ಕಾರ್ಕಳ: ಅಜೆಕಾರು ಹೆನ್ರಿ ಡಿಸೋಜ ಅವರ ಎಟಿ ಎಂ ಕಾರ್ಡ್ ಅನ್ನು ಬದಲಾಯಿಸಿ ಒಂದು ಲಕ್ಷ ರೂಪಾಯಿ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜೆಕಾರು ಪೋಲೀಸರು ಪ್ರಕರಣವನ್ನು ಭೇದಿಸಿ ಅಂತರರಾಜ್ಯ ಕುಖ್ಯಾತ ಕಳ್ಳರನ್ನು 3 ಕಳ್ಳರನ್ನು ಅಜೆಕಾರು ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಜೆಕಾರು ಪೋಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಮಹಾರಾಷ್ಟ್ರ ದ ಸೋಲಾಪುರ ದ ಕೇದಾರನಾಥ ನಗರದ ಶ್ರವಣ್ ಸತೀಶ ಮಿನಜಗಿ, (27), ಸೋಲಾಪುರ ತಾಲೂಕಿನ ಕುಮ್ಮಾ ನಗರ ದ ಇಂದಿರಾ ನಗರದ ಪ್ರದೀಪ ಮಾರುತಿ ಇಂಗ್ಲೆ, (27), ಪುಣೆ ಜಿಲ್ಲೆಯ ಇಂದಾಪುರ ತಾಲೂಕಿನ ವನಗಲ್ಲಿಯ ಕಿರಣ್ ಬಾಲು ಚೌಹಾನ್, (28), ಎಂಬವರನ್ನು ಪೋಲೀಸರು ಬಂಧಿಸಿದ್ದಾರೆ. ನಾಲ್ಕನೆ ಅರೋಪಿ ಪತ್ತೆಗಾಗಿ ಅಜೆಕಾರು ಪೋಲೀಸರು ಬಲೆಬೀಸಿದ್ದಾರೆ. ಈ ಮೂರವರು ಕಳ್ಳರ ಮೇಲೆ ಹೆಚ್ಚು ವಿವಿಧ ಠಾಣೆಗಳಲ್ಲಿ 70 ಕ್ಕೂಪ್ರಕರಣ ದಾಖಲಾಗಿದೆ
ಅಜೆಕಾರು ಪೊಲೀಸ್ ಠಾಣೆಯ ಪಿಎಸ್ಐ ಶುಭಕರ, ಸಿಬ್ಬಂದಿಯವರೊಂದಿಗೆ ಮಂಗಳ ವಾರ ಮರ್ಣೆ ಗ್ರಾಮದ ಕಾಡುಹೊಳೆ ಪೊಲೀಸ್ ಚೆಕ್ಪೋಸ್ಟ್ ಬಳಿ ತಪಾಸಣೆ ನಡೆಸುತಿದ್ದ ವೇಳೆ ಆರೋಪಿಗಳು ಸಿಕ್ಕಿ ಬಿದ್ದಿದ್ದು , ಆರೋಪಿ ಗಳಿಂದ ಕೃತ್ಯಕ್ಕೆ ಬಳಸಿದ 4,00,000 ಮೌಲ್ಯದ ಕಾರು , ಮೊಬೈಲ್ ಫೋನ್ಗಳು-3. ವಿವಿಧ ಬ್ಯಾಂಕ್ಗಳ ಒಟ್ಟು 52 ಎಟಿಎಮ್ ಕಾರ್ಡ್ಗಳು-52 ಸೇರಿದಂತೆ ಒಟ್ಟು 485000 ಮೌಲ್ಯದ ವಸ್ತುಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣಧ ಹಿನ್ನೆಲೆ:
ಸೆ.16 ರಂದು ಸಂಜೆ ಬೊಂಡುಕುಮೇರಿ ನಿವಾಸಿ ಹೆನ್ರಿ ನ ಡಿ’ಸೋಜಾ ಅಜೆಕಾರು ಪೇಟೆಯಲ್ಲಿರುವ ಎಟಿಎಂ ನಿಂದ ಹಣ ಡ್ರಾ ಮಾಡಲು ಬಂದಾಗ ಅವರ ಬೇರೆಡೆ ಗಮನವನ್ನು ಸೆಳೆದು ಮೋಸದಿಂದ ಅವರ ಎಟಿಎಮ್ ಕಾರ್ಡನ್ನು ಬದಲಾವಣೆ ಮಾಡಿ ಅವರಿಗೆ ಬೇರೆ ಕಾರ್ಡ್ ಕೊಟ್ಟು, ಅವರ ಕಾರ್ಡ್ ನಿಂದ ಕಾರ್ಕಳದ ಎಟಿಎಮ್ ನಲ್ಲಿ 1 ಲಕ್ಷ ರೂಪಾಯಿಯನ್ನು ಡ್ರಾ ಮಾಡಿದ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಂಗಳವಾರವು ಕಾರ್ಕಳ ತಾಲೂಕಿನ ಜೋಡುರಸ್ತೆಯ ಎಟಿಎಂ ನಲ್ಲಿಯು ಹಣ ಎಗರಿಸಿದ ಎರಡನೆ ಪ್ರಕರಣವು ದಾಖಲಾಗಿತ್ತು.
ಯುವ ಸಮುದಾಯ ಎತ್ತ ಸಾಗುತ್ತಿದ್ದಾರೆ?
ಕಾರ್ಕಳ: ಎ.ಟಿ ಎಂ ಕಾರ್ಡ್ ವಂಚನೆಯಲ್ಲಿ ಪೊಲೀಸರಿಂದ ಬಂಧನಕ್ಕೊಳಗಾದ ಕುಖ್ಯಾತ ಕಳ್ಳರೆಲ್ಲರೂ 25-28 ವಯಸ್ಸಿನ ಯುವಕರು.ಇವರೆಲ್ಲರೂ ಅಂತರರಾಜ್ಯ ಕಳ್ಳರಾಗಿದ್ದು, ವಿವಿಧ ಠಾಣೆಗಳಲ್ಲಿ ಒಟ್ಟು 70 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಇವರೆಲ್ಲರೂ ಈ ಹಿಂದಿನ ಪ್ರಲರಣಗಳಲ್ಲಿ ಜಾಮೀನಿನ ಮೆಲೆ ಬಿಡುಗಡೆ ಗೊಂಡು ಮತ್ತೆ ಈ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಇವರ ತಂತ್ರಜ್ಞಾನ ಶಿಕ್ಷಣ ಪಡೆದವರು ಅಲ್ಲ. ಓರ್ವ ಇಂತಹದೇ ಕೇಸಿನಲ್ಲಿ ಸಿಲುಕಿ ಜೈಲು ಪಾಲಾಗಿ ಒಂದು ತಿಂಗಳ ಹಿಂದೆಯಷ್ಟೇ ಹೊರ ಬಂದಿದ್ದ. ಮತ್ತೊಬ್ಬ ಕೂಲಿ ಕಾರ್ಮಿಕ, ಇನ್ನೊಬ್ಬ ಚಾಲಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದನು.
ಇದೇ ತಂಡದಲ್ಲಿ ಇನ್ನಷ್ಟು ಮಂದಿ ಒಳಗೊಂಡಿದ್ದು, ಇಂತಹದೇ ಕೃತ್ಯ ಎಸಗಿ ಧಣಿಕರಾಗುವ ಕನಸ್ಸುಕಂಡ ಧನದಾಹಿಗಳಾಗಿರಬೇಕು.





















