



ವಾರ ಭವಿಷ್ಯ ದಿನಾಂಕ 03.11.2024 ರಿಂದ 09.11.2024 ರ ವರೆಗೆ
ವಿಶೇಷ ದಿನಗಳು :06.11.2024…ಧನು ರಾಶಿಗೆ ಶುಕ್ರನ ಪ್ರವೇಶ
ಮೇಷ : ರಾಶ್ಯಾಧಿಪತಿ ಕುಜ ಅಷ್ಟಮಾಧಿಪತಿಯಾಗಿ ಕುಜ ನೀಚನಾಗಿ ಕರ್ಕಾಟಕ ರಾಶಿಯಲ್ಲಿ ಇರುವುದು ಕೆಲವೊಂದು ಎಚ್ಚರಿಕೆಯನ್ನುನೀಡುತ್ತಿದೆ. ವಾಹನ ಚಲಾವಣೆಯಲ್ಲಿ ಎಚ್ಚರವಿರಲಿ. ಆರೋಗ್ಯದಲ್ಲಿ ಎಚ್ಚರವಿರಲಿ. ತಾಯಿಯವರಲ್ಲಿ ಅಸಮಾಧಾನ ಮಾಡಿಕೊಂಡಿದ್ದರೆ, ಸಮಾಧಾನ ಮಾಡಿಕೊಳ್ಳಿರಿ..ಬೇರೆಯವರ ಮಾತನ್ನು ನೇರವಾಗಿ ನಂಬಲು ಹೋಗುವುದು ಸರಿಯಲ್ಲ. ಅಷ್ಟಮದಲ್ಲಿ ಶುಕ್ರ ,ಬುಧ ಜೊತೆಯಾಗಿ ಇದ್ದಾರೆ. ಲಕ್ಷ್ಮೀ ನಾರಾಯಣ ಯೋಗ ,ದ್ವಿತೀಯದ ಗುರು ಲಾಭ ಕ್ಷೇತ್ರದಲ್ಲಿ ಶನಿ, ನಿಮ್ಮ ಆರ್ಥಿಕ ಬೆಳವಣಿಗೆಯನ್ನು ಉತ್ತಮಗೊಳಿಸಲಿದ್ದಾರೆ ದೂರದ ಊರಿಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ಬೆಲೆ ಬಾಳುವ ವಸ್ತುಗಳನ್ನು ಖರೀಧಿ ಮಾಡುವಿರಿ. ಶ್ರೀ ದೇವಿ ಖಡ್ಗಮಾಲಾ ಸ್ತೋತ್ರವನ್ನು ಪಾರಾಯಣ ಮಾಡಿರಿ.
ವೃಷಭ : ಅನೇಕ ಅಭಿವೃದ್ಧಿಕರ ಬದಲಾವಣೆಗಳು ಎಲ್ಲಾ ರೀತಿಯಿಂದಲೂ ಕಾಣಲಿದ್ದೀರಿ .ಕುಜ ,ರಾಹು ,ರವಿ ನಿಮ್ಮನ್ನುಉನ್ನತ ಮಟ್ಟಕ್ಕೆ ಒಯ್ಯಲಿದ್ದಾರೆ ರಾಜಕೀಯದಲ್ಲಿ ಇರುವವರು ಉನ್ನತ ಸ್ಥಾನಮಾನ ಪಡೆಯಲಿದ್ದಾರೆ. ನಿಮ್ಮ ವ್ಯವಹಾರದಲ್ಲಿ ಹೊಸ ತ್ಂತ್ರಗಳನ್ನು ಅಳವಡಿಸುವ ಯೋಜನೆಗಳನ್ನು ಹಾಕಿ ಕೊಳ್ಳುವಿರಿ. ಸಾಂಸಾರಿಕವಾಗಿ ಇರುವ ವಾದ ವಿವಾದಗಳು ಕೊನೆಗೊಳ್ಳುವ ಹಂತಕ್ಕೆ ಬರಲಿವೆ. ಸರಕಾರಕ್ಕೆ ಸಂಬಂಧಿಸಿದ ಕೆಲಸಗಳು ಅತೀ ಸುಲಭವಾಗಿ ನಡೆಯಲಿದೆ. ಉದ್ಯೋಗದಲ್ಲಿ ಇರುವವರಿಗೆ ಬಡ್ತಿ ಸಿಗಲಿದೆ. ಹಿರಿಯರನ್ನು ಗೌರವಿಸಲು ಮರೆಯಬೇಡಿರಿ. ಸಂಗಾತಿಯೊಂದಿಗೆ ಶುಕ್ರ ಭಿನ್ನಾಭಿಪ್ರಾಯವನ್ನು ಕೆಲವೊಮ್ಮೆ ತರುವ ದಾಧ್ಯತೆ ಇದೆ. ಎಚ್ಚರವಿರಲಿ.
ಮಿಥುನ : ದೈವಾನುಗ್ರಹದ ಕೊರತೆ, ಉದ್ಯೋಗ ವ್ಯವಹಾರದಲ್ಲಿವಿಳಂಬ ಗತಿ , ಆಸ್ತಿ ವಿವಾದಗಳೂ ಬರಲಿವೆ. ಪಂಚಮದ ರವಿಯಿಂದಾಗಿ ಮಕ್ಕಳ ವಿಷಯದಲ್ಲಿ ಕಿರಿಕಿರಿಯಾಗುವ ಸಂಭವ ಇರುತ್ತದೆ. ನಶೆಯ ಪದಾರ್ಥಗಳಿಂದ ದೂರವಿರುವುದು ಒಳ್ಳೆಯದು. ಕುಜ ದ್ವಿತೀಯಾದಲ್ಲಿ ನೀಚನಾಗಿ ಇರುವುದರಿಂದ ಮಾತಿನಲ್ಲಿ ಎಚ್ಚರವಿರಲಿ. ವಿದ್ಯಾರ್ಥಿಗಳು ಎಚ್ಚರವಾಗಿರಬೇಕು. ಸಿಟ್ಟು ನಿಮ್ಮ ಹಿಡಿತದಲ್ಲಿ ಇರಲಿ.ಸಂಗಾತಿಯೊಂದಿಗೆ ಹೊಂದಿಕೊಂಡು ಮುಂದುವರಿಯಿರಿ. ದೂರದ ಪ್ರಯಾಣ ಸದ್ಯಕ್ಕೆ ಬೇಡ. ವಾಹನಗಳಿಗಾಗಿ ಖರ್ಚು ಬರುವ ಸಾಧ್ಯತೆ. ಹಿತ ಶತ್ರುಗಳ ಭಾಧೆ ಕಾಟ ಇದ್ದರೂ ಧೈರ್ಯದಿಂದ ಮುನ್ನೆಡೆಯಿರಿ. ಉದ್ಯೋಗದಲ್ಲಿ ಇರುವ ನೌಕರರಿಗೆ ಕಿರಿಕಿರಿ ಇರುತ್ತದೆ.
ಕರ್ಕಾಟಕ : ಪೂರ್ಣ ಪ್ರಮಾಣದ ದೈವಾನುಗ್ರಹ ಇದ್ದರೂ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ .ಜನ್ಮ ರಾಶಿಯಲ್ಲಿ ನೀಚ ಕುಜನಿದ್ದು ಅಷ್ಟಮದಲ್ಲಿ ಶನಿ ಇರುವುದರಿಂದ ಮತ್ತು ಸುಖ ಸ್ಥಾನದಲ್ಲಿ ರವಿ ನೀಚನಾಗಿ ಇರುವುದರಿಂದ ನೀವು ನಿರೀಕ್ಷೆ ಮಾಡಿದಂತೆ ಯಾವುದೇ ಕೆಲಸಗಳು ನಡೆಯದೆ ಕಷ್ಟ ನಷ್ಟಗಳು ನಡೆಯುವ ಸಾಧ್ಯತೆ ಇದೆ. ವಿಷ್ಣ ಸಹಸ್ರ ನಾಮ ಪಾರಾಯಣ ಮಾಡುವುದು ಅತೀ ಅಗತ್ಯವಾಗಿದೆ. ಜವಾಬ್ದಾರಿ ಹೆಚ್ಚಾಗಲಿದೆ ಶತ್ರುಗಳೂ ಸಮಸ್ಯೆಗಳನ್ನು ಮಾಡಲು ಪ್ರಯತ್ನಿಸಿದರೂ ಗುರುವಿನ ಅನುಗ್ರಹದಿಂದ ಪಾರಾಗಿ ಬರುವಿರಿ. ಸಹೋದರರ ಜೊತೆಗೆ ,ಸಂಗಾತಿಯ ಜೊತೆಗೆ ಕಲಹ ಬರದಂತೆ ಎಚ್ಚರವಹಿಸಿರಿ.
ಸಿಂಹ : ವ್ಯಯದಲ್ಲಿ ಕುಜನಿದ್ದಾನೆ.ನಿಮ್ಮಲ್ಲಿರುವ ಆತ್ಮ ವಿಶ್ವಾಸದಿಂದ ನೀವು ಮಾಡುವ ಕೆಲಸಗಳಲ್ಲಿ ಯಶಸ್ಸು ಗಳಿಸುವಿರಿ. ಭೂಮಿಯ ವ್ಯವಹಾರ ಮಾಡುವವರು ಎಚ್ಚರವಹಿಸಿರಿ. ಸುಖ ಸ್ಥಾನದಲ್ಲಿ ಶುಕ್ರ ಮತ್ತು ಬುಧ ಇರುವುದರಿಂದ ಲಕ್ಷ್ಮೀ ನಾರಾಯಣ ಯೋಗ ವಿರುವುದರಿಂದ ಮನಸ್ಸಿನ ಆಸೆಗಳು ಈಡೇರಲಿವೆ. ಬೆಲೆ ಬಾಳುವ ವಸ್ತುಗಳನ್ನು ಖರೀಧಿ ಮಾಡುವಿರಿ. ಉದ್ಯೋಗದಲ್ಲಿ ಇರುವವರಿಗೆ ಮೇಲಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ನ್ಯಾಯಾಲಯದಲ್ಲಿ ಇರುವ ಯಾವುದೇ ವಿವಾದಗಳು ಪರಿಹಾರವಾಗುವ ಹಂತಕ್ಕೆ ಬರಲಿವೆ. ಕಂಕಣ ಭಾಗ್ಯ ಕೂಡಿ ಬಂದರೂ ಅಡೆತಡೆ ಬಂದು ಮುಂದಕ್ಕೆ ಹೋಗಲಿದೆ. ದುರ್ಗೆಯ ಮತ್ತು ನಾಗ ದೇವರ ಆರಾಧನೆ ಅಗತ್ಯವಿದೆ.
ಕನ್ಯಾ :ಕುಜ ಲಾಭ ಕ್ಷೇತ್ರದಲ್ಲಿ ಇದ್ದಾನೆ. ಗುರು ಭಾಗ್ಯದಲ್ಲಿ ಇದ್ದಾನೆ ಶನಿ ಆರನೆಯ ಮನೆಯಲ್ಲಿ ಇದ್ದಾನೆ. ಮನಸ್ಸಿಗೆ ನೆಮ್ಮದಿ ದೊರೆತು ಹಲವಾರು ಕೆಲಸಗಳು ನಿಮ್ಮ ವ್ಯವಹಾರಗಳು ಯಶಸ್ವಿಯಾಗಲಿವೆ. ಧಾರ್ಮಿಕ ,ಮಂಗಳ ಕೆಲಸಗಳು ನಡೆಯಲಿವೆ ಕಂಕಣ ಭಾಗ್ಯ ಕೂಡಿ ಬರಲಿವೆ. ದಾಂಪತ್ಯದಲ್ಲಿ ವಿರಸ ಬರದಂತೆ ಎಚ್ಚರ ವಹಿಸಿರಿ. ಆಡಿದ ಮಾತು ಉಳಿಸಿಕೊಳ್ಳಲು ಕಷ್ಟ ಪಡುವಿರಿ. ನಿಮ್ಮಲ್ಲಿ ಎಷ್ಟೇ ಹಣವಿದ್ದರೂ ಸಮಯಕ್ಕೆ ಸರಿಯಾಗಿ ಒದಗಿ ಬರುವುದಿಲ್ಲ. ಉದ್ವೇಗ ಕ್ರೋಧ ನಿಮಗೂ ನಿಮ್ಮ ಸಹೋದರ ವರ್ಗಕ್ಕೂ ಶೀತಲ ಯುದ್ಧ ನಡೆಯುತ್ತಿರುವ ಸಮಯ .ಸರ್ಕಾರಿ ನೌಕರರು ಬಡ್ತಿ ಹೊಂದುವರು. ರಾಜಕೀಯದಲ್ಲಿ ಇರುವವರು ಉನ್ನತ ಹುದ್ದೆಯನ್ನು ಅಲಂಕರಿಸುವ ಸಮಯವಾಗಿದೆ.
ತುಲಾ : ಜನ್ಮ ರಾಶಿಯಲ್ಲಿ ನೀಚ ರವಿ ,ಅಷ್ಟಮದಲ್ಲಿ ಗುರು , ಪಂಚಮದಲ್ಲಿ ಶನಿ ,ಇವರಿಗೆ ಪರಿಹಾರವಾಗಿ “ಓಂ ಶ್ರೀಂ ನಮ: ಶಿವಾಯ: “ ಪ್ರತಿ ನಿತ್ಯ 108 ಬಾರಿ ಪಾರಾಯಣ ಮಾಡುತ್ತಾ ಬರಬೇಕು. ಆರೋಗ್ಯದ ಕಡೆಗೆ ನಿಮ್ಮ ಗಮನ ಇರಲಿ. ವೈದ್ಯರ ಬಳಿಗೆ ಹೋಗಬೇಕೆಂದು ಅನ್ನಿಸಿದರೆ ಉದಾಸೀನ ಮಾಡಬೇಡಿರಿ. ಕುಟುಂಬದ ಹಿರಿಯರ ಬಗ್ಗೆ ಕಾಳಜಿ ವಹಿಸಿರಿ.ಕಲೆಯ ಮಾಧ್ಯಮದಲ್ಲಿ ಇರುವವರಿಗೆ ಬಹಳ ಉತ್ತಮ ಸಮಯ. ತೀರ್ಥ ಕ್ಷೇತ್ರ ದರ್ಶನ ಮಾಡುವ ಅವಶ್ಯಕತೆ ಇದೆ .ಕೆಲವು ಕಪಟಿಗಳು ನಿಮ್ಮದಾರಿ ತಪ್ಪಿಸುವರು ಅನೇಕ ಕಪಟಿಗಳು ಇದ್ದಾರೆ .ಧನ್ವಂತರಿ ಮಂತ್ರ ನಿಮಗೆ ಅವಶ್ಯವಾಗಿದೆ .
ವೃಶ್ಚಿಕ : ಭಾಧಕ ಸ್ಥಾನದಲ್ಲಿ ನೀಚ ಕುಜನು ಇರುವುದರಿಂದ ಹಿರಿಯರ ಪಿತ್ರಾರ್ಜಿತ ಆಸ್ತಿಯ ವಿಷಯ ,ಅವರ ಆರೋಗ್ಯದ ವಿಷಯದಲ್ಲಿ ಚಿಂತನೆ ಮಾಡುವ ಸಮಯವಾಗಿದೆ. ಗುರು ಸಪ್ತಮದಲ್ಲಿ ಇರುವುದರಿಂದ ಶುಕ್ರ ಮತ್ತು ಬುಧ ಜನ್ಮ ರಾಶಿಯಲ್ಲಿ ಇರುವುದರಿಂದ ಮಹಿಳೆಯರ ವಿಷಯದಲ್ಲಿ ಎಚ್ಚರವಿರಬೇಕು. ದಾಂಪತ್ಯದಲ್ಲಿ ಕಲಹ ಸಂಶಯ ಇರುತ್ತದೆ. ಆದಾಯವನ್ನು ಗಳಿಸುವ ದಾರಿಗಳನ್ನು ಶನಿ ಸುಖ ಸ್ಥಾನದಲ್ಲಿ ಇದ್ದುಕೊಂಡು ಕಸಿದು ಕೊಳ್ಳಲಿದ್ದಾನೆ .2025, ಮಾರ್ಚ್ 29 ರ ವರೆಗೆ ಈ ರೀತಿ ಇರುತ್ತದೆ. ನಿರ್ಮಾಣ ಹಂತದಲ್ಲಿ ಇರುವ ನಿಮ್ಮ ಮನೆ ಒಮ್ಮೆ ಸ್ಥಗಿತ ಗೊಳ್ಳುವ ಸಾಧ್ಯತೆ ಇದೆ. ವಾಹನ ಚಾಲನೆಯಲ್ಲಿಎಚ್ಚರ ವಹಿಸಿರಿ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.
ಧನು : ದೈವಾನುಗ್ರಹದ ಕೊರತೆಯ ಪರಿಹಾರಕ್ಕಾಗಿ ವಿಷ್ಣು ಸಹಸ್ರನಾಮ ಪಾರಾಯಣವನ್ನು ನಿತ್ಯವೂ ಮಾಡುತ್ತಾ ಬನ್ನಿರಿ. ಸುಖ ಸ್ಥಾನದ ರಾಹುವಿಗೆ ಪರಿಹಾರವಾಗಿ ನಾಗ ದೇವರನ್ನು ಯಥಾ ಶಕ್ತಿ ಆರಾಧಿಸಿಕೊಂಡು ಬನ್ನಿರಿ. ನಿಮ್ಮ ಆರೋಗ್ಯದ ಕಡೆಗೆ ಗಮನವಿರಲಿ. ನಿಮ್ಮವರೇ ನಿಮಗೆ ಶತ್ರುಗಳ ಹಾಗೆ ವರ್ತಿಸುವರು. ಕೆಲವೊಮ್ಮೆ ಬೇಡದ ವಿಚಾರಗಳಿಗೆ ಕುಟುಂಬದಲ್ಲಿ ಕಲಹವುಂಟಾಗಿ ಮನಸ್ಸಿಗೆ ಕಿರಿಕಿರಿ ಉಂಟಾಗಲಿದೆ. ಮಂಬೆಯ ದುರಸ್ತಿ ಅಥವಾ ನವೀಕರಣಕ್ಕಾಗಿ ಖರ್ಚು ಬರಲಿದೆ. ನಿಮ್ಮ ರಹಸ್ಯವನ್ನು ಯಾರಲ್ಲಿಯೂ ಹೇಳಿಕೊಳ್ಳಬೇಡಿರಿ. ಬರುವ ಆದಾಯದಲ್ಲಿ ತೊಂದರೆ ಇರುವುದಿಲ್ಲ. ಕುಜ ಅಷ್ಟಮದಲ್ಲಿ ಇದ್ದಾನೆ .ಮೃತ್ಯುಂಜಯ ಜಪ ಮಾಡುವ ಅಗತ್ಯವಿದೆ.
ಮಕರ : ಪಂಚಮದಲ್ಲಿ ಗುರು ಇದ್ದಾನೆ. ದೈವಾನುಗ್ರಹ ನಿಮಗಿರುತ್ತದೆ. ದ್ವಿತೀಯಾದಲ್ಲಿ ಶನಿ ವ್ಯರ್ಥ ವಾಕ್ ಸಮರವನ್ನು ವ್ಯರ್ಥ ಖರ್ಚಾನ್ನು ತರುವವನಾಗಿರುವುದರಿಂದ ವಿಷ್ಣು ಸಹಸ್ರ ನಾಮ ಪಾರಾಯಣ ಮಾಡುತ್ತಾ ಬರಬೇಕು. ಕುಜ ಸಪ್ತಮದಲ್ಲಿ ಇರುವುದರಿಂದ ಸಂಗಾತಿಯ ಕಡೆಗೆ ನಿಮ್ಮ ಗಮನ ಕಡಿಮೆಯಾಗಲಿದೆ. ದುರ್ಗಾ ಪಾರಾಯಣ ಮಾಡುವುದು /ಮಾಡಿಸುವುದು ಅಗತ್ಯವಿದೆ .ಶುಕ್ರ ಬುಧ ವ್ಯಯದಲ್ಲಿ ಇದ್ದಾರೆ. ಹಿರಿಯರಿಗೆ ನಿಶ್ಯಕ್ತಿ ಬಾಧೆ ಬರಲಿದೆ ಬಿಪಿ ಷುಗರ್ ಪರೀಕ್ಷೆ ಮಾಡಿಸುವುದು ಅಗತ್ಯವಿದೆ. ಸರಕಾರಿ ನೌಕರರಿಗೆ , ನೌಕರರಿಗೆ ಉತ್ತಮ ಸಮಯವಾಗಿದ್ದು ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ .
ಕುಂಭ : ಜನ್ಮ ರಾಶಿಯಲ್ಲಿ ನಿಮಗೆ ಶನಿ ಇದ್ದು ಪ್ರತಿನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಅಗತ್ಯವಿದೆ. ನಿಮ್ಮ ಕ್ರೋಧ ಸಹಿತ ಮಾತು ಬದಲಾವಣೆ ಆಗಬೇಕು ಸಹೋದರ ವರ್ಗದವರಲ್ಲಿ ಕಲಹ ಬರುವ ಸಾಧ್ಯತೆ ಇದೆ .ನಿಧಾನವಾಗಿ ನಿಮ್ಮ ಜೀವನ ಸರಿಯಾದ ಪ್ರಗತಿ ಪಥಕ್ಕೆ ಬರಲಿದೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ನಿಮ್ಮ ಪ್ರತಿಷ್ಟೆಯಲ್ಲಿ ಹೆಚ್ಚಳವಾಗಲಿದೆ .ನೀವು ನಿವೃತ್ತಿ ಹೊಂದಿದವರಾಗಿದ್ದರೆ ಯಾವುದಾದರೂ ಹೊಸ ಉದ್ಯೋಗದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುವಿರಿ. ಹಿರಿಯರ ಜೊತೆಗೆ ಪ್ರೀತಿಯ ಮಾತುಗಳನ್ನಾಡಿರಿ ಎಂದು ನೀಚನಾಗಿರುವ ರವಿ ಸೂಚನೆ ಕೊಡುತ್ತಿದ್ದಾನೆ.
ಮೀನ : ರಾಹು ಜನ್ಮ ರಾಶಿಯಲ್ಲಿ ಇರುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಯಥಾ ಶಕ್ತಿ ನಾಗದೇವರ ಆರಾಧನೆ ಅಗತ್ಯವಾಗಿದೆ. ದೈವಾನುಗ್ರಹ ಇರುವುದಿಲ್ಲ. ಸಾಡೇ ಸಾತ್ ಶನಿಯ ಕಾಟವೂ ಇದ್ದು ಹಲವು ರೀತಿಯಿಂದ ಒತ್ತಡವನ್ನು ಅನುಭವಿಸುವ ಕಾಲ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಲೇ ಬೇಕು. ಕುಜ ಮಕ್ಕಳ ವಿಷಯದಲ್ಲಿ ಮನಸ್ಸಿಗೆ ಬೇಸರವನ್ನು ಕೊಡುತ್ತಿರುತ್ತಾನೆ. ಜವಾಬ್ಧಾರಿ ಜೇವನದಲ್ಲಿ ಹೆಚ್ಚಾಗುವ ಕಾಲ. ಬಡ್ತಿ ಹೊಂದುವ ಕಾಲ .ವ್ಯಾಪಾರ, ವ್ಯವಹಾರ , ವಿಸ್ತರಣೆ ಮಾಡುವ ಕಾಲ. ಯೋಚಿಸಿ ಮುನ್ನೆಡಿಯಿರಿ, shares ಗಳಲ್ಲಿ ಹಣ ತೊಡಗಿಸುವ ಮೊದಲು ಯೋಚನೆಯಿರಲಿ
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನುಮಾಡಿ ಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನುತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನುತಿಳಿಸಲಾಗುವುದು. ವಾಸ್ತು ಸಲಹೆ /ಜಾತಕ ಹೊಂದಾಣಿಕೆ ಮಾಡಿ ನೋಡಲಾಗುವುದು.












































