ಕಾರ್ಕಳ: ವಿಶ್ವ ಪ್ರಸಿದ್ಧಿ ಪಡೆದ ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಚಚ್೯ ನಲ್ಲಿ ಗರಿಗಳ ಭಾನುವಾರದಂದು ನೈಜ ಶಿಲುಬೆ ಹಾದಿಯನ್ನು ನೆರವೇರಿಸಲಾಯಿತು.
ಚರ್ಚ್ ವಠಾರದಲ್ಲಿ ಪ್ರಾರಂಭವಾದ ಶಿಲುಬೆ ಹಾದಿ ಪರಪಳೇ ಪೆಟ್ಟದವರೆಗೆ ಸಾಗಿತು.
ಬಂಟ್ವಾಳ ಇನ್ಫೆಂಟ್ ಜೀಸಸ್ ಚರ್ಚಿನ ಸಹಾಯಕ ಧರ್ಮ ಗುರುಗಳಾದ ವಂ ರಾಹುಲ್ ಡಿಸೋಜಾ. ಶಿಲುಬೆ ಹಾದಿಯ ಮುಂದಾಳುತ್ವವನ್ನು ವಹಿಸಿ ಪ್ರವಚನವಿತ್ತರು.
“ನಾವು ನಮ್ಮ ಜೀವನದಲ್ಲಿ ನಮ್ಮ ನಮ್ಮ ಶಿಲುಬೆಯನ್ನು ಹೊತ್ತು ಮುಂದೆ ಸಾಗಬೇಕು”. ಅವರು ಪ್ರವಚನ ನೀಡಿದರು.
ಕಾರ್ಕಳ ವಲಯದ ಅನೇಕ ಕಲಾವಿದರು ಪಾಲ್ಗೊಂಡರು.






ವಿಶೇಷವಾಗಿ ದೀಪಕ್ ಡಿಮೆಲ್ಲೊ ಅವರು ಪ್ರಭು ಯೇಸುವಿನ ಪಾತ್ರವನ್ನು ನಿರ್ವಹಿಸಿದರು. ನೈಜ ಶಿಲುಬೆ ಹಾದಿಯಲ್ಲಿ ಪಾತ್ರಗಳನ್ನು ಮಾಡುವ ಮೂಲಕ ಯೇಸು ಸ್ವಾಮಿ ಶಿಲುಬೆ ಗೇರಿದ ಹಾದಿಯಲ್ಲಿ ಚಿತ್ರಹಿಂಸೆಗಳನ್ನು ಅನುಭವಿಸಿದ ದೃಶ್ಯಾವಳಿಯು ಭಕ್ತ ಸಮೂಹ ಭಾವಪರವಶಗೊಳಿಸಿತು.
ಬಸಿಲಿಕದ ರೆಕ್ಟರ್ ವಂ.ಆಲ್ಬನ್ ಡಿಸೋಜಾ, ಸಹಾಯಕ ಧರ್ಮ ಗುರುಗಳಾದ ವಂ ಲ್ಯಾರಿ ಪಿಂಟೊ, ಆಧ್ಯಾತ್ಮಿಕ ಗುರುಗಳಾದ ವಂ. ರೋಮನ್ ಮಾಸ್ಕರೆನ್ಹಸ್ ಹಾಗೂ ಅಪಾರ ಭಕ್ತಾಧಿಗಳು ಪಾಲ್ಗೊಂಡರು.
ಶಿಲುಬೆ ಹಾದಿಯನು ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂತೋಷ್ ಡಿಸಿಲ್ವ, ಪಾಲನ ಮಂಡಳಿಯ ಕಾರ್ಯದರ್ಶಿಯಾದ ರೋನಾಲ್ಡ್ ನರೊನ್ಹಾ, ವಂದೀಶ್ ಮಥಾಯಸ್ ರೋಷನ್ ಸಲೇಸ್.ಹಾಗೂ ಜೊಯೆಲ್ ಅತ್ತೂರು,ಪಾಲನ ಮಂಡಳಿ ಅತ್ತೂರ್ ಐಸಿವೈಎಂ ಸಂಘಟನೆ ಅತ್ತೂರು. ಅಚ್ಚುಕಟ್ಟಾಗಿ ಆಯೋಜಿಸಿದರು.






































