ಹೆಬ್ರಿ : ಮುನಿಯಾಲು ಎಂಬಲ್ಲಿ ಬೃಹತ್ ಕಾಳಿಂಗ ಸರ್ಪವೊಂದು ಬಿಸಿಲ ಬೇಗೆಯಿಂದ ರಕ್ಷಣೆ ಪಡೆಯಲು ಮನೆಯ ಒಳಗಡೆ ಆಶ್ರಯ ಪಡೆದಿರುವುದು ಕಂಡು ಬಂದಿದೆ.








ಘಟನೆಯಿಂದ ಬೆದರಿದ ಮನೆ ಮಂದಿ ಉರಗ ತಜ್ಞ ರನ್ನು ಸ್ಥಳಕ್ಕೆ ಕರೆದು ಮನೆಯೊಳಗಿದ್ದ ಕಾಳಿಂಗ ಸರ್ಪವನ್ನು ಹಿಡಿಯುವಂತೆ ಅನುವು ಮಾಡಿದರು.
ಚಾಕ್ಯಚಾಕ್ಯತೆಯಿಂದ ಕಾಳಿಂಗ ಸರ್ಪವನ್ನು ಹಿಡಿದು ದಟ್ಟರಣ್ಯ ಪ್ರದೇಶದಲ್ಲಿ ಬಂಧಮುಕ್ತಗೊಳಿಸಿದ ಉರಗತಜ್ಞರು ಅದಕ್ಕೂ ಮುನ್ನ ಉರಗದ ಕುರಿತು ಜನಜಾಗೃತಿ ಮೂಡಿಸಿದರರಲ್ಲದೇ ಕಾಳಿಂಗ ಸರ್ಪ ಗಾತ್ರ ಹಾಗೂ ಭಾರದ ವಿವರ ನೀಡಿದರು.
ಅದೃಷ್ಟವಶಾತ್ ಮನೆಯ ನಿವಾಸಿಗಳಿಗೆ ಯಾವುದೇ ತೊಂದರೆ ನೀಡಿಲ್ಲ. ವಾತಾವರಣದ ಉಷ್ಣತೆ, ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆ ಮನೆ ಮಂದಿ ಬಹಳ ಜಾಗರೂಕತೆ ವಹಿಸುವುದು ಈ ಸಮಯದಲ್ಲಿ ಅಗತ್ಯವಾಗಿದೆ.
ಹಾವುಗಳು ಕತ್ತಲು, ನೆರಳು ಬೀಳುವ, ತಂಪಾದ ಸ್ಥಳಗಳನ್ನು ಹುಡುಕಿಕೊಂಡು ಬರುತ್ತವೆ. ಎಚ್ಚರಿಕೆ ವಹಿಸಿ, ಪಾದರಕ್ಷೆ, ಬೂಟ್ಸ್‌ಗಳನ್ನು ಧರಿಸುವಾಗಲೂ ಮುನ್ನೆಚ್ಚರಿಕೆ ಗಮನಿಸುವುದು ಒಳ್ಳೆಯದು.






































