ಉಡುಪಿ: ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದಲ್ಲಿ ಉಡುಪಿಯಲ್ಲಿ ಕಾರ್ಯಚರಿಸುತ್ತಿರುವ ತ್ರಿಶಾ ಪದವಿ ಪೂರ್ವ ಕಾಲೇಜು ಕಲ್ಯಾಣಪುರ ಇದರ ನೂತನ ಪಾಂಶುಪಾಲರಾಗಿ ರಾಮಕೃಷ್ಣ ಹೆಗಡೆ ಅಧಿಕಾರಿ ಸ್ವೀಕರಿಸಿದರು.
ಉಪ ಪ್ರಾಂಶುಪಾಲರಾಗಿ ಜೋಯಲ್ ಮನೋಜ್ ಫೆರ್ನಾಂಡಿಸ್ , ಆಡಳಿತ ಅಧಿಕಾರಿಯಾಗಿ ಜಯಪ್ರಕಾಶ್ ಶೆಟ್ಟಿ ನೇಮಕಗೊಳಿಸಲಾಯಿತು.
ಕ್ರಿಯೇಟಿವ್ನ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ, ಅಶ್ವತ್ ಎಸ್.ಎಲ್, ಅಮೃತ್ ರೈ ರವರ ಮೂಲಕ ಅಧಿಕಾರ ಹಸ್ತಾಂತರಿ ಪ್ರಾಂಶುಪಾಲರಾಗಿ ನಿಯುಕ್ತಿಗೊಂಡಿರುವ ರಾಮಕೃಷ್ಣ ಹೆಗಡೆಯವರು ಸಂಸ್ಥೆಯ ಏಳಿಗೆಯಲ್ಲಿ ಮಹತ್ತರ ಪಾತ್ರ ವಹಿಸಲಿ. ಉಪಪ್ರಾಂಶುಪಾಲರಾಗಿ ನಿಯೋಜನೆಗೊಂಡಿರುವ ಭೌತಶಾಸ್ತç ಉಪನ್ಯಾಸಕ ಜೋಯೆಲ್ ಮನೋಜ್ ಫೆರ್ನಾಂಡಿಸ್ ಅವರ ಶೈಕ್ಷಣಿಕ ಅನುಭವದೊಂದಿಗೆ ಹೆಚ್ಚಿನ ಪ್ರಗತಿ ಸಾಧಿಸಲಿ ಎಂದು ಆಶಿಸಿದರು.
ಆಡಳಿತಾಧಿಕಾರಿಯಾಗಿ ನೇಮಕವಾಗಿರುವ ಜಯಪ್ರಕಾಶ್ ಶೆಟ್ಟಿ ಅವರು ಮುಖ್ಯೋಪಾಧ್ಯಾಯರಾಗಿ ಅನೇಕ ವರ್ಷಗಳ ಅನುಭವ ಹೊಂದಿರುವ ಸಮರ್ಥ ವ್ಯಕ್ತಿ. ಅವರ ಮೂಲಕ ಕಾಲೇಜಿನ ಮತ್ತು ವಸತಿ ನಿಲಯಗಳ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲು ಅನುಕೂಲಕರವಾಗಿದೆ.
ಇದೇ ಸಂದರ್ಭದಲ್ಲಿ ತ್ರಿಶಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವರ್ಗ, ಪಿಆರ್ಓ ಲಿಶಾನ್ ಗೌಡ, ಬೋಧಕೇತರ ವೃಂದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






































