ನವದೆಹಲಿ : ಸಾಣೂರು ಗ್ರಾಮ ಪಂಚಾಯತ್ ಗೆರಾಷ್ಟ್ರೀಯ ಪಂಚಾಯತ್ ಪುರಸ್ಕಾರದಲ್ಲಿ ರಾಷ್ಟ್ರ ಮಟ್ಟದಲ್ಲಿ ಅವಾರ್ಡ್
RB NEWS
Bureau Report
ನವದೆಹಲಿ : ಸಾಣೂರು ಗ್ರಾಮ ಪಂಚಾಯತ್ಗೆ ರಾಷ್ಟ್ರೀಯ ಪಂಚಾಯತ್ ಪುರಸ್ಕಾರದಲ್ಲಿ ರಾಷ್ಟ್ರ ಮಟ್ಟದಲ್ಲಿ ಅವಾರ್ಡ್
ಸಾಣೂರು ಗ್ರಾಮ ಪಂಚಾಯತ್ ನ ಪಿಡಿಒ ಶ್ರೀ ವಿಶ್ವನಾಥ್ ರವರು ಈ ಪ್ರಶಸ್ತಿಯನ್ನುಕೇಂದ್ರ ಪಂಚಾಯತ್ ರಾಜ್ ಸಚಿವರಾದ ಶ್ರೀ ರಾಜೀವ ರಂಜನ್ ಸಿಂಗ್ ಆಲಿಯಾಸ್ ಲಲನ್ ಸಿಂಗ್ ರವರಿಂದ ಸ್ವೀಕರಿಸಿದರು.
ಜೂನ್ 3 ಬುಧವಾರದಂದು ನವದೆಹಲಿಯ ಸ್ಕೋಪ್ ಕನ್ವೆನ್ಷನ್ ಸೆಂಟರ್ನಲ್ಲ್ಲಿ ಜರುಗಿದ ಈ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಜಿಲ್ಲಾ ಯೋಜನಾಧಿಕಾರಿಗಳಾದ ಉದಯ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿಗಳಾದ ನಿಶ್ಚಿತ್ ಹೆಗಡೆ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರತೀಕ್ ಬಾಯಲ್, ಕಾರ್ಕಳ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಪ್ರಶಾಂತ್ ರವರು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.