ಮೂಲಭೂತವಾದಿಗಳ ಕೃತ್ಯಕ್ಕೆ ಮಹಿಳೆ ಆತ್ಮಹತ್ಯೆ : ಮೂವರು ಎಸ್ ಡಿ ಪಿ ಐ ಕಾರ್ಯಕರ್ತರ ಬಂಧನ

ಕಣ್ಣೂರು(ಕೇರಳ) ಜೂನ್ 19 : ಅನ್ಯಧರ್ಮದ ವ್ಯಕ್ತಿಯೊಬ್ಬನ ಜೊತೆಗೆ ಮಾತನಾಡಿದ ಕಾರಣಕ್ಕೆ ಮುಸ್ಲಿಂ ಮೂಲಭೂತವಾದಿ ಗುಂಪೊಂದು ಅವಮಾನಿಸಿದ ಪರಿಣಾಮವಾಗಿ 40 ವರ್ಷದ ಮುಸ್ಲಿಂ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಸ್ ಡಿ ಪಿ ಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಜೂನ್ 15ರ ಭಾನುವಾರ ಮಧ್ಯಾಹ್ನ ವೇಳೆಗೆ ಕಾಯಲೋಡ್ ಅಚಂಕರ ಚರ್ಚ್ ಬಳಿಯಲ್ಲಿ ಈ ಘಟನೆ ನಡೆದಿದೆ.
ಯುವಕನೊಬ್ಬನ ಜೊತೆಗೆ ರಜಿನಾ ಎಂಬಾಕೆ ಮಾತನಾಡಿದ್ದು, ಅದೇ ಸಂದರ್ಭದಲ್ಲಿ ಮೂಲಭೂತವಾದಿಗಳ ಗುಂಪು ಅಡ್ಡಗಟ್ಟಿ ಮಹಿಳೆಯನ್ನು ಅವಮಾನಿಸಿದ್ದಲ್ಲದೆ ಯುವಕನನ್ನು ನಿರ್ಜನ ಪ್ರದೇಶಕ್ಕೊಯ್ದು ಹಲ್ಲೆ ಮಾಡಿತ್ತು.
ತಾಲಿಬಾನ್ ಸಂಸ್ಕ್ರತಿ !
ಐದು ಗಂಟೆಗಳ ಕಾಲ ಕೂಡಿ ಹಾಕಿ ಹಲ್ಲೆಗೈದು ರಾತ್ರಿ ಎಂಟು ಗಂಟೆ ವೇಳೆಗೆ ಯುವಕನನ್ನು ಪರಿಸರದ ಎಸ್ ಡಿ ಪಿ ಐ ಕಚೇರಿಗೆ ಒಯ್ದಿದ್ದರು. ಅಲ್ಲಿಗೆ ಮಹಿಳೆ ರಜಿನಾ ಮತ್ತು ಆಕೆಯ ಮನೆಯವರನ್ನು ಕರೆಸಿ ವಾರ್ನಿಂಗ್ ಮಾಡಿ ರಾತ್ರಿ ವೇಳೆ ಬಿಟ್ಟು ಕಳಿಸಿದ್ದರು. ಯುವಕನ ಮನೆಯವರನ್ನೂ ಕರೆಸಿ ಎಚ್ಚರಿಕೆ ನೀಡಿದ್ದರು. ಈ ವೇಳೆ, ಎಸ್ ಡಿ ಪಿ ಐ ಕಾರ್ಯಕರ್ತರು ಮಹಿಳೆಯನ್ನು ಅವಾಚ್ಯ ಪದಗಳಿಂದ ನಿಂದಿಸಿ ಅವಮಾನಿಸಿದ್ದರು ಎನ್ನಲಾಗಿದೆ.
ಇದರಿಂದ ನೊಂದ ಮಹಿಳೆ ಜೂನ್ 17ರ ಮಂಗಳವಾರ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದು, ಈ ವೇಳೆ ಮೂವರು ಯುವಕರ ಹೆಸರನ್ನು ಉಲ್ಲೇಖಿಸಿ ಡೆತ್ ನೋಟ್ ಬರೆದಿಟ್ಟಿದ್ದಳು.

ಅದನ್ನು ಆಧರಿಸಿ ಪೊಲೀಸರು ರಫ್ತಾಸ್, ಮುಬಾರ್ಶಿ ಮತ್ತು ಫೈಸಲ್ ಎಂಬವರನ್ನು ಬಂಧಿಸಿದೆ. ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು ಅವರ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ.
ಮುಖ್ಯಮಂತ್ರಿ ಪ್ರತಿನಿಧಿಸಿದ ಜಿಲ್ಲೆ!
ನೈತಿಕ ಪೊಲೀಸ್ ಗಿರಿ ಮಾದರಿಯ ಘಟನೆ ಇದಾಗಿದ್ದು ಮುಸ್ಲಿಂ ಯುವಕರ ಹುಚ್ಚಾಟಕ್ಕೆ ಮಹಿಳೆ ಬಲಿಯಾಗಿದ್ದಾರೆ. ವಿಶೇಷ ಅಂದ್ರೆ, ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಸ್ವಂತ ಊರಿನಲ್ಲೇ ಘಟನೆ ನಡೆದಿದೆ. ಚರ್ಚ್ ಬಳಿಯಲ್ಲಿ ನಿಂತು ಮಾತನಾಡಿದ ಕಾರಣಕ್ಕೆ ಮತಾಂಧ ಯುವಕರು ಅತಿರೇಕದ ವರ್ತನೆ ತೋರಿದ್ದರು.






































