ಭಾರತೀಯ ಸಂಗೀತ ಹಾಗೂ ನೃತ್ಯವನ್ನು ಉಳಿಸಿ ಬೆಳೆಸುವುದು ಸನಾತನ ಧರ್ಮದ ಪ್ರತೀಕ
ಉಡುಪಿ: ನಮ್ಮ ಭಾರತೀಯ ಕಲಾ ಸಂಪತ್ತನ್ನು ರಕ್ಷಿಸಿ , ಅದನ್ನು ಕೂಡ ಶ್ರೀ ಕೃಷ್ಣನಿಗೆ ಅರ್ಪಿಸುವುದು ಕೂಡ ಭಗವಂತನ ಸೇವೆಯೇ ಎಂಬುದಾಗಿ ಉಡುಪಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ಬೆಂಗಳೂರಿನ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಲಾವಿದರ ಒಕ್ಕೂಟದ ವತಿಯಿಂದ ಶ್ರಿ ಕೃಷ್ಣ ಮಠದಲ್ಲಿ ನಡೆಸಲ್ಪಡುವ ಸರಣಿ ಸಾಂಸ್ಕೃತಿಕ ಕಾರ್ಯಕ್ರಮವನ್ನ ಉದ್ಘಾಟಿಸಿ ಅವರು ಆಶೀರ್ಚಚನ ನೀಡಿದರು.
ಒಕ್ಕೂಟದ ರಾಜ್ಯ ಅಧ್ಯಕ್ಷ ಸಾಯಿ ನಾರಾಯಣ ಪ್ರಾಸ್ತಾವಿಕವಾಗಿ ಮಾತಾಡಿದರು.ಕಾರ್ಯಕ್ರಮದ ಸಂಚಾಲಕ ರಮೇಶ್ ಭಟ್ ಸ್ವಾಗತಿಸಿ, ಧನ್ಯವಾದವಿತ್ತರು.
ವೀಪಂಚಿ ವಿದುಷಿ ಪವನ ಬಿ ಆಚಾರ್ಯ ಮತ್ತು ತಂಡದ ಮೂಲಕ ಪಂಚ ವೀಣಾ ವಾದ್ಯ ನುಡಿಸಿದರು






































