ವಾರ ಭವಿಷ್ಯ ದಿನಾಂಕ 03.11.2024 ರಿಂದ 09.11.2024 ರ ವರೆಗೆ

Picture of RB NEWS

RB NEWS

Bureau Report

ವೃಷಭ : ಅನೇಕ ಅಭಿವೃದ್ಧಿಕರ ಬದಲಾವಣೆಗಳು ಎಲ್ಲಾ ರೀತಿಯಿಂದಲೂ ಕಾಣಲಿದ್ದೀರಿ .ಕುಜ ,ರಾಹು ,ರವಿ ನಿಮ್ಮನ್ನುಉನ್ನತ ಮಟ್ಟಕ್ಕೆ ಒಯ್ಯಲಿದ್ದಾರೆ ರಾಜಕೀಯದಲ್ಲಿ ಇರುವವರು ಉನ್ನತ ಸ್ಥಾನಮಾನ ಪಡೆಯಲಿದ್ದಾರೆ. ನಿಮ್ಮ ವ್ಯವಹಾರದಲ್ಲಿ ಹೊಸ ತ್ಂತ್ರಗಳನ್ನು ಅಳವಡಿಸುವ ಯೋಜನೆಗಳನ್ನು ಹಾಕಿ ಕೊಳ್ಳುವಿರಿ. ಸಾಂಸಾರಿಕವಾಗಿ ಇರುವ ವಾದ ವಿವಾದಗಳು ಕೊನೆಗೊಳ್ಳುವ ಹಂತಕ್ಕೆ ಬರಲಿವೆ.  ಸರಕಾರಕ್ಕೆ ಸಂಬಂಧಿಸಿದ ಕೆಲಸಗಳು ಅತೀ ಸುಲಭವಾಗಿ ನಡೆಯಲಿದೆ. ಉದ್ಯೋಗದಲ್ಲಿ ಇರುವವರಿಗೆ ಬಡ್ತಿ ಸಿಗಲಿದೆ.  ಹಿರಿಯರನ್ನು ಗೌರವಿಸಲು ಮರೆಯಬೇಡಿರಿ. ಸಂಗಾತಿಯೊಂದಿಗೆ ಶುಕ್ರ ಭಿನ್ನಾಭಿಪ್ರಾಯವನ್ನು ಕೆಲವೊಮ್ಮೆ ತರುವ ದಾಧ್ಯತೆ ಇದೆ. ಎಚ್ಚರವಿರಲಿ.

ಕರ್ಕಾಟಕ : ಪೂರ್ಣ ಪ್ರಮಾಣದ ದೈವಾನುಗ್ರಹ ಇದ್ದರೂ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ .ಜನ್ಮ ರಾಶಿಯಲ್ಲಿ ನೀಚ ಕುಜನಿದ್ದು ಅಷ್ಟಮದಲ್ಲಿ ಶನಿ ಇರುವುದರಿಂದ ಮತ್ತು ಸುಖ ಸ್ಥಾನದಲ್ಲಿ ರವಿ ನೀಚನಾಗಿ ಇರುವುದರಿಂದ ನೀವು ನಿರೀಕ್ಷೆ ಮಾಡಿದಂತೆ ಯಾವುದೇ ಕೆಲಸಗಳು ನಡೆಯದೆ ಕಷ್ಟ ನಷ್ಟಗಳು ನಡೆಯುವ ಸಾಧ್ಯತೆ ಇದೆ. ವಿಷ್ಣ ಸಹಸ್ರ ನಾಮ ಪಾರಾಯಣ ಮಾಡುವುದು ಅತೀ ಅಗತ್ಯವಾಗಿದೆ. ಜವಾಬ್ದಾರಿ ಹೆಚ್ಚಾಗಲಿದೆ ಶತ್ರುಗಳೂ ಸಮಸ್ಯೆಗಳನ್ನು ಮಾಡಲು ಪ್ರಯತ್ನಿಸಿದರೂ ಗುರುವಿನ ಅನುಗ್ರಹದಿಂದ ಪಾರಾಗಿ ಬರುವಿರಿ. ಸಹೋದರರ ಜೊತೆಗೆ ,ಸಂಗಾತಿಯ ಜೊತೆಗೆ ಕಲಹ ಬರದಂತೆ ಎಚ್ಚರವಹಿಸಿರಿ.

ವೃಶ್ಚಿಕ : ಭಾಧಕ ಸ್ಥಾನದಲ್ಲಿ ನೀಚ ಕುಜನು ಇರುವುದರಿಂದ ಹಿರಿಯರ ಪಿತ್ರಾರ್ಜಿತ ಆಸ್ತಿಯ ವಿಷಯ ,ಅವರ ಆರೋಗ್ಯದ ವಿಷಯದಲ್ಲಿ ಚಿಂತನೆ ಮಾಡುವ ಸಮಯವಾಗಿದೆ.  ಗುರು ಸಪ್ತಮದಲ್ಲಿ ಇರುವುದರಿಂದ ಶುಕ್ರ ಮತ್ತು ಬುಧ ಜನ್ಮ ರಾಶಿಯಲ್ಲಿ ಇರುವುದರಿಂದ ಮಹಿಳೆಯರ ವಿಷಯದಲ್ಲಿ ಎಚ್ಚರವಿರಬೇಕು. ದಾಂಪತ್ಯದಲ್ಲಿ ಕಲಹ ಸಂಶಯ ಇರುತ್ತದೆ. ಆದಾಯವನ್ನು ಗಳಿಸುವ ದಾರಿಗಳನ್ನು ಶನಿ ಸುಖ ಸ್ಥಾನದಲ್ಲಿ ಇದ್ದುಕೊಂಡು ಕಸಿದು ಕೊಳ್ಳಲಿದ್ದಾನೆ .2025, ಮಾರ್ಚ್ 29 ರ ವರೆಗೆ ಈ ರೀತಿ ಇರುತ್ತದೆ.  ನಿರ್ಮಾಣ ಹಂತದಲ್ಲಿ ಇರುವ ನಿಮ್ಮ ಮನೆ ಒಮ್ಮೆ ಸ್ಥಗಿತ ಗೊಳ್ಳುವ ಸಾಧ್ಯತೆ ಇದೆ.  ವಾಹನ ಚಾಲನೆಯಲ್ಲಿಎಚ್ಚರ ವಹಿಸಿರಿ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ. 

ಮಕರ : ಪಂಚಮದಲ್ಲಿ ಗುರು ಇದ್ದಾನೆ. ದೈವಾನುಗ್ರಹ ನಿಮಗಿರುತ್ತದೆ. ದ್ವಿತೀಯಾದಲ್ಲಿ ಶನಿ ವ್ಯರ್ಥ ವಾಕ್ ಸಮರವನ್ನು ವ್ಯರ್ಥ ಖರ್ಚಾನ್ನು ತರುವವನಾಗಿರುವುದರಿಂದ ವಿಷ್ಣು ಸಹಸ್ರ ನಾಮ ಪಾರಾಯಣ ಮಾಡುತ್ತಾ ಬರಬೇಕು. ಕುಜ ಸಪ್ತಮದಲ್ಲಿ ಇರುವುದರಿಂದ ಸಂಗಾತಿಯ ಕಡೆಗೆ ನಿಮ್ಮ ಗಮನ ಕಡಿಮೆಯಾಗಲಿದೆ. ದುರ್ಗಾ ಪಾರಾಯಣ ಮಾಡುವುದು /ಮಾಡಿಸುವುದು ಅಗತ್ಯವಿದೆ .ಶುಕ್ರ ಬುಧ ವ್ಯಯದಲ್ಲಿ ಇದ್ದಾರೆ. ಹಿರಿಯರಿಗೆ ನಿಶ್ಯಕ್ತಿ ಬಾಧೆ ಬರಲಿದೆ ಬಿ‌ಪಿ ಷುಗರ್ ಪರೀಕ್ಷೆ ಮಾಡಿಸುವುದು ಅಗತ್ಯವಿದೆ. ಸರಕಾರಿ ನೌಕರರಿಗೆ , ನೌಕರರಿಗೆ ಉತ್ತಮ ಸಮಯವಾಗಿದ್ದು ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ .

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top