ಎಕ್ಸಲೆಂಟ್‌ ಮೂಡಬಿದಿರೆ: ಎಸ್‌ಎಸ್‌ಎಲ್ ಸಿ ಫಲಿತಾಂಶ – ರಾಜ್ಯಕ್ಕೆ ದ್ವಿತೀಯ ಸ್ಥಾನ ಅಗ್ರ ಹತ್ತು ರ‍್ಯಾಂಕ್‌ಗಳನ್ನು ಮುಡಿಗೇರಿಸಿಕೊಂಡ ಹನ್ನೆರಡು ವಿದ್ಯಾರ್ಥಿಗಳು

Picture of RB NEWS

RB NEWS

Bureau Report

ಮೂಡುಬಿದಿರೆ : 2024-25ನೇ ಸಾಲಿನ ಎಸ್‌ಎಸ್‌ಎಸ್ ಸಿ ವಾರ್ಷಿಕ ಪರೀಕ್ಷೆಯಲ್ಲಿಎಕ್ಸಲೆಂಟ್‌ ಆoಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆಯನ್ನು ಮಾಡಿರುತ್ತಾರೆ.

ಸಾನಿಧ್ಯರಾವ್ 624 ಅಂಕಗಳನ್ನು ಗಳಿಸುವುದರೊಂದಿಗೆ ರಾಜ್ಯದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ.

ಒಟ್ಟು 12 ವಿದ್ಯಾರ್ಥಿಗಳು ರಾಜ್ಯದ ಮೊದಲ 10 ರ‍್ಯಾಂಕ್‌ಗಳನ್ನು ಪಡೆದಿರುವುದುಸಂಸ್ಥೆಯ ಸಂಸ್ಕಾರಭರಿತಅತ್ಯುತ್ತಮಗುಣಮಟ್ಟದ ಶೈಕ್ಷಣಿಕ ಸಾಧನೆಗೆ ಕೈಗನ್ನಡಿಯಾಗಿರುತ್ತದೆ.


ಶೇಕಡಾ 100 ಫಲಿತಾಂಶದೊಂದಿಗೆ ಹಾಜರಾದ ಒಟ್ಟು196 ವಿದ್ಯಾರ್ಥಿಗಳಲ್ಲಿ 43 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚಿನ ಅಂಕಗಳು, 107 ವಿದ್ಯಾರ್ಥಿಗಳು ಶೆಕಡಾ 90ಕ್ಕಿಂತ ಹೆಚ್ಚು ಮತ್ತು 142 ವಿದ್ಯಾರ್ಥಿಗಳು ಡಿಸ್ಟಿಂಕ್ಷಣ್ ಪಡೆದಿರುತ್ತಾರೆ.ಕನ್ನಡ–49 ವಿದ್ಯಾರ್ಥಿಗಳು, ಸಂಸ್ಕೃತ -20 ವಿದ್ಯಾರ್ಥಿಗಳು, ಸಮಾಜ ವಿಜ್ಞಾನ–17 ವಿದ್ಯಾರ್ಥಿಗಳು, ಗಣಿತ–15 ವಿದ್ಯಾರ್ಥಿಗಳು, ಹಿಂದಿ-15 ವಿದ್ಯಾರ್ಥಿಗಳು, ವಿಜ್ಞಾನ-5 ವಿದ್ಯಾರ್ಥಿಗಳು ಮತ್ತು ಪ್ರಥಮ ಭಾಷೆಇಂಗ್ಲೀಷ್–2 ವಿದ್ಯಾರ್ಥಿಗಳು ವಿಷಯವಾರು 100ಕ್ಕೆ 100 ಅಂಕಗಳನ್ನು ಪಡೆದು ವಿಶೇಷ ಸಾಧನೆಯನ್ನು ಮಾಡಿರುತ್ತಾರೆ.


ವಿದ್ಯಾರ್ಥಿಗಳ ಅತ್ಯುತ್ತಮ ಫಲಿತಾಂಶಕ್ಕೆ ಸಂಸ್ಥೆಯಅಧ್ಯಕ್ಷರಾದಯುವರಾಜ್‌ಜೈನ್, ಕಾರ್ಯದರ್ಶಿಗಳಾದ ರಶ್ಮಿತಾ ಜೈನ್, ಮುಖ್ಯೊಪಾಧ್ಯಾಯರಾದ ಶಿವಪ್ರಸಾದ್ ಭಟ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

“ಎಕ್ಸಲೆಂಟ್ ಮೂಡುಬಿದಿರೆ ನನ್ನ ಮಗಳಿಗೆ ಅತ್ಯುತ್ತಮ ಶಿಕ್ಷಣವನ್ನು ನೀಡಿರಾಜ್ಯವೇಇಂದುಗುರುತಿಸುವಂತೆ ಮಾಡಿದೆ. ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಶಿಕ್ಷಕ ವೃಂದದವರ ಸತತ ಪ್ರೋತ್ಸಾಹ ಹಾಗೂ ಮಗಳ ಕಠಿಣ ಪರಿಶ್ರಮ ಅವಳ ಸಾಧನೆಗೆಕಾರಣವಾಗಿರುತ್ತದೆ.”–ವಸಂತರಾವ್, ಸಾನಿಧ್ಯಳ ತಂದೆ

“ಎಕ್ಸಲೆಂಟ್ ಶಾಲೆಗೆ ಸೇರಿದ ದಿನದಿಂದಲೂ ನನಗೆ ದೊರಕಿದಉತ್ತಮ ಕಲಿಕಾ ವಾತಾವರಣ ಹಾಗೂ ಅತ್ಯುತ್ತಮ ಶೈಕ್ಷಣಿಕಯೋಜನೆಯಿಂದಾಗಿ ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು.ಇದರೊಂದಿಗೆ ಹೆತ್ತವರು ನೀಡಿದ ಬೆಂಬಲ, ಶಿಕ್ಷಕರ ಅತ್ಯುತ್ತಮ ಕಲಿಕಾ ವಿಧಾನಗಳು ನನ್ನನ್ನುಇಂದು ಈ ಸ್ಥಾನದಲ್ಲಿರಲು ಪ್ರೇರಣೆಯಾಯಿತು. – ಸಾನಿದ್ಯರಾವ್

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top