[t4b-ticker]

ಗಝಲ್ ಗಣೇಶ ಪ್ರಸಾದ ಪಾಂಡೇಲು

Picture of RB NEWS

RB NEWS

Bureau Report

ಗಝಲ್

++++++++

ಕಚ್ಚಿ ಎದೆಗೆ ಹೋದೆಯಲ್ಲಾ  ವಿಷದ ಬಲೆಯ

 ಕಟ್ಟುತ ನೀನು

ಬಿಚ್ಚಿ ಭಾವ ಕೆದಕಿದೆಯಲ್ಲಾ ಹಳತು ವಿಷಯ

 ಕುಟ್ಟುತ ನೀನು

ಹಸಿಮಣ್ಷ ಗೋಡೆಯ ನಿಲ್ಲಿಸಿ ಬಂದೆಯಲ್ಲಾ

 ಏತಕೆ ಹೇಳು

ಹೊಸತು ಬರಲು ಸಖನನೇ ತೊರೆದೆಯಲ್ಲಾ 

ಮೆಟ್ಟುತ ನೀನು

ಬೆಂಕಿಕಿಡಿ ಕಂಡಿತೆಂದು ಮೌನದಿ ಸುರಿದೆಯಲ್ಲ

 ತುಪ್ಪವ ಖುಷಿಗೆ 

ಸಂಖ್ಯೆ ಇರದೆ ನೊಂದು ಒಳಗೆ ಉರಿದೆಯಲ್ಲ

ಮುಟ್ಟುತ ನೀನು

ಒಪ್ಪದಿರಲು ಅಪ್ಪುಗೆಗೆ ಕೆರಳಿ ಕನಲಿ ಹೊಲಸು 

ಪದವ ಬರೆದು

ತಪ್ಪು ಹಾದಿ ತುಳಿದೆಯಿಂದು ಕೊಳಕು ಎದೆಯ 

ತಟ್ಟುತ ನೀನು

ಹೆಚ್ಚು ಅರಿತೆನೆಂದು ಮೂಡಿತು ಗರ್ವ ಕೋಡು

 ಶಿರದ ಮೇಲೆ

ಹುಚ್ಚಿನಲಿ ಪ್ರಸಾದ ಚೆಲ್ಲಿದೆ ಗೌರವವ ಹೊರಗೆ

 ಅಟ್ಟುತ ನೀನು

     +ಗಣೇಶ ಪ್ರಸಾದ ಪಾಂಡೇಲು+

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top