ಆರ್.ಬಿ.ನ್ಯೂಸ್ ವರದಿಗೆ ಕಾರ್ಕಳ ಪುರಸಭೆ ಸ್ಪಂದನೆ
ಸೋರುತ್ತಿದ್ದ ಬಸ್ನಿಲ್ದಾಣ ಹೊಸ ಮೇಲ್ಚಾವಣೆ
ಕಾರ್ಕಳ: 26 ವರ್ಷಗಳ ಹಿಂದೆ ಉದ್ಯಮಿಗಳ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿದ್ದ ವಿಸ್ತೃತ ಬಸ್ನಿಲ್ದಾಣದ ಬಗ್ಗೆ ಸ್ಥಳೀಯ ಆಡಳಿತದ ನಿರ್ಲಕ್ಷö್ಯದಿಂದಾಗಿ ಸಮಸ್ಸೆಗಳ ತಾಣವಾಗಿ ಮಾರ್ಪಟ್ಟಿದ್ದು, ಈ ಕುರಿತು 2025 ಮೇ 28ರಂದು ಆರ್.ಬಿ.ನ್ಯೂಸ್ ಸಮಗ್ರ ವರದಿ ಪ್ರಕಟಿಸಿತು.
ಇದರಿಂದ ಎಚ್ಚೆತ್ತುಕೊಂಡ ಕಾರ್ಕಳ ಪುರಸಭಾ ಆಡಳಿತ ವರ್ಗವು ಮರುದಿನ ವಿಸ್ತೃತ ಬಸ್ನಿಲ್ದಾಣ ಹಾಗೂ ಅದರ ಪರಿಸರದಲ್ಲಿ ಸಮಗ್ರ ಸ್ವಚ್ಚತಾ ಕಾರ್ಯ ನಡೆಸಿತು.
ಜೂನ್ 16ರಂದು ವಿಸ್ತೃತ ಬಸ್ನಿಲ್ದಾಣದ ದುಸ್ಥಿತಿಯಲ್ಲಿ ಮೇಲ್ಚಾವಣೆಯನ್ನು ಬದಲಾಯಿಸುವ ಕಾಮಗಾರಿ ನಡೆಸಲಾಗಿದೆ. ಪರಿಣಾಮವಾಗಿ 14 ಶೀಟ್ಗಳನ್ನು ಬದಲಾಯಿಸಲಾಗಿದೆ. ಅದರ ವೆಚ್ಚ ರೂ.38 ಸಾವಿರ ಎಂದು ಪುರಸಭೆ ಕಡತ ಮೂಲಗಳಿಂದ ತಿಳಿದುಬಂದಿದೆ.
ಸಾಮಾನ್ಯ ಸಭೆಗೆ ಒಂದು ದಿನ ಬಾಕಿ ಉಳಿದಿತ್ತು!
ಕಾರ್ಕಳ ಪುರಸಭೆಯ ಸಾಮಾನ್ಯ ಸಭೆ ಜೂನ್ 18ರಂದು ಜರುಗಲಿದೆ. ಜೂನ್ 16ರಂದು ವಿಸ್ತೃತ ಬಸ್ ನಿಲ್ದಾಣದ ದುಸ್ಥಿತಿಯಲ್ಲಿ ಇದ್ದ ಮೇಲ್ಛಾವಣೆಯ ಕೆಲ ಶೀಟ್ ಗಳ ಬದಲಾವಣೆ ಮಾಡಲಾಗಿದೆ. ಪುರಸಭೆಯ ಮಾಜಿ ಅಧ್ಯಕ್ಷೆ ಸುಮಾ ಕೇಶವ ಪ್ರತಿನಿಧಿಸಿದ ವಾಡ್೯ ಇದಾಗಿರುವುದು ಗಮನಾರ್ಹ.
ಆರ್.ಬಿ.ನ್ಯೂಸ್ ವರದಿಯಲ್ಲಿ ಏನಿತ್ತು?

























