ವಾರ ಭವಿಷ್ಯ 16.06.2024 ರಿಂದ 22.06.2024 ರ ವರೆಗೆ
ವಿಶೇಷ ದಿನಗಳು :16.06.2024…..ಗಂಗಾವತಾರ ಅಂದರೆ ಮಳೆಯ ಆರಂಭ
20.06.2024……ದಕ್ಷಿಣಾಯನ ಆರಂಭ
ಮೇಷ : ನಿಮ್ಮ ರಾಶ್ಯಾಧಿಪತಿ,ಅಷ್ಟಮಾಧಿಪತಿಯಾಗಿ ಕುಜ ಜನ್ಮ ರಾಶಿಯಲ್ಲಿ ಇರುವುದರಿಂದ
ಕುಟುಂಬದಲ್ಲಿ ಒಮ್ಮತದ ಮನೋಭಾವನೆ ಇರುವುದಿಲ್ಲ .ಆರೋಗ್ಯದಲ್ಲಿ ಎಚ್ಚರ ಇರಬೇಕಾಗುತ್ತದೆ
.ದ್ವಿತೀಯಾದಲ್ಲಿ ಗುರು ಇರುವುದರಿಂದ ದೇವರ ಅನುಗ್ರಹ ಇರುತ್ತದೆ .ನೀವು ನಡೆಸುವ ಯಾವುದೇ
ಉದ್ಯೋಗ ,ಹಣದ ವ್ಯವಹಾರ ,ಎಲ್ಲವೂ ನೀವು ಅಂದು ಕೊಂಡಂತೆ ನಡೆಯಲಿದೆ .ತೃತೀಯಾದಲ್ಲಿ ರವಿ
ಬುಧ ಶುಕ್ರರ ಸಂಯೋಗ ನಿಮಗೆ ಅದೃಷ್ಟವನ್ನೇ ತರಲಿದೆ .ಸಹೋದರ ವರ್ಗದವರ ಜೊತೆಗೆ
ಹೊಂದಿಕೊಂಡು ಮುಂದುವರಿಯಿರಿ .ಕುಟುಂಬದಲ್ಲಿ ಸಹೋದರಿಯಿಂದ ಬೇಸರ ಬರುವ ಸಾಧ್ಯತೆ
ಇರುತ್ತದೆ ,ಶುಭ ಮಂಗಳ ಕೆಲಸಗಳು ನಡೆಯುವ ಸಮಯ .ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಂಡು
ಸಮಯದ ಹೊಂದಾಣಿಕೆಯನ್ನು ನೀವೇ ಮಾಡಿಕೊಳ್ಳಿರಿ.
ವೃಷಭ : ನಿಮ್ಮ ರಾಶ್ಯಾಧಿಪತಿ ಶುಕ್ರ ದ್ವಿತೀಯಾದಲ್ಲಿ ಬುಧ, ರವಿಯೊಂದಿಗೆ ಇರುವುದು ಹಾಗೆಯೇ ಗುರು
ಜನ್ಮ ರಾಶಿಯಲ್ಲಿ ಇರುವುದು ಹಲವಾರು ಶುಭ ಬದಲಾವಣೆಗಳು ಕಂಡುಬರುವ ಸಮಯವಾಗಿದೆ
.ಆದಾಯದಲ್ಲಿ ,ನಿಮ್ಮ ವ್ಯವಹಾರದಲ್ಲಿ ,ಉದ್ಯೋಗದಲ್ಲಿ ಹೂಸ ಚೇತರಿಕೆಯನ್ನು ಕಾಣಲಿದ್ದೀರಿ
.ಕುಟುಂಬದೊಳಗೆ ವೈಮನಸ್ಸು ಬರದಂತೆ ನೋಡಿಕೊಳ್ಳಿರಿ .ಕೆಲವೊಮ್ಮೆ ಕೊಟ್ಟ ಮಾತನ್ನು
ಉಳಿಸಿಕೊಳ್ಳಲು ಆಗದೆ ಬೇಸರವಾಗುವ ಸನ್ನಿವೇಶಗಳು ಬರಲಿವೆ .ರಾಹು ಲಾಭ ಕ್ಷೇತ್ರದಲ್ಲಿ
ಇರುವುದರಿಂದ ಅದು ಗುರುವಿನ ರಾಶಿಯಾಗಿರುವುದರಿಂದ ನಿಮಗೆ ನಿಮ್ಮ ಮಾತೇ ಬಂಡವಾಳವಾಗಲಿದೆ
.29.06.2024 ರಿಂದ 15.11.2024 ರ ವರೆಗೆ ಉದ್ಯೋಗದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ .
ಮಿಥುನ :ನಿಮ್ಮ ಅದೃಷ್ಟದ ಸಮಯ ಒಲಿದು ಬಂದಿದೆ .ಶುಕ್ರ ,ಬುಧ ರವಿ ಜೊತೆಯಾಗಿ ನಿಮ್ಮ ಜನ್ಮ
ರಾಶಿಯಲ್ಲಿ ಬಂದಿದ್ದಾರೆ ,ಕುಜ ಜುಲೈ 12 ರ ವರೆಗೆ ಲಾಭ ಕ್ಷೇತ್ರದಲ್ಲಿ ಇದ್ದಾನೆ . ಗುರು ವ್ಯಯದಲ್ಲಿ
ಇದ್ದರೂ ನೀವು ತೆಗೆದು ಕೊಳ್ಳುವ ನಿರ್ಧಾರಗಳು ಸರಿಯಾಗಿಯೇ ಇರುತ್ತದೆ .ರಾಜಕೀಯ ಕ್ಷೇತ್ರದಲ್ಲಿ
ಒಂದು ಉನ್ನತ ಸ್ಥಾನ ಮಾನ ಲಭಿಸಲಿದೆ .ಶನಿ ಅಷ್ಟಮದಲ್ಲಿ 29.6.2024 ರಿಂದ 15.11.2024 ರ
ವರೆಗೆ ಇರಲಿರುವುದರಿಂದ ಈಗದಿಂದಲೇ ವಿಷ್ಣು ಸಹಸ್ರನಾಮ ಪಾರಾಯಣ ಆರಂಭಿಸಿರಿ .ನೀವು ಸುಖ
ಸ್ಥಾನದ ಕೇತುವಿನ ಪರಿಹಾರವಾಗಿ ಗಣಪತಿಯ ಆರಾಧನೆಯನ್ನು ಮಾಡಿಕೊಂಡು ಬಂದರೆ ಒಳ್ಳೆಯದು
.ಸಂತಾನದ ನಿರೀಕ್ಷೆಯಲ್ಲಿ ಇರುವವರಿಗೆ ಶುಭ ಸುದ್ಧಿ ಸಿಗಲಿದೆ . ಹಳೆಯ ಕಾಯಿಲೆಯೊಂದು ಗುಣವಾಗುವ
ಸಾಧ್ಯತೆ ಇದೆ .ಸುಬ್ರಹ್ಮಣ್ಯ ದೇವರ ಪ್ರಾರ್ಥನೆ ಅಗತ್ಯವಿದೆ .
ಕರ್ಕಾಟಕ : ಅನೇಕ ಬದಲಾವಣೆಯನ್ನು ಕಾಣುವ ವಾರವಿದು .ವ್ಯಯದಲ್ಲಿ ಶುಕ್ರ ,ರವಿ,ಬುಧ
ಬಂದಿರುವುದು ಕೆಲವೊಂದು ಸಣ್ಣ ಪುಟ್ಟ ಸಮಸ್ಯೆಗಳು ಬರುವುದನ್ನು ಸೂಚಿಸುತ್ತಿದೆ .ಮನೆ ಬದಲಾವಣೆ
,ತಾಯಿಯವರ ಅನಾರೋಗ್ಯ ,ಸಹೋದರನಲ್ಲಿ ಬೇಸರ ಬರ ಬಹುದು ಆದರೆ ಗುರುವಿನ ಅನುಗ್ರಹ
ಇರುವುದರಿಂದ ಎಲ್ಲವನ್ನೂ ನಿಭಾಯಿಸುವ ಶಕ್ತಿ ನಿಮ್ಮಲ್ಲಿ ಇರುತ್ತದೆ .ಕೇತುವಿನ ಅನುಗ್ರಹ ಕೂಡಾ
ಇರುತ್ತದೆ .ಅಷ್ಟಮದ ಶನಿಯ ಕಾರಣದಿಂದ ಗಂಟು ನೋವು ವ್ಯರ್ಥ ಖರ್ಚು ಬರಲಿದೆ .ವಾಹನ ಚಾಲಕರು
ಬಹಳ ಎಚ್ಚರ ವಹಿಸಬೇಕು .ಹೊಸ ವ್ಯವಹಾರಕ್ಕೆ ಕೈ ಹಾಕಲು ಹೋಗಬೇಡಿರಿ .29.06.2024 ರಿಂದ
15.11..2024 ರ ವರೆಗೆ ಶನಿ ವಕ್ರಗತಿಗೆ ಬರಲಿರುವುದರಿಂದ ನಿಮಗೆ ಆರೋಗ್ಯದ ಸಮಸ್ಯೆಯಲ್ಲಿ ಚೇತರಿಕೆ
ಬರಲಿದೆ .
ಸಿಂಹ : ಶುಕ್ರ ರವಿ ಬುಧ ನಿಮಗೆ ಲಾಭ ಕ್ಷೇತ್ರಕ್ಕೆ ಬಂದಿದ್ದಾರೆ .ನಿಮ್ಮ ಪ್ರತಿಯೊಂದು ವ್ಯವಹಾರ
,ಉದ್ಯೋಗ ,ಹಣದ ವ್ಯವಹಾರ ಹೀಗೆ ಎಲ್ಲಾ ವಿಷಯದಲ್ಲಿ ಉನ್ನತಿಯನ್ನು ಕಾಣುವಿರಿ .ಸಿಂಹ
ರಾಶಿಯವರೆಂದರೆ ಸಿಂಹದಂತೆ ಇರುವವರು .ಉದ್ಯೋಗದಲ್ಲಿ ಕಿರಿಕಿರಿ ಇರುತ್ತದೆ .ಪಿತ್ರಾರ್ಜಿತ ಆಸ್ತಿಯ
ಪಾಲು ನಿಮಗೆ ಸಿಗಲಿದೆ .ಹಿರಿಯರಿಗೆ ಗೌರವ ಕೊಡುವುದು ನಿಮ್ಮ ಕರ್ತವ್ಯವಾಗಿದೆ .ನೀವು ಕೆಲಸ ಮಾಡುವ
ಸಂಸ್ಥೆಯ ಜವಾಬ್ದಾರಿ ,ಬಡ್ತಿ ನಿಮಗೆ ಸಿಗಲಿದೆ . ಶನಿಯ ವಕ್ರ ಸ್ಥಿತಿ 29.06.2024 ರಿಂದ
15.11.2024 ರವರೆಗೆ ನಿಮಗೆ ಬಹಳ ಸಂತೋಷದ ಜೀವನವನ್ನು ಕೊಡಲಿದ್ದಾನೆ . ಪತಿಯ ಸಂತೋಷ
ಸಿಗಲಿದೆ .ವಿದ್ಯಾರ್ಥಿಗಳು ವಿದೇಶಕ್ಕೆ ಉನ್ನತ ವಿದ್ಯಾಭ್ಯಾಸಕ್ಕೆ ಹೋಗುವ ಸಾಧ್ಯತೆ ಇದೆ .
ಕನ್ಯಾ : ಗುರು ಭಾಗ್ಯದಲ್ಲಿ ಬಂದಿದ್ದಾನೆ ಎಲ್ಲಾ ಕಷ್ಟಗಳನ್ನು ನಿಭಾಯಿಸಿ ಕೊಂಡು ಹೋಗುವ ಶಕ್ತಿ
ನಿಮಗೆ ಒದಗಿ ಬರಲಿದೆ .ಆದರೂ ಅಷ್ಟಮದ ಕುಜ ಜುಲಾಯಿ 12 ರ ವರೆಗೆ ಆರೋಗ್ಯದ ವಿಷಯದಲ್ಲಿ
,ನಿಮ್ಮ ಪಿತ್ರಾರ್ಜಿತ ಆಸ್ತಿಯ ಬಗ್ಗೆ ಕಿರಿ ಕಿರಿಯನ್ನು ತರಲಿದ್ದಾನೆ .ನರಸಿಂಹ ದೇವರ ಮಂತ್ರ ಪಾರಾಯಣ
,ಧನ್ವಂತರಿ ಹೋಮ ಮಾಡಿಸುವುದು ದುರ್ಗಾ ಆರಾಧನೆ ಮಾಡುವುದು ಅಗತ್ಯವಿದೆ . ಉದ್ಯೋಗದಲ್ಲಿ
ಬಡ್ತಿ ನಿಮಗಾಗಿ ಕಾದಿದೆ . ಮಾತಾಡುವಾಗ ಎಚ್ಚರವಿರಲಿ .ಹಣ ಕಾಸಿನ ವಿಚಾರದಲ್ಲಿ ,ಅನ್ಯ ಮಹಿಳೆಯರ
ವಿಷಯದಲ್ಲಿ ಎಚ್ಚರವಿರಲಿ .ಮಹಿಳೆ ಮೋಹಿನಿಯಂತೆ ಮನಸ್ಸಿಗೆ ಚಂಚಲತೆಯನ್ನು ತರಲಿದ್ದಾಳೆ .
ತುಲಾ : ಭಾಗ್ಯಕ್ಕೆ ಶುಕ್ರ ,ರವಿ,ಬುಧ ಬಂದಿದ್ದಾರೆ . ಆರೋಗ್ಯದಲ್ಲಿ ಚೇತರಿಕೆಯನ್ನು ಕಾಣುವಿರಿ
.ಅಷ್ಟಮದಲ್ಲಿ ಗುರು ಇರುವುದರಿಂದ ದೈವಾನುಗ್ರಹದ ಕೊರತೆ ಇದೆ .ಇದನ್ನು ಗಮನದಲ್ಲಿ
ಇಟ್ಟುಕೊಂಡು ಮುಂದುವರಿಯಿರಿ .ನೀವು ಆರಂಬಿಸುವ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗಲಿವೆ.
ಯಶಸ್ಸು ಬರಲಿದೆ .ಶನಿಯ ಬಗ್ಗೆ ನಿಮ್ಮ ಗಮನದಲ್ಲಿರಲಿ .ಶನಿಯು 29.6.2024 ರಿಂದ 15.11.2024
ರವರೆಗೆ ಸುಖ ಸ್ಥಾನಕ್ಕೆ ಬರಲಿದ್ದಾನೆ .ಈಗದಿಂದಲೇ ವಿಷ್ಣು ಸಹಸ್ರನಾಮ ಪಾರಾಯಣ ಆರಂಭಿಸಿರಿ
.ಪತ್ನಿಯ/ಪತಿಯ ಜೊತೆಗೆ ಹೊಂದಾಣಿಕೆ ಒಂದು ಸಾಹಸವಾಗಲಿದೆ.ಮೌನ ಬಂಗಾರವಾದರೆ …ಮಾತು
ಬೆಳ್ಳಿಯಾಗಲಿದೆ .ಜುಲೈ 12 ರ ವರೆಗೆ ಕುಜ ಸಪ್ತಮದಲ್ಲಿ ಇರಲಿದ್ದಾನೆ .
ವೃಶ್ಚಿಕ : ಗುರು ಸಪ್ತಮದಲ್ಲಿ ,ಕುಜ 6 ನೇ ಮನೆಯಲ್ಲಿ ಇರುವುದು ನಿಮಗೆ ಅನುಕೂಲ
ಸ್ಥಿತಿಯಾಗಿದೆ.ದೈವಾನುಗ್ರಹ ಇರುವ ಸಮಯವಾಗಿದೆ .ಅಷ್ಟಮದಲ್ಲಿ ಶುಕ್ರ ,ರವಿ,ಬುಧ ಬಂದಿರುವುದು
ನಿಮಗೆ ಶುಭವಲ್ಲ. ಷುಗರ್ ಬಿಪಿ ಹೃದಯದ ಸಮಸ್ಯೆ ಇರುವವರು ಇನ್ನು ಒಂದು ತಿಂಗಳ ಕಾಲ
ಎಚ್ಚರದಿಂದ ಇರಬೇಕು . ರಾಜಕೀಯದಲ್ಲಿ ಇರುವವರು ಎಚ್ಚರದಿಂದ ಇರಬೇಕು .ಉದ್ಯೋಗದಲ್ಲಿ
ಇರುವವರು ಸಹೋದ್ಯೋಗಿ ಮಹಿಳೆಯರ ವಿಷಯದಲ್ಲಿ ತಪ್ಪು ಭಾವನೆ ಬಾರದಂತೆ ಎಚ್ಚರ ವಹಿಸಿರಿ .
ಪತ್ನಿಯೊಂದಿಗೆ ಕೂಡಾ ಹೊಂದಾಣಿಕೆ ಎನ್ನುವುದು ಮರೀಚಿಕೆ ಆಗಲಿದೆ .ಸಪ್ತಮಾಧಿಪತಿ ಶುಕ್ರ
ಅಷ್ಟಮದಲ್ಲಿ ರವಿಯೊಂದಿಗೆ ಇರುವುದು “ಅನುಮಾನಮ್ ಪೆದ್ದ ಲಕ್ಷಣಂ “ ಅನ್ನುವಂತಾಗಲಿದೆ .
ಧನು : ಶನಿಯ ವಕ್ರ ಸ್ಥಿತಿ 29.06.2024 ರಿಂದ 15.11.2024 ರ ವರೆಗೆ ಇರುವುದು ನಿಮಗೆ ತಿಳಿದಿರಲಿ
.ಈಗಲೇ ವಿಷ್ಣು ಸಹಸ್ರನಾಮ ಪಾರಾಯಣ ಆರಂಭ ಮಾಡಿರಿ .ಪ್ರಸ್ತುತ ಶನಿ ತೃತೀಯಾದಲ್ಲಿ ಇರುವುದು
ನಿಮಗೆ ಬಹಳ ಅನುಕೂಲವಾಗಿದೆ .ಉಳಿದ ಎಲ್ಲಾ ಗ್ರಹರು ಪ್ರತಿಕೂಲವಾಗಿರುತ್ತಾರೆ. ಸಪ್ತಮದಲ್ಲಿ ಶುಕ್ರ
,ರವಿ ,ಬುಧ ,6 ನೇ ಮನೆಯಲ್ಲಿ ಗುರು ಇರುವುದು ಸುಖ ದಾಂಪತ್ಯಕ್ಕೆ ಅನುಕೂಲ ಸ್ಥಿತಿ ಆಗಿರುವುದಿಲ್ಲ
.ಪ್ರೀತಿ ಪ್ರೇಮಕ್ಕೆ ಬಲಿಯಾಗಬೇಡಿರಿ .ರಾಹು ಸುಖ ಸ್ಥಾನದಲ್ಲಿ ಇರುವುದು ಮಾನಸಿಕ ಒತ್ತಡವನ್ನು
ಸೂಚಿಸುತ್ತದೆ ,ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥನೆ ಮಾಡಿರಿ . ಅನ್ಯ ಮಹಿಳೆಯರಲ್ಲಿ ವ್ಯವಹರಿಸುವಾಗ
ಎಚ್ಚರವಿರಲಿ .
ಮಕರ : ಪಂಚಮದಲ್ಲಿ ಗುರು ,6ನೇ ಮನೆಯಲ್ಲಿ ರವಿ ಶುಕ್ರ ಬುಧ ಬಂದಿರುವುದು ನಿಮ್ಮ ಅದೃಷ್ಟವನ್ನು
ಸೂಚಿಸುತ್ತದೆ ,ಮೊನ್ನೆ ಕೆಲವರಿಗೆ ರಾಜಕೀಯ ವ್ಯಕ್ತಿಗಳಿಗೆ ನಿರಾಶೆ ಆಗಿತ್ತು .ಈಗ ಅದು ಸರಿಯಾಗಲಿದೆ
.ಅವರನ್ನು ಕರೆದು ಮಾತನಾಡಿ ಅವರಿಗೊಂದು ಹುದ್ದೆ ಸ್ಥಾನ ಮಾನ ಒದಗಿ ಬರಲಿದೆ .ಕುಜ ಸುಖ
ಸ್ಥಾನದಲ್ಲಿ ಜುಲೈ 12 ರ ವರೆಗೆ ಇರುವುದರಿಂದ ಸದಾ ಬಿಪಿ ಯ ಹತೋಟಿ ನಿಮ್ಮಲ್ಲಿರಲಿ .ಆರೋಗ್ಯದ
ಕಡೆಗೆ ಗಮನವಿರಲಿ .ಶನಿ ದ್ವಿತೀಯಾದಲ್ಲಿ 29.03.2025 ರ ವರೆಗಿದ್ದು ಸಾಡೇ ಸಾತ್ ಶನಿಯ ಪ್ರಭಾವ
ಇರುವುದರಿಂದ ವಾದ ವಿವಾದ ಮಾಡಿ ,ಗೊಂದಲವನ್ನು ಮೈ ಮೇಲೆ ಎಳೆದು ಕೊಳ್ಳ ಬೇಡಿರಿ . ವಿಷ್ಣು
ಸಹಸ್ರನಾಮ ಪಾರಾಯಣ ಮಾಡುವುದನ್ನು ಮರೆಯಬೇಡಿರಿ .
ಕುಂಭ : ಪಂಚಮಕ್ಕೆ ಶುಕ್ರ ,ರವಿ ಬುಧ ಇವರ ಪ್ರವೇಶವಾಗಿದೆ .ಮಕ್ಕಳ ವಿಷಯವಾಗಿ ಮೃಧು ಧೋರಣೆ
ಇರಲಿ . ಗುರು ಸುಖ ಸ್ಥಾನದಲ್ಲಿ ಇರುವುದರಿಂದ ದೇವರ ಅನುಗ್ರಹವಿರುತ್ತದೆ .ನಿಮ್ಮ ಒಳ್ಳೆಯ ಗುಣ
ಸ್ವಭಾವ ಎಲ್ಲರ ಗಮನ ಸೆಳೆಯುತ್ತದೆ .ಗಂಟಲಿಗೆ ಸಂಬಂಧಿಸಿದ ಸಮಸ್ಯೆ ಬರಲಿದೆ .ಆದಷ್ಟು ಬಿಸಿನೀರಿನ
ಸೇವನೆ ಮಾಡಿರಿ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ತೋರಿಸಲಿದ್ದಾರೆ .ನೃತ್ಯ ಸಂಗೀತ ಇತ್ಯಾದಿ
ಪಟ್ಯೇತರ ಚಟುವಟಿಕೆಗಳಲ್ಲಿಯೂ ಮೆಚ್ಚುಗೆ ಗಳಿಸಲಿದ್ದಾರೆ .ಭೂಮಿಗೆ ಸಂಬಂಧಿಸಿದ ವ್ಯವಹಾರದಲ್ಲಿ
ಉತ್ತಮ ಲಾಭವನ್ನು ಗಳಿಸಲಿದ್ದೀರಿ ಶನಿ ಮತ್ತು ರಾಹುವಿಗೆ ಪರಿಹಾರ ಅಗತ್ಯವಿರುತ್ತದೆ .
ಮೀನ: ಜನ್ಮರಾಶಿಯಲ್ಲಿ ಇರುವ ರಾಹುವಿಗೆ ,ವ್ಯಯದಲ್ಲಿ ಇರುವ ಶನಿಗೆ ದ್ವಿತೀಯಾದಲ್ಲಿ ಇರುವ
ಕುಜನಿಗೆ ಪರಿಹಾರ ಅಗತ್ಯವಾಗಿದೆ .ನಾಗದೇವರಿಗೆ ಪ್ರಾರ್ಥನೆ ಸಲ್ಲಿಸಿರಿ .ದುರ್ಗಾ ದೇವಿಗೆ ಸ್ತೋತ್ರ
ಪಾರಾಯಣ ಮಾಡಿರಿ .ಬಂಧುಗಳು ,ನೆರೆಕರೆಯವರಲ್ಲಿ ಮನೆಯಲ್ಲಿ ಇರುವ ಹಿರಿಯರ ಜೊತೆಗೆ ಬೇಸರ
ಬರದಂತೆ ಗಮನವಿರಲಿ .ನಿಮ್ಮ ವಯಕ್ತಿಕ ಆರೋಗ್ಯದ ಕಡೆಗೆ ಗಮನವಿರಲಿ .ಸಿಹಿ ಪದಾರ್ಥ ಸೇವನೆ
ಅತಿಯಾಗಿ ಬೇಡ .ಸಂಸಾರದಲ್ಲಿ ಹೊಂದಾಣಿಕೆ ಇರಲಿ .ಅತಿಯಾದ ಕೋಪ ಒಳ್ಳೆಯದಲ್ಲ.ಇತ್ತೀಚೆಗೆ
ಕೋಪ ಅಧಿಕವಾಗಿದೆಯಲ್ಲ. ಹೊಸ ವಾಹನ ಖರೀಧಿ ಯೋಗವಿದೆ . ಚಿನ್ನ ಖರೀಧಿ ಮಾಡುವ
ಯೋಚನೆಯೂ ಇರುತ್ತದೆ . ಸಾಡೇ ಸಾತ್ ಶನಿಯ ಪ್ರಭಾವ ಇರುತ್ತದೆ .






































