ಬ್ರಹ್ಮಾವರ ಕೃಷಿ ಕಾಲೇಜು ಉಳಿವಿಗಾಗಿ ಹೋರಾಟ




ಉಡುಪಿ: ಬ್ರಹ್ಮಾವರ ಕೃಷಿ ಕಾಲೇಜು ಮುಚ್ಚುವುದನ್ನು ವಿರೋಧಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಛೇರಿ ಮುಂದೆ ಧರಣಿ ನಡೆಸಲಾಯಿತು.
ಧರಣಿ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಉಡುಪಿ ಜಿಲ್ಲಾ ಉಸ್ತುವಾರಿ ಲಕ್ಷೀ ಹೆಬ್ಬಾಳ್ಕರ್ ಹಾಗೂ ಎಮ್.ಎಲ್.ಸಿ.ಮಂಜುನಾಥ ಭಂಡಾರಿ ಬಂದು ಮನವಿ ಸ್ವೀಕರಿಸಿದರು.
ಹೋರಾಟ ಸಮಿತಿ ನಿಯೋಗ ಬೆಂಗಳೂರಿಗೆ ತೆರಳಲಿ, ಜೂನ್ 13 ರಂದು ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರನ್ನು ಭೇಟಿ ಮಾಡಿಸುವುದಾಗಿ ಉಸ್ತುವಾರಿ ಮಂತ್ರಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.






































