ಶ್ರೀ ನಾರಾಯಣ ಗುರು ಸ್ವಾಮೀಜಿಯವರಿಗೆ ನಿರ್ಲಕ್ಷ್ಯ ತೋರಿದ ಬಿಜೆಪಿ: ಮಾಜಿ ಸಚಿವ ವಿನಯಕುಮಾರ್ ಸೊರಕೆ

Picture of RB NEWS

RB NEWS

Bureau Report

ಕಾರ್ಕಳ: ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಥಪತನಗೊಂಡ ಆ ದಿನಗಳಲ್ಲಿ ಪಕ್ಷದ ವರಿಷ್ಠೆ ಇಂದಿರಾಗಾಂಧಿ ಅವರಿಗೆ ರಾಜಕೀಯ ಮರುಜನ್ಮ ಕೊಟ್ಟ ಕ್ಷೇತ್ರ ಚಿಕ್ಕಮಗಳೂರು ಆಗಿದೆ. ಆಗಿನ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಫ್ತಿಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರವು ಒಳಗೊಂಡಿತ್ತು. ಇಂದಿರಾಗಾಂಧಿ ಪರವಾಗಿ ಅತೀ ಹೆಚ್ಚು ಮತದಾನವಾದ ಕ್ಷೇತ್ರ ಕಾರ್ಕಳ ಎಂಬ ಹೆಗ್ಗಳಿಕೆಗೆ ಕಾರಣವಾಗಿತ್ತು. ಇಂತಹ ಗತವೈಭವವನ್ನು ಮರುಕಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಮುಂದಾಗಬೇಕು. ಈ ಪ್ರತಿಜ್ಞೆ ಮುಂದಿಟ್ಟುಕೊಂಡು ಲೋಕಸಭಾ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ, ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು ಹಾಗೂ ನಾನು ಜಂಟೀಯಾಗಿ ದೀಪ ಪ್ರಜ್ವಲಿಸಿದ್ದೇವೆ ಎಂದು ಕರ್ನಾಟಕ ಲೋಕಸಭಾ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.


ಪೆರ್ವಾಜೆ ಬಿಲ್ಲವ ಸಮಾಜದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಪು ಕ್ಷೇತ್ರದಿಂದ ಸ್ವರ್ಧಸಿದ ನಾನು ಹಾಗೂ ಬೈಂದೂರು ಕ್ಷೇತ್ರದಿಂದ ಸ್ವರ್ಧಾ ಕಣಕ್ಕೆ ಇಳಿದ ಗೋಪಾಲ ಪೂಜಾರಿಯ ಸೋಲಿಗೆ ಪ್ರಸ್ತಕ ಸಾಲಿನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿಯವರೇ ನೇರ ಕಾರಣರಾಗಿದ್ದರು. ನಮ್ಮಿಬ್ಬರ ವಿರುದ್ಧ ಬಿಲ್ಲವ ಸಮಾಜದವರನ್ನು ಎತ್ತಿ ಕಟ್ಟುವ ಕೆಲಸ ಮಾಡಿದ್ದರು ಎಂದು ಸೊರಕೆ ಆರೋಪಿಸಿದರು.

ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿದ ಮಹಾನ್ ವ್ಯಕ್ತಿ ಶ್ರೀನಾರಾಯಣ ಗುರುಗಳಾಗಿದ್ದಾರೆ. ಅವರ ಸಿದ್ಧಾಂತದ ಒಂದು ಭಾಗವೇ ದೇಶದ ಸಂವಿಧಾನವಾಗಿದೆ. ಆದುದರಿಂದ ಪ್ರತಿಯೊಬ್ಬ ನಾಗರಿಕನು ಮೂಲ ಸೌಕರ್ಯದೊಂದಿಗೆ ಹಕ್ಕುಗಳನ್ನು ಪಡೆಯಲು ಸಾಧ್ಯವಾಗಿದೆ.‌

ಆದರೆ ಪ್ರಜಾಪ್ರಭುತ್ವ ದಿನದಂದು ದೆಹಲಿಯಲ್ಲಿ ನಡೆದ ಪ್ರಜಾಪ್ರಭುತ್ವ ದಿನಾಚರಣೆಯಂದು ಬ್ರಹ್ಮ ಶ್ರೀ ನಾರಾಯಣ ಗುರುಗಳ ಸ್ತಬ್ದಚಿತ್ರಕ್ಕೆ ಕೇಂದ್ರದ ಬಿಜೆಪಿ ಸರಕಾರವು ಅವಕಾಶವನ್ನೇ ನೀಡಿಲ್ಲ.

ಮಾತ್ರವಲ್ಲದೇ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದ ಅವಧಿಯಲ್ಲಿ ಶೈಕ್ಷಣಿಕ ಪುಸ್ತಕದಿಂದ ಶ್ರೀನಾರಾಯಣ ಗುರುಗಳ ಪಾಠವನ್ನು ತೆಗೆದು ಹಾಕಲಾಗಿತ್ತು.

ಈ ಎಲ್ಲಾ ಬೆಳವಣಿಗೆ ಬಿಜೆಪಿಯಿಂದ ನಡೆದಿದ್ದು, ಕೋಟಾ ಶ್ರೀನಿವಾಸ ಪೂಜಾರಿ ಯಾವುದೇ ಪ್ರತಿಕ್ರಿಯೆ ನೀಡದೇ ಮೌನ ವಹಿಸಿದ್ದರು.

ಶ್ರೀನಿವಾಸ ಪೂಜಾರಿ ಅವರಿಗೆ ಬಿಜೆಪಿ ಲೋಕಸಭಾ ಅಭ್ಯರ್ಥಿಯನ್ನಾಗಿ ಘೋಸಿಸಿದ ಬೆನ್ನಲ್ಲೆ ಅವರಿಗೆ ಸಮಾಜಭಾಂದವರ ನೆನೆಪಿಗೆ ಬರುತ್ತಿದೆ. ಕೋಟಾ ಶ್ರೀನಿವಾಸ ಪೂಜಾರಿ ಸಮಾಜಕ್ಕೆ ನೀಡಿದ ಕೊಡುಗೆ ಶೂನ್ಯವಾಗಿದೆ ಎಂದು ವಿನಯಕುಮಾರ್ ಕಿಡಿಕಾರಿದ್ದಾರೆ.


ಜಯಪ್ರಕಾಶ್ ಹೆಗ್ಡೆ ಕೇವಲ 2೦ ತಿಂಗಳ ಅವಧಿಗೆ ಮಾತ್ರ ಸಂಸದರಾಗಿದ್ದರೂ, ಗಣನೀಯ ಕೆಲಸ ಕಾರ್ಯಗಳನ್ನು ಸಮಾಜಕ್ಕಾಗಿ ನೀಡಿದ್ದಾರೆ. ಅಡಿಕೆಗೆ ದರ ನಿಗದಿ, ಕಾಫಿ ಬೆಳೆಗಾರರ ಸಮಸ್ಸೆ, ಡೀಮ್ಡ್ ಫಾರೆಸ್ಟ್, ಕಸ್ತೂರಿ ರಂಗನ್ ವರದಿ ಇವುಗಳ ಲೋಪದೋಷಗಳ ಕುರಿತು ಕೇಂದ್ರ ಸರಕಾರದ ಮುಂದಿಟ್ಟು ಸಮಸ್ಸೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯಾಣಿಕ ಪ್ರಯತ್ನ ಜಯಪ್ರಕಾಶ್ ಹೆಗ್ಡೆ ನಡೆಸಿದ್ದರು.
ನಂತರದಲ್ಲಿ ಬಂದ ಸಂಸದರು ಕ್ಷೇತ್ರದ ಯಾವುದೇ ಸಮಸ್ಸೆಗಳನ್ನು ಕೇಂದ್ರ ಸರಕಾರದ ಮುಂದಿಡುವ ಪ್ರಯತ್ನ ನಡೆಸಿಲ್ಲ. ಹೀಗಾಗಿ ಅವರಿಗೆ ಕೇಂದ್ರ ಸರಕಾರವು ಸಚಿವ ಸ್ಥಾನ ನೀಡಿತು ಎಂದು ವ್ಯಂಗ್ಯವಾಡಿದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕತ್ವ ಕೊರೆತೆ ನೀಗಿತು
ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್, ಗೋಪಾಲಭಂಡಾರಿ, ಯು.ಆರ್.ಸಭಾಪತಿ ಅವರು ನಿಧನದಿಂದಾಗಿ ಉಡುಪಿ ಜಿಲ್ಲೆಯಲ್ಲಿ ಅಂಕಿಅಂಶ ಕ್ಷೀಣಿಸತೊಡಗಿತು.
ಈ ನಡುವೆ ಜಯಪ್ರಕಾಶ್ ಹೆಗ್ಡೆ ಅವರು ಕಾಂಗ್ರೆಸ್ ಪಕ್ಷಕ್ಕೆ ಮರಳಿರುವ ಸನ್ನಿವೇಶದಿಂದ ಪಕ್ಷದಲ್ಲಿ ಹೊಸ ಸಂಚಾಲನ ಮೂಡಿಸಿದೆ ಎಂದು ಇದೇ ಸಂದರ್ಭದಲ್ಲಿ ವಿನಯಕುಮಾರ್ ಸೊರಕೆ ಮನದಾಳ ಮಾತುಗಳನ್ನು ಚಿಚ್ಚಿಟ್ಟರು.

ಸದಾಶಿವ ದೇವಾಡಿಗ – ಬ್ಲಾಕ್ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ- ಅಭ್ಯರ್ಥಿ. ಅಶೋಕ್ ಕುಮಾರ್ ಕೊಡವೂರು- ಡಿಸಿಸಿ ಅಧ್ಯಕ್ಷರು. ಉದಯ ಕುಮಾರ್ ಶೆಟ್ಟಿ- ನಿಕಟಪೂರ್ವ ವಿಧಾನ ಸಭಾ ಅಭ್ಯರ್ಥಿ. ಡಿ ಅರ್ ರಾಜು- ಕೆಪಿಸಿಸಿ ಸದಸ್ಯರು. ಸುರೇಂದ್ರ ಶೆಟ್ಟಿ- ಕೆಪಿಸಿಸಿ ಸದಸ್ಯರು. ಎಂ.ಎ. ಗಫೂರ್ ಕೆಪಿಸಿಸಿ ಕಾರ್ಯದರ್ಶಿ. ಜಿಎ ಭಾವ ಕೆಪಿಸಿಸಿ ಕಾರ್ಯದರ್ಸಿ. ಕಿಶನ್ ಹಗ್ಡೆ ಕೊಳ್ಕೆ ಬೈಲ್-ಜಿಲ್ಲಾ ಕಾಂಗ್ರೆಸ್ ಕಾರ್ಯಾದ್ಯಕ್ಷರು. ದೀಪಕ್ ಕೋಟ್ಯಾನ್- ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರು. ಅನಿತಾ ಡಿಸೋಜ- ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ. ರೋಷನ್ ಶೆಟ್ಟಿ- ಐಟಿ ಸೆಲ್ ಅಧ್ಯಕ್ಷ. ಮಾಕ್೯ ಫೆರ್ನಾಂಡಿಸ್. ಕಿರಣ್ ಹೆಗ್ಡೆ- ಜಿಲ್ಲಾಧ್ಯಕ್ಷರು ಇಂಟಕ್, ಉಪಸ್ಬಿತರಿದ್ಪಿದರು.

ಬಿಪಿನಚಂದ್ರ ಪಾಲ್ ನಕ್ರೆ- ಜಿಲ್ಲಾ ಕಾಂಗ್ರೆಸ್ ವಕ್ತಾರ ( ಸ್ವಾಗತ ಮತ್ತು ಪ್ರಸ್ತಾವನೆ) ಶುಭದಾ ರಾವ್- ಬ್ಲಾಕ್ ಕಾಂಗ್ರೆಸ್ ವಕ್ತಾರ (ಕಾರ್ಯಕ್ರಮ ನಿರ್ವಹಣೆ) ಯೋಗೀಶ ಇನ್ನಾ- ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ( ವಂದನಾರ್ಪಣೆ)

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top