ಆರ್.ಬಿ.ನ್ಯೂಸ್ ವರದಿಗೆ ಕಾರ್ಕಳ ಪುರಸಭೆ ಸ್ಪಂದನೆ : ಸೋರುತ್ತಿದ್ದ ಬಸ್‌ನಿಲ್ದಾಣ ಹೊಸ ಮೇಲ್ಚಾವಣೆ

Picture of RB NEWS

RB NEWS

Bureau Report

ಕಾರ್ಕಳ: 26 ವರ್ಷಗಳ ಹಿಂದೆ ಉದ್ಯಮಿಗಳ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿದ್ದ ವಿಸ್ತೃತ ಬಸ್‌ನಿಲ್ದಾಣದ ಬಗ್ಗೆ ಸ್ಥಳೀಯ ಆಡಳಿತದ ನಿರ್ಲಕ್ಷö್ಯದಿಂದಾಗಿ ಸಮಸ್ಸೆಗಳ ತಾಣವಾಗಿ ಮಾರ್ಪಟ್ಟಿದ್ದು, ಈ ಕುರಿತು 2025 ಮೇ 28ರಂದು ಆರ್.ಬಿ.ನ್ಯೂಸ್ ಸಮಗ್ರ ವರದಿ ಪ್ರಕಟಿಸಿತು.
ಇದರಿಂದ ಎಚ್ಚೆತ್ತುಕೊಂಡ ಕಾರ್ಕಳ ಪುರಸಭಾ ಆಡಳಿತ ವರ್ಗವು ಮರುದಿನ ವಿಸ್ತೃತ ಬಸ್‌ನಿಲ್ದಾಣ ಹಾಗೂ ಅದರ ಪರಿಸರದಲ್ಲಿ ಸಮಗ್ರ ಸ್ವಚ್ಚತಾ ಕಾರ್ಯ ನಡೆಸಿತು.
ಜೂನ್ 16ರಂದು ವಿಸ್ತೃತ ಬಸ್‌ನಿಲ್ದಾಣದ ದುಸ್ಥಿತಿಯಲ್ಲಿ ಮೇಲ್ಚಾವಣೆಯನ್ನು ಬದಲಾಯಿಸುವ ಕಾಮಗಾರಿ ನಡೆಸಲಾಗಿದೆ. ಪರಿಣಾಮವಾಗಿ 14 ಶೀಟ್‌ಗಳನ್ನು ಬದಲಾಯಿಸಲಾಗಿದೆ. ಅದರ ವೆಚ್ಚ ರೂ.38 ಸಾವಿರ ಎಂದು ಪುರಸಭೆ ಕಡತ ಮೂಲಗಳಿಂದ ತಿಳಿದುಬಂದಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top