಂಚಾಯತ್ತಿನ ಸ್ಥಾಯೀ ಸಮಿತಿಯ ಮಾಜಿ ಅಧ್ಯಕ್ಷ) ಮತ್ತು ವಿಠಲ.ಎಸ್.ಅಮೀನ್ ರವರು ಕೊಡುಗೆಯಾಗಿ ನೀಡಿದರು.

ಶಾಲಾ 125 ವಿದ್ಯಾರ್ಥಿಗಳು ನೋಟ್ಸ್ ಪುಸಕ್ತಗಳನ್ನು ಸ್ವೀಕರಿಸಿದರು.

ಉಚಿತ ನೋಟ್ಸ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ಜಯಕೀರ್ತಿ ಕಡಂಬರು,ರಾಧಾ ಎಸ್ ಅಮೀನ್,ಉದಯ.ಎಸ್ ಕೋಟ್ಯಾನ್,ಪಂಚಾಯತ್ ಅಧ್ಯಕ್ಷ ಭರತ್ ಕುಮಾರ್ ಜೈನ್, ಎಸ್ ಡಿ ಎಂ ಸಿ ಅಧ್ಯಕ್ಷ ಮದ್ವರಾಜ್, ಬಸದಿಯ ಅರ್ಚಕ ವೀರೇಂದ್ರ ಇಂದ್ರ,ಪಂಚಾಯತ್ ಸದಸ್ಯ ಶೇಖರ ಅಂಚನ್, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ನಳಿನಾಕ್ಷಿ, ಮುಖ್ಯೋಪಾಧ್ಯಾ ಬಾಲಕೃಷ್ಣ ನಾಯಕ್ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top