ಸಮಾಜಮುಖಿ ಚಿಂತನೆಯೊoದಿಗೆ ಹುಟ್ಟುಹಬ್ಬ

Picture of RB NEWS

RB NEWS

Bureau Report


ಜೂನ್ 8ರಂದು ಬೆಳಿಗ್ಗೆ 9.30ರಿಂದ 12.30ರ ವರೆಗೆ ಕಾರ್ಕಳ ಬಂಡೀಮಠದ ಮೂಡುಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮುನಿಯಾಲು ಉದಯ ಶೆಟ್ಟಿ ಅಭಿಮಾನಿ ಬಳಗ ಕಾರ್ಕಳ ಬ್ಲಾಕ್ ಮತ್ತು ಹೆಬ್ರಿ ಬ್ಲಾಕ್, ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಇದರ ಜಂಟೀ ಆಶ್ರಯದಲ್ಲಿ ಉದಯ ಶೆಟ್ಟಿ ಮುನಿಯಾಲು ಇವರ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ, ಉಚಿತ ಹೃದಯ ರೋಗ, ಸಾಮಾನ್ಯ ಆರೋಗ್ಯ ಮತ್ತು ಕಣ್ಣಿನ ತಪಾಸಣೆ ನಡೆಯಲಿದೆ.
ಕಾರ್ಕಳ ತಾಲೂಕಿನ ಸರಕಾರಿ ಪ್ರೌಢಶಾಲಾ ವಿದ್ಯಾಭ್ಯಾಸದ,ಎಸ್‌ಎಸ್‌ಎಲ್‌ಸಿ ಹಾಗೂ ಕಾರ್ಕಳ ತಾಲೂಕು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾಭ್ಯಾಸದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅಭಿನಂದನಾ ಕಾರ್ಯಕ್ರಮವು ಜರಗಲಿರುವುದು ಎಂದು ಪ್ರಕಟಣೆ ತಿಳಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top