ಸುಹಾಸ್ ಶೆಟ್ಟಿ ಕೊಲೆಗೆ ಪ್ರತಿಕಾರಕ್ಕೆ ಮುಂದಾದ ಕೋಡಿಕೆರೆ ಲೋಕೇಶ್ ಬಂಧನ

Picture of RB NEWS

RB NEWS

Bureau Report

ಮಂಗಳೂರು:  ಹಿಂದೂಪರ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಕರಾವಳಿ ನಗರಿ ಬೂದಿ ಮುಚ್ಚಿದ ಕೆಂಡದಂತಿದೆ.

ಇದರ ಹಿನ್ನಲ್ಲೆಯಲ್ಲಿ ಎಚ್ಚೆತ್ತುಕೊಂಡಿರುವ ದಕ್ಷಿಣ ಕನ್ನಡದಲ್ಲಿ  ನಿಷೇದಾಜ್ಞೆ ಜಾರಿಯಲ್ಲಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಕಠಿಣ ಕ್ರಮಗಳನ್ನು ಜಾರಿ ಮಾಡಿದ್ದಾರೆ.

ಇದರ ನಡುವೆಯೇ ಮಂಗಳೂರಿನಲ್ಲಿ ಪ್ರತೀಕಾರದ ಕಿಚ್ಚು ಕೂಡ ಜೋರಾದಂತೆ ಕಾಣಿಸುತ್ತಿದೆ.  ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಪ್ರತೀಕಾರಕ್ಕೆ ಹಾತೊರೆಯುತ್ತಿದ್ದ ರೌಡಿಶೀಟರ್​ನನ್ನು ಪೊಲೀಸರು ಬಂಧಿಸಿದ್ದಾರೆ. 

ಲೋಕೇಶ್ ಕೋಡಿಕೆರೆ ಗ್ಯಾಂಗ್​ನಿಂದ ಪ್ರತಿಕಾರಕ್ಕೆ ಯತ್ನ


ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಮಂಗಳೂರು ಉದ್ವಿಗ್ನಗೊಂಡಿತು.   ಸುಹಾಸ್ ಶೆಟ್ಟಿ ಹತ್ಯೆಯಾದ ರಾತ್ರಿಯೇ ಲೋಕೇಶ್ ಕೋಡಿಕೆರೆ ಗ್ಯಾಂಗ್ ಪ್ರತಿಕಾರಕ್ಕೆ ಯತ್ನಿಸಿತು. ಹೀಗಾಗಿ ಕಾವೂರು ಪೊಲೀಸರು ರೌಡಿಶೀಟರ್ ಕೋಡಿಕೆರೆ ಲೋಕೇಶ್ ಅನ್ನು ಬಂಧಿಸಿದ್ದಾರೆ.

ಕೋಡಿಕರೆ ಲೋಕೇಶ್ ಗುಂಪಿನಲ್ಲಿ ಸುಹಾಸ್ ಶೆಟ್ಟಿ ಗುರುತಿಸಿಕೊಂಡಿದ್ದನು.

ಸುಹಾಸ್ ಶೆಟ್ಟಿ ಹತ್ಯೆ ನಡೆದ ರಾತ್ರಿ ಲೋಕೇಶ್ ಕೋಡಿಕೆರೆ ಗ್ಯಾಂಗ್ ನಿಂದ ಪ್ರತಿಕಾರಕ್ಕೆ ಯತ್ನ ನಡೆದಿತ್ತೆಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ.

ಕುಂಟಿಕಾನ ಬಳಿ ಮೀನು ವ್ಯಾಪಾರಿ ಯುವಕನನ್ನು ಅಟ್ಟಾಡಿಸಿ ಕಲ್ಲು ಹೊತ್ತು ಹಾಕಿ ಕೊಲೆಗೆ ಯತ್ನ ಮಹಿಳೆ ಬೊಬ್ಬೆ ಹಾಕಿದ ಹಿನ್ನೆಲೆ ಬಚಾವ್ ಆಗಿದ್ದ ಉಳ್ಳಾಲ ನಿವಾಸಿ ಲುಕ್ಮಾನ್. ಈ ಕೃತ್ಯ ನಡೆಸಿದ ತಂಡವೇ ಲೋಕೇಶ್ ಗ್ಯಾಂಗ್.

ಇನ್ನೋವಾ ಕಾರಿನಲ್ಲಿ ಬಂದಿದ್ದ ಲೋಕೇಶ್ ಗ್ಯಾಂಗ್ ನಿಂದ ಅಟ್ಯಾಕ್ ನಡೆದಿತ್ತು . ಈ ಎಲ್ಲಾ ಮಾಹಿತಿಯನ್ವಯ ಕಾವೂರು ಪೊಲೀಸರು ಕಾರ್ಯಚರಣೆ ಕೋಡಿಕೆರೆ ಲೋಕೇಶ್ ನನ್ನು ಬಂಧಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top