[t4b-ticker]

ಅರುಣ್ ಪುತ್ತಿಲ ನೇತೃತ್ವದಲ್ಲಿ ಪರಿವಾರ ಬಿಜೆಪಿ ಜೊತೆ ವಿಲೀನ?!

Picture of RB NEWS

RB NEWS

Bureau Report

ಬೆಂಗಳೂರು : ರಾಜ್ಯ, ರಾಷ್ಟ್ರಮಟ್ಟದಲ್ಲಿ ಸುದ್ದಿಗ್ರಾಸ್ತವನ್ನುಂಟು ಮಾಡಿದ ಪುತ್ತೂರು ಬಿಜೆಪಿ ಬಂಡಾಯ ಯಾ ಪುತ್ತಿಲ ಪರಿವಾರದ. ರಾಜಕೀಯ ಕಾವು ಮುಂಬರುವ ಲೋಕಾಸಭಾ ಚುನಾವಣೆ ಸನ್ನಿಹಿತ ಕಾಲಘಟ್ಟದಲ್ಲಿ ಶಮನವಾಗುತ್ತಿದೆ.

ಇದಕ್ಕೆ ಇಂಬು ನೀಡಿರುವಂತೆ ಛಲದಂಕಮಲ್ಲ ಅರುಣ್ ಪುತ್ತಿಲ ಅವರಿಗೆ ಬಿಜೆಪಿ ಪಕ್ಷಕ್ಕೆ ಎಂಟ್ರಿಯಾಗಲು ರತ್ನಗಂಬಳಿ ಹಾಸಿದ ಬೆಳವಣಿಯೂ ನಡೆದಿದೆ.

ಬಿಜೆಪಿ ಮುಖಂಡರುಗಳ ನಡುವೆ ನಡೆದ ಮಾತುಕತೆ ಫಲದಾಯಕವಾಗಿದೆ. ಇತ್ತಂಡದಲ್ಲಿ ಒಮ್ಮತ ನಿರ್ಧಾರ ಕಂಡು ಬಂದಿದ್ದು ಸಭೆಯಲ್ಲಿ ಉಪಸ್ಥಿತರಿದ್ದವರ ಮುಖದಲ್ಲಿ ಮಂದಹಾಸ ಬೀರಿದೆ. ಪುತ್ತೂರು ವಿಧಾನ ಸಭೆಯಲ್ಲಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಲು ಕಾರಣವಾಗಿದ್ದ ಪುತ್ತಿಲ ಪರಿವಾರವು ತಮ್ಮ ಬೇಡಿಕೆಯ ಪಟ್ಟಿಯನ್ನೇ ಬಿಜೆಪಿಯ ಮುಂದಿಟ್ಟು ಬಿಜೆಪಿ ಮುಖಂಡರಿಗೆ ಅಂಕುಶ ಹಾಕುವ ಎಲ್ಲಾ ಪ್ರಯತ್ನ ನಡೆಸಿದ್ದರು.

ಪುತ್ತೂರಿನಲ್ಲಿ ಮಾತ್ರ ಇದ್ದ ಪುತ್ತಿಲ ಪರಿವಾರವು ಮಂಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿತ್ತಲ್ಲದೇ ಕಾರ್ಯ ಚಟುವಟಿಕೆ ತೀವ್ರಗೊಳಿಸಲಾಗಿತ್ತು. ಇದು ಬಿಜೆಪಿ ಪಾಲಿಗೆ ಬಿಸಿತುಪ್ಪವಾಗಿಯೂ ಮಾರ್ಪಟ್ಟಿತ್ತು.


ಈ ಎಲ್ಲಾ ಬೆಳವಣಿಗೆಯ ಬಳಿಕ ಬಿಜೆಪಿಯಲ್ಲೂ ಒಂದಿಷ್ಟು ಬದಲಾವಣೆ ಕಂಡುಬಂದಿದ್ದು, ಪ್ರಸ್ತುತ ನಡೆದಿರುವ ಮಾತುಕತೆಯ ಬೆಳವಣಿಗೆಯಿಂದಾಗಿ ಪುತ್ತಿಲ ಪರಿವಾರ ಸಮೂಹವು ಬಿಜೆಪಿಯೊಂದಿಗೆ ವಿಲೀನವಾಗುವ ಮೂಲಕ ಬಿಜೆಪಿಗೆ ಮೊದಲ ಹೆಜ್ಜೆಯಲ್ಲಿ ಬಹುದೊಡ್ಡ ಜಯ ದೊರಕಿದಂತಾಗಿದೆ ಎಂದರು ತಪ್ಪಲ್ಲ.

ಲೋಕಸಭಾ ಚುನಾವಣೆಯ ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿಯಾಗಿ ಕ್ಯಾ. ಬ್ರಿಜೇಶ್ ಚೌಟ ಅವರ ಹೆಸರು ಅಂತಿಮ ಗೊಳಿಸಲಾಗಿದೆ. ಇದು ಒಂದು ರೀತಿಯಲ್ಲಿ ಪುತ್ತಿಲ ಪರಿವಾರಕ್ಕೂ ಖುಷಿ ತಂದಿದೆ.

ಗುರುವಾರ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಹಾಗೂ ಪುತ್ತೂರು ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್‌ ರಾವ್ ಅವರು ಅರುಣ್ ಕುಮಾ‌ರ್ ಪುತ್ತಿಲ ಅವರನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಬಹುತೇಕ ಅರುಣ್ ಪುತ್ತಿಲ ಮತ್ತೇ ಬಿಜೆಪಿಗೆ ಸೇರ್ಪಡೆಗೊಂಡ ರೀತಿ ಸಕಾರಗೊಂಡಿದೆ.

ಲೋಕಸಭಾ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕರಾಗಿತುವ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಉಪಸ್ಥಿತರಿದ ಬೆಳವಣಿಗೆ ಗಮನಾರ್ಹವಾಗಿದೆ.

ಈ ಕುರಿತು ಅರುಣ್ ಪುತ್ತಿಲ ನಾಮಾಂಕಿತ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಬಿಡುಗಡೆಗೊಂಡಿದ್ದು, ಹೂಗುಚ್ಚ ಸ್ವೀಕರಿಸುವ ದೃಶ್ಯ ಮಾತ್ರ ಇದೆ.

ಪಕ್ಷದಲ್ಲಿ ಪ್ರಮುಖ ಹುದ್ದೆ ಅರುಣ್ ಪುತ್ತಿಲ ಅವರ ಪಾಲಿಗೆ ದೊರಕುವುದು ಬಹುತೇಕ ಖಚಿತಗೊಂಡಿದೆ.‌

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top