

ಅಕ್ರಮ ಗಣಿಗಾರಿಕೆ : 3 ಆರೋಪಿಗಳ ವಿರುದ್ದ ಪ್ರಕರಣ ದಾಖಲು


ಕಾರ್ಕಳ: ಸರಕಾರಿ ಜಾಗದಲ್ಲಿದ್ದ ಕಲ್ಲು ಬಂಡೆಗಳನ್ನು ಯಾವುದೇ ಪರವಾನಿಗೆ ಪಡೆಯದೆ ಒಡೆದು ಸೈಜ್ ಕಲ್ಲುಗಳಾಗಿ ಪರಿವರ್ತಿಸಿ, ಸ್ವಂತ ಲಾಭಕ್ಕಾಗಿ ಕಳವು ಮಾಡಿ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಆರೋಪಿಗಳಾಗಿ ಅರುಣ್ ಕುಮಾರ್ ಶೆಟ್ಟಿ (ಕುಕ್ಕುಂದೂರು), ಸದಾಶಿವ ಶೆಟ್ಟಿ (ಕುಕ್ಕುಂದೂರು), ಸತೀಶ್ ಕಿಣಿ (ಕುಕ್ಕುಂದೂರು) ಹಾಗೂ ಇತರರನ್ನು ಗುರುತಿಸಲಾಗಿದೆ.
ಜೂನ್ 2ರಂದು ಬೆಳಿಗ್ಗೆ ಸುಮಾರು 11:15 ಗಂಟೆಗೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಅರ್ಬಿಪಾದೆ ಪ್ರದೇಶದ ಸರ್ವೆ ನಂ. 281ರ ಸರಕಾರಿ ಜಾಗದಲ್ಲಿದ್ದ ಕಲ್ಲು ಬಂಡೆಗಳನ್ನು ಆರೋಪಿತರು ಸಂಘಟಿತರಾಗಿ ಯಾವುದೇ ಪರವಾನಿಗೆ ಇಲ್ಲದೆ ಒಡೆದು ಸೈಜ್ ಕಲ್ಲುಗಳಾಗಿ ಪರಿವರ್ತಿಸಿ, ಬಳಿಕ KA-20-A-7261, KA-20-B-8099 ಹಾಗೂ KA-20-AB-0482 ಸಂಖ್ಯೆಯ ಲಾರಿಗಳಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಮೇಲಾಧಿಕಾರಿಗಳಿಂದ ದೊರೆತ ಮಾಹಿತಿಯ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ (ಕಾನೂನು ಸುವ್ಯವಸ್ಥೆ ಮತ್ತು ಸಂಚಾರ) ಮುರುಳೀಧರ ನಾಯ್ಕ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ದಾಳಿಯ ವೇಳೆ ಕಳವು ಮಾಡಿದ ಸುಮಾರು 95 ಸೈಜ್ ಕಲ್ಲುಗಳು, ಅವುಗಳನ್ನು ಸಾಗಾಟಕ್ಕೆ ಬಳಸಲಾಗುತ್ತಿದ್ದ ಮೂರು ಲಾರಿಗಳು, KA-20-P-9742 ಸಂಖ್ಯೆಯ ಕಂಪ್ರೆಶರ್ ಸೇರಿದಂತೆ ಕಲ್ಲು ಒಡೆಯಲು ಮತ್ತು ಗಣಿಗಾರಿಕೆ ನಡೆಸಲು ಬಳಸಲಾಗಿದ್ದ ವಿವಿಧ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ವಸ್ತುಗಳಲ್ಲಿ:
3 ಲಾರಿಗಳು
95 ಸೈಜ್ ಕಲ್ಲುಗಳು
1 ಕಂಪ್ರೆಶರ್
4 ದೊಡ್ಡ ಚಮ್ಮಡಿಗಳು
2 ಸಣ್ಣ ಸುತ್ತಿಗೆಗಳು
4 ಚೇಣ್ಗಳು
1 ಕಬ್ಬಿಣದ ಸರಳು
1 ಕಬ್ಬಿಣದ ಹಾರೆ
1 ಡ್ರಿಲ್ಲಿಂಗ್ ಯಂತ್ರ
1 ಸಣ್ಣ ಕಬ್ಬಿಣದ ರಾಡ್
1 ದೊಡ್ಡ ಕಬ್ಬಿಣದ ರಾಡ್ ಸೇರಿವೆ.
ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 79/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2), 112(1) ಹಾಗೂ 190ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಕೋಮಾಕ್ಕೆ ಜಾರಿದ ಉಡುಪಿ ಗಣಿ ಇಲಾಖೆ !
- ಕೋಮಾಕ್ಕೆ ಜಾರಿದ ಉಡುಪಿ ಗಣಿ ಇಲಾಖೆ
- ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನಾದ್ಯಂತ ಅಕ್ರಮ ಗಣಿ ಲೂಟಿ
- ಕೋಟಿ ಗಟ್ಟಲೆ ಗಣಿ ಲೂಟಿ ಮಾಡಿದ್ದರೂ ಕ್ರಮ ಕೈಗೊಳ್ಳದ ಗಣಿ ಅಧಿಕಾರಿಗಳು
*ಪೊಲೀಸರಿಂದಲೇ ಅಕ್ರಮ ಗಣಿಗಾರಿಕೆ ಮೇಲೆ ದಾಳಿ ಕಾರ್ಯಚರಣೆ
- ಅಕ್ರಮ ಗಣಿಗಾರಿಕೆ ವಿರುದ್ದ ಕ್ರಮ ಪೊಲೀಸರಿಂದ ಕ್ರಮ ಗಣಿ ಇಲಾಖಾಗೆ ತೀವ್ರ ಮುಖಭಂಗ
- ಗಣಿ ಮಾಲೀಕರ ಜೊತೆ ಗಣಿ ಅಧಿಕಾರಿ ನಂಟು.
- ಅಕ್ರಮಕ್ಕೆ ನೇರವಾಗಿ ಸಾಥ್ ನೀಡುತ್ತಿರುವ ಗಣಿ ಅಧಿಕಾರಿಗಳು.
- ಅಕ್ರಮ ಗಣಿಗಾರಿಕೆ ವಿರುದ್ದ ಸಾರ್ವಜನಿಕರಿಂದ ದೂರು ನೀಡಿದರೂ ಕ್ರಮ ಕೈಗೊಳ್ಳದ ಅಧಿಕಾರಿ
- ಉಡುಪಿ ಗಣಿ ಅಧಿಕಾರಿ ವಿರುದ್ದ ಸಾರ್ವಜನಿಕರು ಗರಂ
*ಅಕ್ರಮಗಳಿಗೆ ಗಣಿಗಾರಿಕೆ ನೇರವಾಗಿ ಬೆಂಬಲ ನೀಡುತ್ತಿದ್ದಾರಾ ಗಣಿ ಅಧಿಕಾರಿಗಳು


































