ದಕ್ಷಿಣ-ಮಧ್ಯ ಕ್ಷೇತ್ರದ ನೂತನ ಸಂಘಚಾಲಕರಾಗಿ ಡಾ. ಪಿ. ವಾಮನ್ ಶೆಣೈ

Picture of RB NEWS

RB NEWS

Bureau Report

ನಾಗ್ಪುರ: ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳನ್ನೊಳಗೊಂಡ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ-ಮಧ್ಯ ಕ್ಷೇತ್ರದ ನೂತನ ಸಂಘಚಾಲಕರಾಗಿ ಡಾ. ಪಿ. ವಾಮನ್ ಶೆಣೈ ಆಯ್ಕೆಯಾಗಿದ್ದಾರೆ.

ಡಾ. ಪಿ. ವಾಮನ ಶೆಣೈಯವರು ಮಂಗಳೂರಿನ ಪ್ರಸಿದ್ಧ ವೈದ್ಯರು, ಮಂಗಳೂರಿನ ಪ್ರತಾಪನಗರದ ಸಂಘಚಾಲಕರಾಗಿ, ಮಂಗಳೂರು ವಿಭಾಗದ ಸಂಘಚಾಲಕರಾಗಿ, ಕರ್ನಾಟಕ ದಕ್ಷಿಣ ಪ್ರಾಂತದ ಸಹಸೇವಾ ಪ್ರಮುಖರಾಗಿ, ಕರ್ನಾಟಕ ದಕ್ಷಿಣ ಪ್ರಾಂತದ ಸಹಸಂಘಚಾಲಕರಾಗಿ ತದನಂತರ 2021ರಿಂದ ಕಳೆದ ಡಿಸೆಂಬರ್ 17, 2023ರ ತನಕ ಕರ್ನಾಟಕ ದಕ್ಷಿಣ ಪ್ರಾಂತದ ಸಂಘಚಾಲಕರಾಗಿ ಜವಾಬ್ದಾರಿಯನ್ನು ನಿರ್ವಹಿಸಿ ನಂತರ ಪ್ರಾಂತ ಕಾರ್ಯಕಾರಿಣಿ ಸದಸ್ಯರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದರು.

ಮಾರ್ಚ್ 15, 2024ರಂದು ನಾಗ್ಪುರದಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭಾ ಬೈಠಕ್ ನಲ್ಲಿ ದಕ್ಷಿಣ ಮಧ್ಯಕ್ಷೇತ್ರೀಯ ಸಂಘಚಾಲಕರಾಗಿ ಆಯ್ಕೆ ಆಗಿದ್ದಾರೆ.

2015 ರಿಂದ ದಕ್ಷಿಣ ಮಧ್ಯಕ್ಷೇತ್ರೀಯ ಸಂಘಚಾಲಕರಾಗಿ ಕಾರ್ಯನಿರ್ವಹಿಸಿದ್ದ ಶ್ರೀ ವಿ. ನಾಗರಾಜ್ ಅವರು ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ನಿಯುಕ್ತರಾಗಿದ್ದಾರೆ‌.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top