ಶಂಕರನಾರಾಯಣ: ಸಿದ್ದಾಪುರದ ವ್ಯವಸಾಯ ಸೇವಾ ಸಹಕಾರಿ ಸಂಘ ದಲ್ಲಿ ಸಹಾಯಕ ಮ್ಯಾನೇಜರ್ ಆಶಾ ಎಂಬವರು ನೇಣುಬಿಗಿದು ಬದುಕಿಗೆ ಅಂತ್ಯ ಹೇಳಿದ್ದಾರೆ.
ಮಾರ್ಚ್ ೨೦ರಂದು ಬೆಳಿಗ್ಗೆ ೯.೦೦ ಗಂಟೆಗೆ ಅವರು ಸಿದ್ದಾಪುರ ಗ್ರಾಮದ ವಾರಾಹಿ ರಸ್ತೆ ಎಂಬಲ್ಲಿನ ವಾಸದ ಮನೆಯಿಂದ ಎಂದಿನoತೆ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ ೧೨:೩೦ ಗಂಟೆಗೆ ವ್ಯವಸಾಯ ಸೇವಾ ಸಹಕಾರಿ ಸಂಘ ದಲ್ಲಿ ಮ್ಯಾನೇಜರ್ ಮಹೇಶ್ ರವರು ಆಶಾ ಅವರ ಪತಿಗೆ ಕರೆ ಮಾಡಿ ಆಶಾರವರು ಅರ್ಜೇಂಟಾಗಿ ಮನೆಗೆ ಹೋಗಿರುತ್ತಾರೆ ಎಂದು ತಿಳಿಸಿದ್ದರು.
ಮಾಹಿತಿಯನ್ವಯ ಆಶಾರವರ ಪತಿ ವಿಜಯ ಮನೆಗೆ ಹೋಗಿ ನೋಡಿದ್ದಾಗ ಮಾಳಿಗೆಗೆ ಕೋಣೆಗೆ ಚಿಲಕ ಹಾಕಲಾಗಿತ್ತು. ಬಾಗಿಲನ್ನು ಒಡೆದು ನೋಡಿದಾಗ ಕೋಣೆಯ ಶೀಟಿಗೆ ಅಳವಡಿಸಿದ ಕಬ್ಬಿಣದ ರಾಡಿಗೆ ನೈಲಾನ್ ಹಗ್ಗ ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆಶಾ ಹೊರಳಾಡುತ್ತಿದ್ದಳು. ಕುಣಿಕೆಯಿಂದ ಕೆಳಗೆ ಇಳಿಸಿ ವಾಹನವೊಂದರಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೊದರು. ಪರೀಕ್ಷಿಸಿದ ವೈದ್ಯಾಧಿಕಾರಿಯವರು ಆಶಾ ಅದಾಗಲೇ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದರು.
ಮೃತ ಆಶಾ ಸಿದ್ಧಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕೆಲಸದ ಒತ್ತಡದಿಂದ ಅಥವಾ ಇನ್ನಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






































